Advertisement

ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ

02:19 PM Oct 26, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಶ್ಯಾನಡ್ರಹಳ್ಳಿ ಕೆರೆಗೆ ಸೋಮವಾರದಿಂದಲೇ ನೀರು ಬಿಡುವಂತೆ ನೀರಾವರಿ ಇಲಾಖೆ ಎಂಜಿನಿಯರ್‌ಗೆ ಶಾಸಕ ಸಿ. ಎಸ್‌.ನಿರಂಜನಕುಮಾರ್‌ ಸೂಚನೆ ನೀಡಿದರು.

Advertisement

ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶ್ಯಾನಡ್ರಹಳ್ಳಿ ಗ್ರಾಮಸ್ಥರು ಮಾತನಾಡಿ, ಕಳೆದ ವರ್ಷವೇ ಕೆರೆಗೆ ನೀರು ತುಂಬಿಸುವ ಭರವಸೆ ಇತ್ತು. ಆದರೆ ನಾನಾ ಕಾರಣದಿಂದ ವಂಚಿತವಾಗಿದೆ. ಪ್ರಸ್ತುತ ಬಲಚವಾಡಿ ಕೆರೆ ತುಂಬಿ ಕೋಡಿ ಬೀಳುವ ಹಂತ ತಲುಪಿರುವ ಹಿನ್ನೆಲೆ ಶ್ಯಾನಡ್ರಹಳ್ಳಿ ಕೆರೆಗೂ ನೀರು ಬಿಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ದೂರವಾಣಿ ಮೂಲಕ ನೀರಾವರಿ ಇಲಾಖೆ ಎಂಜಿನಿಯರ್‌ ಜತೆ ಮಾತನಾಡಿ, ಇಂದಿನಿಂದಲೇ ಕೆರೆಗೆ ನೀರು ಹರಿಸಬೇಕು. ಎಲ್ಲಾ ಕೆರೆಗಳು ಪೂರ್ತಿ ತುಂಬುವ ತನಕ ಕಾಯುವುದು ಬೇಡ. ಶೇ.75 ರಷ್ಟು ಭಾಗ ತುಂಬಿದರೆ ಮುಂದಿನ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದರು.

ಸಾಲ ನೀಡಿ: ಶಿವಪುರ ಆದಿ ಜಾಂಬವ ಮಹಿಳಾ ಸ್ವ ಸಹಾಯ ಸಂಘಕ್ಕೆ ಸಾಲ ನೀಡುವಂತೆ ಗುಂಡ್ಲು  ಪೇಟೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿ ಯಾಗೆ ಹಲವು ಅರ್ಜಿ ಹಾಕಿದ್ದರೂ ಮ್ಯಾನೇ ಜರ್‌ ತಿರಸ್ಕಾರ ಮಾಡುತ್ತಿದ್ದಾರೆ. ಸಾಲ ಕೊಡಿಸಿಕೊಡುವಂತೆ ಶಾಸಕರಲ್ಲಿ ಸಂಘದ ಮಹಿಳೆಯರು ಮನವಿ ಮಾಡಿದರು. ಈ ವೇಳೆ ಶಾಸಕರು, ಸಾಲ ನೀಡಲು ಅಗತ್ಯವಾಗಿ ಬೇಕಾದ ದಾಖಲೆ ಪರಿಶೀಲನೆ ನಡೆಸಿ ಶೀಘ್ರ ಸಾಲ ಮಂಜೂರು ಮಾಡುವಂತೆ ಬ್ಯಾಂಕ್‌ ಮ್ಯಾನೇಜರ್‌ಗೆ ತಿಳಿಸಿದರು.

ವಾಟರ್‌ವೆುನ್‌ ಬದಲಾಯಿಸಿ: ಮನೆ ನಿರ್ಮಾಣ ಕುರಿತು ಪರಮಾಪುರ ಗ್ರಾಮದ ಪರಶಿವಮೂರ್ತಿ ಅರ್ಜಿ ಸಲ್ಲಿಸಿದರು. ಆರ್‌ ಟಿಸಿಯಲ್ಲಿ ಹೆಸರು ಬದಲಾವಣೆಯಾಗಿದ್ದು, ಸರಿಪಡಿಸುವಂತೆ ಇಂಗಲವಾಡಿ ಗ್ರಾಮದ ರೈತ ಮನವಿ ಮಾಡಿದರು. ಜಮೀನು ಖಾತೆ ಕೋರಿ ಚಿಕ್ಕಾಟಿ ರೈತ ತಿಳಿಸಿದರು. ಸಾಗುವಳಿ ನೀಡುವಂತೆ ಒಣಕನಪುರ ರೈತ ಕೋರಿದರು. ಮಲ್ಲಯ್ಯನ  ಪುರ ವಾಟರ್‌ವೆುನ್‌ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ ಬದಲಾವಣೆಗೆ ಒತ್ತಾಯಿಸಿದರು.

Advertisement

ಅಂಗನವಾಡಿ ಸಹಾಯಕಿ ಕೆಲಸಕ್ಕೆ ವೈಯಕ್ತಿಕ ಸಮಸ್ಯೆಯಿಂದ 6 ತಿಂಗಳು ಗೈರಾದ ಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಆ ಸ್ಥಾನಕ್ಕೆ ಯಾರೂ ಇಲ್ಲದ ಕಾರಣ ಮತ್ತೆ ಸಹಾಯಕಿ ಹುದ್ದೆ ನೀಡುವಂತೆ ಸೀಗೆವಾಡಿ ಗ್ರಾಮದ ಮಹಿಳೆ ಮನವಿ ನೀಡಿದರು.

ಸ್ಪಂದಿಸಿ: ಸಾರ್ವಜನಿಕರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಕಳೆದ ಸಭೆಯಲ್ಲಿ ಸೂಚನೆ ನೀಡಿದ ಕೆಲಸವನ್ನು ಇಲಾಖೆ ಅಧಿಕಾರಿಗಳು ಬಗೆ ಹರಿಸಲು ಮುಂದಾಗುತ್ತಿಲ್ಲ. ಸಾರ್ವಜನಿಕರು ಯಾವುದೇ ದೂರು ತಂದರೂ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ ಸಿ.ಜಿ.ರವಿಶಂಕರ್‌, ತಾಪಂ ಇಒ ಶ್ರೀಕಂಠರಾಜೇಅರಸ್‌, ಪಿಡಬ್ಲ್ಯುಡಿ ಇಲಾಖೆ ರವಿಕುಮಾರ್‌, ಬಿಸಿಯೂಟ ಮಂಜಣ್ಣ, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಜಯಕುಮಾರ್‌, ಸರ್ವೇ ಇಲಾಖೆ ರಮೇಶ್‌ ನಾಯಕ, ಕುಡಿಯುವ ನೀರುಸರಬರಾಜು ಇಲಾಖೆ ಪಲ್ಲವಿ, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ ಕುಮಾರ್‌, ಆರ್‌ಐ ರವಿಕುಮಾರ್‌, ಶ್ರೀನಿವಾಸ್‌, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next