Advertisement

Shutter Box: ಈಶಾನ್ಯದಲ್ಲಿ ಕರಾವಳಿ ಪ್ರವಾಸೋದ್ಯಮ ಪ್ರಚಾರ

06:45 PM Oct 14, 2024 | Team Udayavani |

ಕಾಪು: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮತ್ತು ವಿವಿಧ ಮಾನವೀಯ ಸೇವಾ ಕಾರ್ಯಗಳ ಮೂಲಕವಾಗಿ ಗುರುತಿಸಲ್ಪಡುತ್ತಿರುವ ಶಟರ್‌ ಬಾಕ್ಸ್‌ ಖ್ಯಾತಿಯ ಕಾಪುವಿನ ಸಚಿನ್‌ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ ಅವರು ಕರಾವಳಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪರಂಪರೆಯನ್ನು ಎಲ್ಲೆಡೆ ಪ್ರಚಾರ ಉದ್ದೇಶದೊಂದಿಗೆ ಸುಜುಕಿ ಜಿಮ್ನಿ ವಾಹನದಲ್ಲಿ ಈಶಾನ್ಯ ರಾಜ್ಯಗಳಿಗೆ 45 ದಿನಗಳ ಪ್ರವಾಸ ಹೊರಟಿದ್ದಾರೆ.

Advertisement

ಕಳೆದ ವಾರದ ಕಾಪು ಹೊಸ ಮಾರಿಗುಡಿಯಲ್ಲಿ ಸಚಿನ್‌ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ ಅವರನ್ನು ಬೀಳ್ಕೊಡಲಾಗಿದೆ. ಅವರೀಗ ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದಾರೆ.

14,000 ಕಿ.ಮೀ. ಸಂಚಾರ
45 ದಿನಗಳ ಕಾಲ 17 ರಾಜ್ಯಗಳಲ್ಲಿ ಸುಮಾರು 14,000 ಕಿ.ಮೀ. ಸಂಚರಿಸ ಲಿರುವ ಇವರು ಕರ್ನಾಟಕ, ಆಂಧ್ರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಲ, ಮೇಘಾಲಯ, ತ್ರಿಪುರ, ಮಿಝೋರಾಮ್‌, ಮಣಿಪುರ, ನಾಗಲ್ಯಾಂಡ್‌, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಗೋವಾ ಮಾರ್ಗವಾಗಿ ಮತ್ತು ಕರ್ನಾಟಕಕ್ಕೆ ಮರಳಲಿದ್ದಾರೆ.

ತಮ್ಮ ಪ್ರವಾಸದ ವೇಳೆ ಈಶಾನ್ಯ ರಾಜ್ಯಗಳೂ ಸೇರಿದಂತೆ ತಾವು ಸಂಚರಿಸುವ ಪ್ರದೇಶಗಳ ಜನರೊಂದಿಗಿನ ಮಾತುಕತೆ, ಅಧ್ಯಯನ ಮತ್ತು ಸಂಸ್ಕೃತಿಗಳ ಬಗ್ಗೆ ಅಲ್ಲಿಂದಲೇ ನೇರವಾಗಿ ಮಾಹಿತಿ ನೀಡಲಿದ್ದಾರೆ.

ಅಲ್ಲಿನ ಅಧ್ಯಯನ, ಇಲ್ಲಿನ ಪ್ರಚಾರ
ಈ ಮೊದಲು ಬೈಕ್‌ನಲ್ಲಿ ವಿವಿಧ ರಾಜ್ಯಗಳನ್ನು ಸಂಚರಿಸಿ ಅಲ್ಲಿನ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಈ ಬಾರಿ ರಾಜ್ಯದ ಕರಾವಳಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಬಗ್ಗೆ ಸಂಚರಿಸಲಿರುವ ಎಲ್ಲಾ ರಾಜ್ಯಗಳಲ್ಲೂ ಪ್ರಚಾರ ಮಾಡಲಿದ್ದೇವೆ. ಅತ್ಯಪೂರ್ವವಾಗಿ ಸಂಪೂರ್ಣ ಇಳಕಲ್‌ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮತ್ತು ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಬಗ್ಗೆಯೂ ವಿವಿಧ ರಾಜ್ಯಗಳ ಜನರಿಗೆ ತಿಳಿಸಲಾಗುವುದು.
-ಸಚಿನ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ

Advertisement

ವಿಶೇಷ ರೀತಿಯಲ್ಲಿ ಜೀಪ್‌ ಜೋಡಣೆ
ಈಶಾನ್ಯ ರಾಜ್ಯಗಳ ಪ್ರವಾಸಕ್ಕಾಗಿ ತಮ್ಮ ಸುಜುಕಿ ಜಿಮ್ನಿ ವಾಹನವನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ. ಈ ವಾಹನದಲ್ಲಿ ಪ್ರವಾಸದ ಸಮಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಲಾಗಿದ್ದು, ವಿಶ್ರಾಂತಿಗಾಗಿ ವಾಹನದ ಮೇಲೆ ಟೆಂಟ್‌ ಅಳವಡಿಸಲಾಗಿದೆ. ಜೀಪ್‌ನ ಹಿಂಭಾಗದಲ್ಲಿ ಅಡುಗೆಗೆ ಬೇಕಾದ ವಸ್ತುಗಳು, ಅಡುಗೆ ಸಿದ್ಧಪಡಿಸುವ ವ್ಯವಸ್ಥೆಗಳನ್ನೂ ಜೋಡಿಸಲಾಗಿದೆ. ಆದಷ್ಟು ಖರ್ಚು ಕಡಿಮೆ ಮಾಡಿಕೊಂಡು, ಪ್ರವಾಸ ನಡೆಸುವ ಉದ್ದೇಶ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next