Advertisement

ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್‌-ಜಲಸಾಹಸ ಕ್ರೀಡೆಗೆ ಚಾಲನೆ‌

06:17 PM Sep 23, 2024 | Team Udayavani |

ಉದಯವಾಣಿ ಸಮಾಚಾರ
ಜೋಯಿಡಾ: ತಾಲೂಕಿನ ಇಳವಾ ಗಣೇಶ ಗುಡಿಯಲ್ಲಿ ಮತ್ತೆ ರಾಫ್ಟಿಂಗ್‌ ಮತ್ತು ಇತರೆ ಜಲ ಸಾಹಸ ಕ್ರೀಡೆಗಳು ಪ್ರಾರಂಭವಾದ ಕಾರಣ ಸಾವಿರಾರು ಯುವಕರಿಗೆ ಮತ್ತೆ ಕೆಲಸ ಸಿಕ್ಕಂತಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಮತ್ತೆ ಪ್ರವಾಸೋದ್ಯಮ ಚಿಗುರೊಡೆದಿದೆ. ಹೌದು ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಈಗ ಮತ್ತೆ ಪ್ರಾರಂಭವಾಗಿದೆ.

Advertisement

ಜೋಯಿಡಾ ತಾಲೂಕಿನ ಗಣೇಶಗುಡಿ ಇಳವಾದಲ್ಲಿ ನಡೆಯುವ ರಾಫ್ಟಿಂಗ್‌ ಮತ್ತು ಇತರೆ ಜಲಸಾಹಸ ಕ್ರೀಡೆಗಳಿಂದ ಬಹಳಷ್ಟು ಸ್ಥಳೀಯ ಜನತೆಗೆ ಉದ್ಯಮ ಸಿಗುತ್ತಿದೆ, ಜೋಯಿಡಾ ಹಾಗೂ ದಾಂಡೇಲಿ ತಾಲೂಕಿನ ನಿರುದ್ಯೋಗಿ ಯುವಕರಿಗೆ ಇಲ್ಲಿನ ಪ್ರವಾಸೋದ್ಯಮದಿಂದ ಅನುಕೂಲವಾಗುತ್ತಿದೆ.

ಈ ಹಿಂದೆ ಜೋಯಿಡಾ ಭಾಗದ ಯುವಕರು ಕೆಲಸಕ್ಕಾಗಿ ನೆರೆಯ ಗೋವಾಕ್ಕೆ ತೆರಳುತ್ತಿದ್ದರು. ಆದರೆ ಈಗ ಇಲ್ಲಿಯ ರೆಸಾರ್ಟ್‌ ಮತ್ತು ಹೋಮ ಸ್ಟೇ ಗಳಲ್ಲಿ ಉದ್ಯೋಗರೆಯುತ್ತಿರುವುದರಿಂದ ಸ್ಥಳೀಯ ಯುವಕರಿಗೆ ಪ್ರವಾಸೋದ್ಯಮ ನೆರವಾಗಿದೆ.

ಜೋಯಿಡಾ – ದಾಂಡೇಲಿ ಇದು ಅವಳಿ ನಗರವಾಗಿದ್ದು ಇಲ್ಲಿರುವ ದಟ್ಟ ಕಾಡಿನಿಂದ ಹಾಗೂ ಕಾಳಿ ನದಿಯಿಂದಾಗಿ ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಮೊದಲು ಹೆಚ್ಚಿನ ಜನರು ವೀಕೆಂಡ್‌ನ‌ಲ್ಲಿ ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದರು. ಆದರೆ ಕಳೆದ ಒಂದೆರಡು ವರ್ಷಗಳಿಂದ ದಾಂಡೇಲಿ- ಜೋಯಿಡಾ ಭಾಗಕ್ಕೆ ಆಗಮಿಸುತ್ತಿದ್ದಾರೆ.

ಇಲ್ಲಿನ ರಾಫ್ಟಿಂಗ್‌ ಪಾಯಂಟ್‌ ಹಾಗೂ ಅದ್ಭುತ ರೆಸಾರ್ಟ್‌ಗಳಿಗೆ ಮತ್ತು ಪ್ರವಾಸಿ ತಾಣ ಸಿಂಥೇರಿ ರಾಕ್ಸ್‌, ಗಣೇಶಗುಡಿ ಡ್ಯಾಂ, ಕ್ಯಾನೋಪಿ ವಾಕ್‌ ಹಾಗೂ ಪುರಾಣ ಪ್ರಸಿದ್ಧ ಉಳವಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ.

Advertisement

ಪ್ರವಾಸೋದ್ಯಮಕ್ಕೆ ಜೀವ ತುಂಬಿದ ಜಲಸಾಹಸ ಕ್ರೀಡೆ: ರಾಫ್ಟಿಂಗ್‌ ಮತ್ತು ಇತರೆ ಜಲಸಾಹಸ ಕ್ರೀಡೆಗಳು ಇಲ್ಲಿನ ಪ್ರವಾಸೋದ್ಯಮಕ್ಕೆ ಜೀವ ತುಂಬಿದೆ. ಕಳೆದ ಎರಡು ತಿಂಗಳಿನಿಂದ ರಾಫ್ಟಿಂಗ್‌ ಬಂದ್‌ ಆದ ಕಾರಣ ಈ ಭಾಗದಲ್ಲಿ ಸಂಪೂರ್ಣ ಪ್ರವಾಸೋದ್ಯಮ ಬಂದ್‌ ಆಗಿತ್ತು, ಸಾಲ ಮಾಡಿ ಹೋಮ್‌ ಸ್ಟೇ ರೆಸಾರ್ಟ್‌ ಮಾಡಿದ ಮಾಲಿಕರ ಪರಿಸ್ಥಿತಿ ಗಂಭೀರವಾಗಿತ್ತು. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಪಂ ನೆರವಿನಿಂದ ಮತ್ತೆ ರಾಫ್ಟಿಂಗ್‌ ಶುರುವಾಗಿರುವುದು ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಿದೆ.

ರಾಫ್ಟಿಂಗ್‌ ಮತ್ತು ಇತರೆ ಜಲಸಾಹಸ ಕ್ರೀಡೆಗಳಿಂದಲೇ ಇಲ್ಲಿನ ಪ್ರವಾಸೋದ್ಯಮ ಬೆಳೆದಿದೆ. ಹೆಚ್ಚಿನ ಪ್ರವಾಸಿಗರು ರಾಫ್ಟಿಂಗ್‌ ಮಾಡಲೆಂದೇ ಇಲ್ಲಿಗೆ ಬರುತ್ತಾರೆ. ದೇಶದಲ್ಲಿ ಅದ್ಭುತವಾಗದ ರಾಫ್ಟಿಂಗ್‌ ಅನುಭವ ಇಲ್ಲಿ ಪಡೆಯಬಹುದಾಗಿದೆ.
ಸಂಜಯ ನಂದ್ಯಾಳಕರ, ಸುಪಾ ವಾಟರ್‌
ಎಕ್ಟಿವಿಟಿಸ್‌ ಮಾಲಿಕರ ಸಂಘದ ಅಧ್ಯಕ್ಷ

ರಾಫ್ಟಿಂಗ್‌ ಮತ್ತೆ ಶುರುಮಾಡಿದ ಕಾರಣ ಎಲ್ಲಾ ಪ್ರವಾಸೋದ್ಯಮಿಗಳಿಗೆ ಬಹಳಷ್ಟು ಸಂತೋಷವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗಿದೆ. ಜಿಲ್ಲಾಡಳಿತಕ್ಕೆ ಪ್ರವಾಸೋದ್ಯಮಿಗಳ ಪರವಾಗಿ ಅಭಿನಂದಿಸುತ್ತೇವೆ.
ಅನಿಲ್‌ ಪಾಕ್ಲೃಕರ, ಪ್ರವಾಸೋದ್ಯಮಿ.

■ ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next