Advertisement

ಭಾರತದ ವಿಮಾನ ನಿರಾಕರಿಸಿದ ಮಾಲ್ಡೀವ್ಸ್ ಅಧ್ಯಕ್ಷನ ನಿರ್ಧಾರದಿಂದ ಬಾಲಕನ ಪ್ರಾಣವೇ ಹೋಯ್ತು

12:33 PM Jan 21, 2024 | Team Udayavani |

ಮಾಲೆ: ಮಾಲ್ಡೀವ್ಸ್ ಸಚಿವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂಡಿನಿಂದ ಎರಡು ರಾಷ್ಟ್ರಗಳ ಸಂಬಂಧಗಳು ಅಷ್ಟಕಷ್ಟೆ ಇದರ ಪರಿಣಾಮ ಮಾಲ್ಡೀವ್ಸ್ ನಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಬೇಕಿದ್ದ ಹದಿನಾಲ್ಕು ವರ್ಷದ ಬಾಲಕನನ್ನು ಭಾರತೀಯ ವಿಮಾನದ ಮೂಲಕ ಆಸ್ಪತ್ರೆಗೆ ಸಾಗಿಸುವ ನಿರ್ಧಾರಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ನಿರಾಕರಿಸಿದ ಹಿನ್ನೆಲೆಯಲ್ಲಿ ಬಾಲಕ ಪ್ರಾಣ ಕಳೆದುಕೊಳ್ಳುವಂತಾಗಿದೆ.

Advertisement

ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯ ಸಣ್ಣ ತುಕಡಿಯನ್ನು ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾಗಿದೆ. ಅಲ್ಲಿನ ಹಿಂದಿನ ಸರ್ಕಾರದ ಮನವಿಯ ಮೇರೆಗೆ ಭಾರತವು ಸಮುದ್ರ ಭದ್ರತೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ಆದರೆ ಮೊನ್ನೆ ಮೊನ್ನೆ ನಡೆದ ಅವಹೇಳನಕಾರಿ ಘಟನೆಯ ಬಳಿಕ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಈ ಸೈನಿಕರನ್ನು ದೇಶ ತೊರೆಯುವಂತೆ ಹೇಳಿದ್ದಾರೆ. ಈ ಎಲ್ಲದರ ನಡುವೆ, ಶನಿವಾರದಂದು, ಮಾಲ್ಡೀವ್ಸ್‌ನಲ್ಲಿ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ ಏಕೆಂದರೆ ಏರ್‌ಲಿಫ್ಟ್‌ಗೆ ಭಾರತ ಒದಗಿಸಿದ ಡೋರ್ನಿಯರ್ ವಿಮಾನವನ್ನು ಬಳಸಲು ಮುಯಿಝು ಅನುಮತಿ ನೀಡಲು ನಿರಾಕರಿಸಿರುವುದೇ ಇದಕ್ಕೆ ಕಾರಣ.

ಹದಿನಾಲ್ಕು ವರ್ಷದ ಹುಡುಗ ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿಗೆ ಒಳಗಾಗಿದ್ದ, ನಂತರ ಅವನ ಸ್ಥಿತಿ ಗಂಭೀರವಾಗಿತ್ತು. ಇದರಿಂದ ಭಯಭೀತರಾದ ಕುಟುಂಬ ಬಾಲಕನನ್ನು ಗಫ್ ಅಲಿಫ್ ವಿಲ್ಲಿಂಗಿಲಿಯಲ್ಲಿರುವ ಅವರ ಮನೆಯಿಂದ ರಾಜಧಾನಿ ಮಾಲೆಗೆ ಚಿಕಿತ್ಸೆಗಾಗಿ ಕರೆದೊಯ್ಯಲು ಏರ್ ಆಂಬ್ಯುಲೆನ್ಸ್ ಅನ್ನು ವಿನಂತಿಸಿದೆ ಆದರೆ ಕುಟುಂಬಕ್ಕೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಬಾಲಕನ ತಂದೆಯಹೇಳಿಕೆಯಂತೆ “ಸ್ಟ್ರೋಕ್ ಆದ ತಕ್ಷಣ ಮಗನನ್ನು ಮಾಲೆಗೆ ಕರೆದೊಯ್ಯಲು ನಾವು ಐಲ್ಯಾಂಡ್ ಏವಿಯೇಷನ್‌ಗೆ ಕರೆ ಮಾಡಿದ್ದೇವೆ, ಆದರೆ ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಆದರೆ ಮರುದಿನ ಬೆಳಿಗ್ಗೆ 8:30 ಕ್ಕೆ ಫೋನ್‌ಗೆ ಉತ್ತರಿಸಿದರು ಕೇವಲ ಒಂದು ಏರ್ ಆಂಬ್ಯುಲೆನ್ಸ್ ಮಾತ್ರ ಇರುವುದಾಗಿ ಹೇಳಿದ್ದರು. ಇದಾದ ಬಳಿಕ ತುರ್ತು ಮನವಿಯ 16 ಗಂಟೆಗಳ ಬಳಿಕ ಬಾಲಕನನ್ನು ಮಾಲೆಗೆ ಕರೆತರಲಾಯಿತು ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಬಾಲಕನ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಮಾಲ್ಡೀವ್ಸ್ ಸಂಸದ ಮೈಕೆಲ್ ನಸೀಮ್, “ಭಾರತದ ವಿರುದ್ಧ ಹಗೆತನವನ್ನು ಪೂರೈಸಲು ನಮ್ಮ ಅಧ್ಯಕ್ಷರು ಜನರ ಪ್ರಾಣವನ್ನು ಕೊಟ್ಟು ಬೆಲೆ ತೆರಬಾರದು” ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Actor Darshan: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್‌ಗೆ ಬಿಗ್‌ ರಿಲೀಫ್

Advertisement

Udayavani is now on Telegram. Click here to join our channel and stay updated with the latest news.

Next