Advertisement
ಅವರು ಫಹದ್ ಫಾಸಿಲ್, ಸುರಾಜ್ ವೆಂಞಾರಮೂಡ್ ಅಭಿನಯದ “ತೊಂಡಿ ಮುದಲುಂ ದೃಕ್ಷಾಕ್ಷಿಗಳುಂ’ ಎಂಬಮಲಯಾಳ ಚಿತ್ರದಲ್ಲಿ ಶೇಣಿ ಎಸ್.ಐ. ಸಾಜನ್ ಮ್ಯಾಥು ಆಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೊದಲ ಸಿನೆಮಾ ಅಭಿನಯಫಹದ್, ಸೂರಜ್ ಹಾಗೂ ಅಲನ್ ಪೈಪೋಟಿಯಿಂದ ಅಭಿನಯಿಸಿದ ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಸಿನೆಮಾ ಅಭಿನ ಯದ ಯಾವುದೇ ಸಂಕೋಚಗಳಿಲ್ಲದೆ ಎಸ್.ಐ. ಪಾತ್ರ ದಲ್ಲಿ ನೈಜ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದಾರೆ ಕಾಸರ ಗೋಡು ವೆಳ್ಳರಿಕುಂಡ್‌ನ ಸಿಬಿ ಥಾಮಸ್.
ಕಾಸರಗೋಡು ಪೊಲೀಸ್ ಸ್ಟೇಷನ್ ಕೇಂದ್ರೀಕರಿಸಿ ಚಿತ್ರೀಕರಿ ಸುವ ಮಲಯಾಳ ಸಿನಿಮಾವೊಂದಕ್ಕೆ ನಟರ ಅಗತ್ಯವಿದೆ ಎಂಬ ಜಾಹಿರಾತು ಕಂಡು ಅರ್ಜಿ ಹಾಕುವಾಗ ಇಷ್ಟು ನಿರೀಕ್ಷಿಸಿರ ಲಿಲ್ಲ. ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಹಲವಾರು ಬಾರಿ ಉತ್ತಮ ನಟನಾಗಿ ಆಯ್ಕೆಯಾಗಿದ್ದೆ. ಅಭಿನಯ ತನ್ನ ಆಸಕ್ತಿಯಾ ಗಿದ್ದರೂ ಬದುಕು ಕಟ್ಟಿಕೊಟ್ಟದ್ದು ಪೊಲೀಸ್ ವೃತ್ತಿ. ಬಾಲ್ಯದಲ್ಲೇ ಅಭಿನಯದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ ುಕೊಂಡ ಕಾರಣ ಪೂರ್ಣಪ್ರಮಾಣದಲ್ಲಿ ಅಭಿನಯವನ್ನು ಕಲಿಯುವ ನಿಟ್ಟಿನಲ್ಲಿ ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನ ಪ್ರವೇಶ ಪರೀಕ್ಷೆ ಪಾಸಾಗಿದ್ದರೂ ಮೌಖೀಕ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ಅವಕಾಶವನ್ನು ಕಳೆದುಕೊಂಡೆ ಎನ್ನುತ್ತಾರೆ ಥಾಮಸ್ . ಆಡಿಶನ್‌ನಲ್ಲಿ ಆಯ್ಕೆಯಾದ 25 ಮಂದಿಯಲ್ಲಿ ಒಬ್ಬರಾಗಿದ್ದ ಸಿಬಿ ಥಾಮಸ್ ಆಡಿಶನ್ ಕಳೆದ ಮೂರೇ ದಿನಗಳಲ್ಲಿ ಸಿನೆಮಾದಲ್ಲಿ ಪ್ರಧಾನ ಪಾತ್ರವನ್ನೇ ಗಿಟ್ಟಿಸಿಕೊಂಡರು. ನೈಜತೆಯಿಂದ ಕೂಡಿದ ಪೊಲೀಸ್ ಸ್ಟೇಷನ್ ಹಾಗೂ ಪೊಲೀಸ್ ಉದ್ಯೋಗಸ್ಥರು ಈ ಕತೆಯ ಪಾತ್ರಗಳೆಂದು ಮೊದಲೇ ಸೂಚನೆ ಸಿಕ್ಕಿತ್ತು. ದೊಡ್ಡ ನಿರೀಕ್ಷೆಗಳಿಲ್ಲದೆಯೇ ಆಡಿಶನ್ ಪೂರ್ತಿಗೊಳಿಸಿದ ಸಿಬಿ ಥಾಮಸ್ ಮುಂದೆ ಸುಮಾರು 20ಕ್ಕಿಂತಲೂ ಹೆಚ್ಚು ದೃಶ್ಯಗಳಲ್ಲಿ ಅಭಿನಯಿಸುವ ಭಾಗ್ಯವನ್ನು ಪಡೆದುಕೊಂಡರು. “ಯಾವುದೇ ಭಯವಿಲ್ಲದೆ ಸಾಮಾನ್ಯವಾಗಿ ಸ್ಟೇಷನ್‌ನಲ್ಲಿ ಮಾಡುವುದನ್ನಷ್ಟೇ ಮಾಡಿತೋರಿಸಿದರೆ ಸಾಕು. ಅದಕ್ಕಿಂತ ಕಮ್ಮಿ ಯಾ ಹೆಚ್ಚಿನ ಅಭಿನಯ ಬೇಡ’ ಎಂಬ ನಿರ್ದೇಶಕರಾದ ದಿಲೀಶ್ ಪೋತನ್‌ರವರ ಮಾತುಗಳಂತೆ ನೈಜ ಅಭಿನಯದಿಂದ ಕಥಾಪಾತ್ರಕ್ಕೆ ಜೀವತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ದಿಲೀಶ್ “ಮಹೇಶೀಂಡೆ ಪ್ರತೀಕಾರಂ’ ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಜನಪ್ರಿಯ ಚಿತ್ರವನ್ನು ನಿರ್ದೇಶಿಸಿದ್ದಾರೆ.
Related Articles
ಜಿಲ್ಲಾ ಪೊಲೀಸ್ ಆಫೀಸರ್‌ರಿಂದ 11 ದಿವಸಗಳ ರಜೆ ಪಡೆದು ಸಿ.ಐ.ಯ ಯೂನಿಫಾರಂ ತೆಗೆದಿಟ್ಟು ಎಸ್.ಐ.ಯ ಯೂನೀಫಾರಂ ಧರಿಸಿದರು ಸಿಬಿ ಥಾಮಸ್ . ಶೇಣಿ ಜಂಕ್ಷನ್‌ನಲ್ಲಿರುವ ಕಟ್ಟಡವನ್ನು ಎರಡಂತಸ್ತಿನ ಪೊಲೀಸ್ ಸ್ಟೇಷನನ್ನಾಗಿ ಬದಲಾಯಿಸಲಾಯಿತು.
Advertisement
ಕೇರಳದ ಕೊಚ್ಚಿಯಲ್ಲಿ ಅಂತರ್ಜಾತಿ ವಿವಾಹದ ಅನಂತರ ಸೀತಾಂಗೋಳಿಗಾಗಮಿಸಿದ ದಂಪತಿಯ ಬಸ್Õ ಪ್ರಯಾಣದ ನಡುವೆ ಉಂಟಾಗುವ ಸಮಸ್ಯೆ ಶೇಣಿ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗುವುದರೊಂದಿಗೆ ಸಿನಿಮಾದ ಪ್ರಧಾನ ಕಥೆ ಪ್ರಾರಂಭವಾಗುತ್ತದೆ. ಶೇಣಿಯಲ್ಲಿ ಸಿನಿಮೀಯ ಮಾದರಿ ಯಲ್ಲಿ ನಿರ್ಮಿಸಿದ ಪೊಲೀಸ್ ಠಾಣೆ ನಿಜವಾಗಿಯೂ ಅಲ್ಲಿದೆ ಎನ್ನುವಷ್ಟು ನೈಜತೆಯಿಂದ ಕೂಡಿದೆ.
ಕಾಳಜಿ ಮತ್ತು ಆಸಕ್ತಿಯ ಫಲ ದಿಲೀಶ್ ಪೋತನ್ ಹಾಗೂ ತಂಡವನ್ನು ಕಂಡಾಗ ಪೊಲೀಸರ ಬಗ್ಗೆ ಸರಿಯಾಗಿ ಕಲಿತು ಶೂಟಿಂಗ್‌ಗೆ ಬಂದಂತೆ ಕಾಣುತ್ತಿತ್ತು. ಹಾಗೆಯೇ ಚಿತ್ರೀಕರಣಕ್ಕಿರುವ ಸ್ಥಳಕ್ಕೆ ರಹಸ್ಯವಾಗಿ ಭೇಟಿಯಿತ್ತ ಮೇಲಷ್ಟೇ ಕಥೆಯನ್ನು ಪೂರ್ತಿಗೊಳಿಸಲಾಯಿತು ಎಂದೂ ಕೇಳಿದ್ದೇನೆ. ಅಷ್ಟೊಂದು ಕಾಳಜಿ ಹಾಗೂ ಆಸಕ್ತಿಯ ಫಲ ಪ್ರತಿಯೊಂದು ಸೀನ್‌ಗಳಲ್ಲೂ ಕಾಣುತ್ತಿತ್ತು ಎನ್ನವುದು ಸಿಬಿಯವರ ಅನುಭವದ ಮಾತು. ಕಳ್ಳನನ್ನು ಹಿಡಿದು ಅವರಿಂದ ಸತ್ಯವನ್ನು ಹೊರಗೆಳೆಯುವುದು ಒಂದು ಸಾಹಸವೇ ಸರಿ. ಕೆಲವರು ಬೇಗನೆ ತಪೊ³ಪ್ಪಿಕೊಂಡರೆ ಇನ್ನು ಕೆಲವು ಬುದ್ದಿವಂತರು ಏನೇನೂ ಮಾಡಿದರೂ ಬಾಯಿಬಿಡದೆ ಕೈಗೆ ಕೆಲಸಕೊಡುವುದಿದೆ. ಹಾಗಾಗಿ ಈ ಚಿತ್ರದಲ್ಲೂ ಕಳ್ಳನನ್ನು ವಿಚಾರಿಸುವ ಅಪರೂಪದ ದೃಶ್ಯಗಳನ್ನು ಕಾಣಬಹುದು. ಸಿಬಿ ಥೋಮಸ್ ಜತೆಯಲ್ಲಿ ಆದೂರು ಪೊಲೀಸ್ ಠಾಣೆಯ ಹಲವಾರು ಪೊಲೀಸರನು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹಳ್ಳಿಯ ಸೊಗಡು: ಚಿತ್ರದುದಕ್ಕೂ ಪ್ರೇಕ್ಷಕರನ್ನು ಸೆರೆಹಿಡಿ ಯುವ ಗ್ರಾಮೀಣ ಸೊಗಡು ಕಾಸರಗೋಡಿನ ಕುಂಬಳೆ, ಎಣ್ಮಕಜೆ, ಶೇಣಿ, ಸಿತಾಂಗೋಳಿ ಮುಂತಾದ ಪ್ರದೇಶಗಳಿಂದ ಸೆರೆಯಾದ ಪ್ರಾಕೃತಿಕ ಸೌಂದರ್ಯ. ಪರಿಸರದ ಶಾಲೆ, ಮಸೀದಿ, ದೇವಸ್ಥಾನ ಮುಂತಾದ ದೃಶ್ಯಗಳು ಹಾಗೂ ನೈಜ ಅಭಿನಯದೊಂದಿಗೆ ಆಕಸ್ಮಿಕ ಘಟನೆಗಳು, ಕ್ರೌರ್ಯ, ಹಾಸ್ಯ, ವಿಡಂಬನೆ ಎಲ್ಲವನ್ನೂ ಒಳಗೊಂಡ ಉತ್ತಮ ಚಿತ್ರ. ಮುಖ್ಯಮಂತ್ರಿ ಸೇವಾ ಪದಕ ಪುರಸ್ಕೃತ
ಜೀವನದಲ್ಲಿ ಕಾಸರಗೋಡು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಉತ್ತಮ ಸೇವೆಗಾಗಿ ಮುಖ್ಯ ಮಂತ್ರಿಗಳ ಸೇವಾ ಪದಕ, ಅಪರಾಧ ಅನ್ವೇಷಣಾ ಪರಿಣತಿಗಿರುವ ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಎಕ್ಷಲೆನ್ಸ್ ಬೇಡ್ಜ್ ಪಡೆದಿರುವ ಸಿಬಿ ಥಾಮಸ್ ಅವರಿಗೆ ಬೆಂಬಲವಾಗಿ ಪತ್ನಿ ಮೋಳಿ, ಮಕ್ಕಳಾದ ಕೆಲನ್, ಕರೋಳಿ, ಎಡ್ವಿನ್ ಹಾಗೂ ಕುಟುಂಬದವರು ಸದಾ ಜತೆಗಿದ್ದಾರೆ. ಎಲೆಮರೆಯ ಕಾಯಿಯಂತಿದ್ದ ಈ ಕಲಾವಿದನ ಕಲೆ ಅನಿರೀ ಕ್ಷಿತ ಅವಕಾಶದ ಮೂಲಕ ಹೊರಪ್ರಪಂಚಕ್ಕೆ ತೆರೆದುಕೊಂಡು ಜನಮನ್ನಣೆಗಳಿಸಿದೆ. ಇನ್ನು ಮುಂದೆಯೂ ಹಲವಾರು ಅವಕಾಶಗಳು ಒದಗಿ ಬರಲಿ. ಕಲಾವಿದನಲ್ಲಿ ಅಸ್ತಂಗತವಾಗಿರುವ ಕಲೆ ಅರಳಿ ಪರಿಮಳಿಸಲಿ. – ಅಖೀಲೇಶ್ ನಗುಮುಗಂ