ಮಂಡ್ಯ: ಕೊರೊನಾದಿಂದ ಬದುಕಿಗೊಂದಿಷ್ಟು ಶಿಸ್ತು ಬಂದಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಕೋವಿಡ್-19ನಿಂದ ದೂರ ಉಳಿ ಯುವ ಅಗತ್ಯವಿದೆ ಎಂದು ಸಾಹಿತಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ತಿಳಿಸಿದರು.
ನಗರದ ಗುರುಶ್ರೀ ಚಿತ್ರಮಂದಿರದ ಕೆಲಸಗಾರರಿಗೆ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ದಿನಸಿ ಕಿಟ್ ವಿತರಿಸಿ ಮಾತನಾಡಿ, ಸ್ವಚ್ಛತೆಗೆ ಹೆಚ್ಚಿನ ಗಮನ ಹೆಚ್ಚು ಗಮನ ಹರಿಸಬೇಕೆಂಬುದು ಕೊರೊನಾ ಕಲಿಸಿಕೊಟ್ಟಿದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಒಂದಷ್ಟು ಶುಭ್ರತೆಯನ್ನು ಅಳವಡಿಸಿಕೊಂಡಲ್ಲಿ ಇಂತಹ ಕಾಯಿಲೆಗಳಿಂದ ದೂರ ಉಳಿಯಬಹುದು.
ಸದಾ ಮನರಂಜನೆ ನೀಡುತ್ತಿದ್ದ ಚಿತ್ರಮಂದಿರಗಳು ಕೊರೊನಾ ಲಾಕ್‌ಡೌನ್ ನಿಂದಾಗಿ ಸಂಕಷ್ಟದಿಂದ ಪರಿತಪಿಸುತ್ತಿವೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ನೌಕ ರರು ಸಂಕಷ್ಟ ಎದುರಿಸುವಂತಾಗಿದೆ.ಇಂತ ಹ ಸಂದರ್ಭದಲ್ಲಿ ಪ್ರತಿಭಾಂಜಲಿ ಅಕಾ ಡೆಮಿ ಕಾರ್ಯಕರ್ತರು ನೊಂದವರ ನೆರವಿಗೆ ಧಾವಿಸಿರುವುದು ಶ್ಲಾಘನೀಯ ಎಂದರು.
ಡಾ. ಸತ್ಯನಾರಾಯಣ ಮಾತನಾಡಿ, ಎಲ್ಲ ಕಾಯಿಲೆಗಳಂತೆ ಕೊರೊನಾ ಒಂದು. ಹಾಗೆಯೇ ಅದರೊಂದಿಗೆ ಜೀವನ ನಡೆಸುವುದನ್ನು ಕಲಿಯಬೇಕಿದೆ. ಸ್ವಲ್ಪ ಮಟ್ಟಿಗೆ ಎಚ್ಚರವನ್ನೂ ಇಟ್ಟುಕೊಳ್ಳುವುದು ಅಗತ್ಯ. ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ವಚ್ಛಗೊಳಿಸಿ, ಮಾಸ್ಕ್ ಧರಿಸಬೇಕು. ಆಗ ಎಂತಹ ಕಾಯಿಲೆ ಯಿಂದಲೂ ಪಾರಾಗ ಬಹುದು ಎಂದು ಹೇಳಿದರು.
ಪ್ರತಿಭಾಂಜಲಿ ಅಕಾಡೆಮಿ ಅಧ್ಯಕ್ಷ ಪ್ರತಿಭಾಂಜಲಿ ಡೇವಿಡ್, ಕಾರ್ಯಕರ್ತರಾದ ಅಮೂಲ್ಯ, ಅಂಥೋಣಿ ಜೋಸೆಫ್ ಇತರರಿದ್ದರು.