Advertisement

ಕಾಲುವೆಗೆ ಅಕ್ರಮ ಪೈಪ್‌ಲೈನ್‌ ಜೋಡಣೆಗೆ ಕಡಿವಾಣ ಹಾಕಿ

01:19 PM Jan 14, 2020 | Suhan S |

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕು ನಡವಿ ಡಿಸ್ಟ್ರಿಬ್ಯೂಟರ್‌ ಎಲ್‌ಎಲ್‌ಸಿ ನಂ. 6 ಕಾಲುವೆಗೆ ಪೈಪ್‌ ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವ ರೈತರ ವಿರುದ್ಧ ಕ್ರಮಕೈಗೊಳ್ಳಬೇಕು. ಅಕ್ರಮವಾಗಿ ನೀರು ಪಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದಿಂದ ನೀರಾವರಿ ಇಲಾಖೆ ಸಹಾಯಕ ಆಯುಕ್ತರ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು.

Advertisement

ನಗರದ ನೀರಾವರಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿದ ರೈತ ಸಂಘದಪದಾಧಿಕಾರಿಗಳು, ರೈತರು ತಕ್ಷಣ ಅಕ್ರಮ ಬಳಕೆದಾರರ ಮೇಲೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಎಲ್‌ ಎಲ್‌ಸಿ ಕಾಲುವೆಗೆ ಅಕ್ರಮವಾಗಿ ಭೂಗತವಾಗಿ ಪೈಪ್‌ಲೈನ್‌ ಅಳವಡಿಸಿಕೊಂಡಿರುವ ಸೋಮಲಾಪುರ, ಚಿಟಿಗಿಹಾಳ್‌ ಗ್ರಾಮ ಭಾಗದಲ್ಲಿನ ಅಚ್ಚುಕಟ್ಟಿನ ರೈತರ ಜಮೀನುಗಳಿಗೆ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ಇದರಿಂದ ಎಚ್‌. ವೀರಾಪುರ, ಹಾವಿನಾಳ್‌, ಮುದ್ದಟನೂರು, ಎಮ್ಮಿಗನೂರು, ಚನ್ನಪಟ್ಟಣ ಭಾಗದ ರೈತರ ಅಚ್ಚುಕಟ್ಟು ಜಮೀನುಗಳಿಗೆ ನೀರು ಬಾರದೆ ರೈತರು ತಮ್ಮ ಬೆಳೆಗಳಿಗೆ ನೀರು ಸಿಗದೇ ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಈವರೆಗೆ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇನ್ನಾದರೂ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಆಗ್ರಹಿಸಿದರು. ಬಳಿಕ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಗ್ರಾಪಂ ಸದಸ್ಯ ಬಸವರಾಜ, ರಾಜಶೇಖರ್‌, ಜಿ. ಮಂಜುನಾಥ, ಎಂ. ಉಮಾಮಹೇಶ, ಕೆ. ರಮೇಶ, ರಾಮು, ರುದ್ರಗೌಡ, ಮಾಯಪ್ಪ, ವೀರೇಶ, ಹೊನ್ನೂರಪ್ಪ, ಜಿ. ತಿಪ್ಪೇರುದ್ರಪ್ಪ, ಮುಷ್ಟಗಟ್ಟೆ ಭೀಮನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next