Advertisement

ಸಂವಿಧಾನದ 35ಎ ವಿಧಿ : 2ನೇ ದಿನವೂ ಕಾಶ್ಮೀರ ಸಂಪೂರ್ಣ ಬಂದ್‌

12:23 PM Aug 31, 2018 | Team Udayavani |

ಜಮ್ಮು : ಸಂವಿಧಾನದ 35ಎ ವಿಧಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ತೀರ್ಮಾನಿಸಲಿಕ್ಕಿರುವಂತೆಯೇ ಪ್ರತ್ಯೇಕತಾವಾದಿಗಳು ಇಂದು ಶುಕ್ರವಾರ ಸಂಪೂರ್ಣ ಕಾಶ್ಮೀರ ಬಂದ್‌ ಗೆ ಕರೆ ನೀಡಿದ್ದು ಆ ಪ್ರಕಾರ ಬಂದ್‌ ಶಾಂತಿಯುತವಾಗಿ ನಡೆಯುತ್ತಿದೆ. 

Advertisement

ಪ್ರತ್ಯೇಕತಾವಾದಿ ನಾಯಕರಾದ ಸಯ್ಯದ್‌ ಅಲಿ ಶಾ ಗೀಲಾನಿ, ಮೀರ್‌ ವೇಜ್‌ ಉಮರ್‌ ಫಾರೂಕ್‌ ಮತ್ತು ಯಾಸಿನ್‌ ಮಲಿಕ್‌ ಸೇರಿರುವ ಜಂಟಿ ಪ್ರತಿರೋಧ ನಾಯಕರು ಬಂದ್‌ ಕರೆ ನೀಡಿದವರಾಗಿದ್ದಾರೆ. 

ಕಾಶ್ಮೀರದಲ್ಲಿ ಇಂದು ಎಲ್ಲ ಅಂಗಡಿ, ಉದ್ಯಮ ಸಂಸ್ಥೆಗಳು, ಕಚೇರಿಗಳು ಮುಚ್ಚಿದ್ದು ಸಾರಿಗೆ ವಾಹನಗಳು ರಸ್ತೆಗಿಳಿದಿಲ್ಲ. ನಿನ್ನೆಯೂ ಇದೇ ರೀತಿಯ ಬಂದ್‌ ಇತ್ತು. ಇಂದು ಶಾಲೆಗಳಿಗೆ ರಜೆ ನೀಡಲಾಗಿದ್ದು ಸರಕಾರಿ ಕಚೇರಿಗಳಲ್ಲಿ ಕಡಿಮೆ ಹಾಜರಾತಿ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next