ದೇವದುರ್ಗ: ಮರಳು ನೀತಿ ಸಿಸ್ಟಮ್ ಬದಲಾವಣೆ ಜತೆ ಅಕ್ರಮ ಮರಳು ಸಾಗಣೆ ಕಡಿವಾಣ ಹಾಕಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಅವಿನಾಶ ರಾಜೇಂದ್ರ ಮೆನನ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಕ್ರಮ ಮರಳು ಸಾಗಣೆಕುರಿತುಕೆಲದೂರುಗಳುಬಂದಹಿನ್ನೆಲೆ ಕೃಷ್ಣಾ ನದಿ ತೀರದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ನದಿಯಲ್ಲಿ ಇಟಾಚಿ, ಟಿಪ್ಪರ್‌ಗಳು ಒಂದೂ ಇಲ್ಲವಾದ್ದರಿಂದ ಬಿಗಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನೇವರಿ ತಿಂಗಳಲ್ಲಿ ಮತ್ತೂಮ್ಮೆ ಅಧಿಕಾರಿಗಳು ಸಭೆ ನಡೆಸುತ್ತೇನೆ ಎಂದರು.
ಇನ್ನು ಚೆಕ್ ಪೋಸ್ಟ್‌ನಲ್ಲಿ ಗಣಿ ಭೂ ವಿಜ್ಞಾನಿ ಇಲಾಖೆ, ಪೊಲೀಸ್, ಕಂದಾಯ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ನಿಯೋಜನೆ ಮಾಡಿ ಅಕ್ರಮ ಮರಳು ಸಾಗಣೆ ಕಡಿವಾಣ ಹಾಕಲು ಸೂಕ್ತ ಕ್ರಮವಹಿಸಲಾಗುತ್ತದೆ. ಓವರ್ ಲೋಡ್ ಮರಳು ಸಾಗಣೆ ಆರ್ ಟಿಒ ಇಲಾಖೆಯಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಮರಳು ನೀತಿ ಸಿಸ್ಟಮ್ ಬದಲಾವಣೆಗಾಗಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ಉದ್ದೇಶವಾಗಿದೆ. ಅಕ್ರಮ ಮರಳು ಸಾಗಣೆ ಕುರಿತಂತೆ ನಿಯಂತ್ರಣಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ತಂಡಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಶೇಖರ್ ತನ್ವೀರ್ ಅಶೀಫ್, ಎಸ್ಪಿ ನಿಖೀಲ್ ಆರ್. ಸಹಾಯಕ ಆಯುಕ್ತ ಸಂತೋಷಕಾಮೆಗೌಡ, ತಹಶೀಲ್ದಾರ್ ಶ್ರೀನಿವಾಸ ಚಾಪಲ್ ಸೇರಿದಂತೆ ಇತರರು ಇದ್ದರು.