Advertisement

ಲಾಭದಾಯಕ ಕೆಲಸವನ್ನು ಬಿಟ್ಟು ಶಿಕ್ಷಣ ಕ್ರಾಂತಿಗೆ ನಿಂತ ಶುವಜಿತ್‌ ಪೇನ್‌

06:53 PM Sep 03, 2020 | Karthik A |

ನಿಜವಾದ ಸಂತೋಷ, ಸುಖ, ನೆಮ್ಮದಿ ಎಲ್ಲಿ? ಯಾವಾಗ? ಸಿಗುತ್ತೆ! ಸಂತಸ, ಸುಖ, ನೆಮ್ಮದಿಯ ಬದುಕು ಅಂದ್ರೆ ಯಾವುದು?

Advertisement

ಲಕ್ಷಗಟ್ಟಲೆ ಸಂಬಳವನ್ನು ಪಡೆಯುವ ಕೆಲಸದಲ್ಲಿ ಅವುಗಳೆಲ್ಲಾ ಇವೆಯಾ..?

ವಿದೇಶದಲ್ಲಿ ನೌಕರಿಗಿಟ್ಟಿಸಿಕೊಂಡರೆ ಆರಾಮಾಗಿ ಇರ್ತೀವಾ..?

ಈ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರಗಳನ್ನು ಕೊಡ ಬಹುದು..! ಆದರೆ, ವಿದೇಶದಲ್ಲಿನ ಕೆಲಸ, ಒಳ್ಳೆಯ ಸಂಬಳವನ್ನೆಲ್ಲ ಬಿಟ್ಟು ಸಮಾಜಮುಖೀ ಕೆಲಸದಲ್ಲಿ ತೊಡಗಿಸಿಕೊಂಡ ಕೆಲವರು ಎಲ್ಲರಿಗೂ ಮಾದರಿಯಾಗಿ ನಿಲುತ್ತಾರೆ.

ಶುವಜಿತ್‌ ಪೇನ್‌ ಮೂಲತ: ಕೋಲ್ಕತ್ತದವರಾಗಿರುವ ಇವರು ಇಲ್ಲಿನ ಪ್ರತಿಷ್ಠಿತ ಕಾಲೇಜ್‌ ಒಂದರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪೂರೈಸಿ ಅನಂತರ ಲಕ್ನೋದ ಐಐಎಂನಲ್ಲಿ ಫೈನೆನ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌ ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆಯುತ್ತಾರೆ.

Advertisement

ಅದೃಷ್ಟವಶಾತ್‌ ಲಂಡನ್‌ನಲ್ಲಿ ಅವರಿಗೆ ಕೈತುಂಬಾ ಸಂಬಳ ಸಿಗುವ ಕೆಲಸವೂ ದೊರೆಯುತ್ತದೆ. ಆದರೆ ಕೆಲವರಿಗೆ ಆತ್ಮ ತೃಪ್ತಿ, ನೆಮ್ಮದಿ ಅನ್ನುವುದು ದುಡ್ಡಿನಲ್ಲಿ ಇದ್ದರೆ ಮತ್ತೂ ಹಲವರಿಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೊರೆಯುತ್ತದೆ. ಶುವಜಿತ್‌ ಅವರಿಗೂ ಇಂತಹದೇ ಒಂದು ಭಾವನೆ ಕಾಡ ತೊಡಗಿದ್ದು, ವೃತ್ತಿ ಕ್ಷೇತ್ರಕ್ಕೂ ಹೊರತಾಗಿ ನಾನು ಏನಾದರೂ ಸಾಧಿಸಬೇಕೆಂಬ ಹಂಬಲ ಬಂದಿದೆ.

ನಾನು ಕಲಿತ ವಿದ್ಯೆ ಕೆಲಸದಿಂದ ಮಾತ್ರ ಪರಿಪೂರ್ಣವಾಗದೂ, ಇದರ ಹೊರತಾಗಿ ನಾನೇನದರೂ ಒಳ್ಳೆಯ ಕೆಲಸವನ್ನು ಮಾಡಿದರೆ ಮಾತ್ರ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದು ಇದ್ದ ಉದ್ಯೋಗವನ್ನು ಬಿಟ್ಟು, ಲಂಡನ್‌ನಿಂದ ತಾಯ್ನಾಡಿಗೆ ಮರಳುತ್ತಾರೆ.

“ಸ್ವಾವಲಂಭಿ ಗ್ರಾಮೀಣ ಭಾರತ’
ಮಧ್ಯಮ ಕುಟುಂಬದ ಹಿನ್ನೆಲೆ ಇರುವ ಶುವಜಿತ್‌ಗೆ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದ ಆಸೆ ಮೊದಲಿನಿಂದಲೂ ಇತ್ತು. ಅಲ್ಲದೇ ರೈತ ಕುಟುಂಬದವರಾದ ಶುವಜಿತ್‌ ಮುಂದೆ ಕೃಷಿ ಕ್ಷೇತ್ರದಲ್ಲಿ ತೊಡಗಿರುವವರನ್ನು ಸಮಾಜದ ಮುನ್ನೆಲೆಗೆ ತರಬೇಕೆಂಬ ಕನಸನ್ನು ಕಂಡಿದ್ದರು. ಆ ಇರಾದೆಯಿಂದಲೇ ಹುಟ್ಟಿಕೊಂಡಿದೇ ಸ್ವಾವಲಂಬಿ ಗ್ರಾಮೀಣ ಭಾರತದ ಹಾಗೂ ರೈತರ ಕಲ್ಯಾಣದ ಕನಸು. ಈ ಕಾರಣಕ್ಕಾಗಿಯೇ ಕೈತುಂಬಾ ಸಂಬಳ ಬರುತ್ತಿದ್ದ ಹುದ್ದೆಯನ್ನು ಬಿಟ್ಟು ಲಂಡನ್‌ಲ್ಲಿನ ಕೆಲಸವನ್ನು ಬಿಟ್ಟು ಭಾರತಕ್ಕೆ ಬಂದಿದ್ದು, ಇವರು ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಾ ಇದ್ದಾರೆ.

ಹಳ್ಳಿ ಮಕ್ಕಳಿಗೆ ವಿದ್ಯಾಭ್ಯಾಸ
ರೈತರ ಕಲ್ಯಾಣದ ಕನಸು ಕಂಡಿದ್ದ ಶುವಜಿತ್‌ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಪಾಗಿಟ್ಟಿದ್ದು, ಸದ್ಯ ಹಳ್ಳಿ ಮಕ್ಕಳಿಂದ ಹಿಡಿದು ರೈತರಿಗೂ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. 50 ಅನೌಪಚಾರಿಕ ಸಮುದಾಯ ಶಾಲೆಗಳ ಪಠ್ಯಕ್ರಮ ಮತ್ತು ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಹೊತ್ತಿರುವ ಇವರು ಸುಮಾರು 3 ಸಾವಿರಕ್ಕೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ ರಾಜಸ್ಥಾನದ ಟಿಲೋನಿಯಾ ಗ್ರಾಮದಲ್ಲಿ ಶಿಕ್ಷನಿಕೇತನ ಎಂಬ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ ಆ ಗ್ರಾಮದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಕಾರ್ಯಾನಿರತರಾಗಿದ್ದಾರೆ.

ಸುಶ್ಮಿತಾ,  ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next