Advertisement

ಶುಭಂ ಗಿಲ್‌ ಶತಕ; ಭಾರತಕ್ಕೆ ಸರಣಿ ಮುನ್ನಡೆ

03:45 AM Feb 04, 2017 | |

ಮುಂಬಯಿ: ಆರಂಭಕಾರ ಶುಭಂ ಗಿಲ್‌ ಅವರ ಅಜೇಯ ಶತಕ, ಇದಕ್ಕೂ ಮುನ್ನ ಸ್ಪಿನ್‌ದ್ವಯರಾದ ರಾಹುಲ್‌ ಚಹರ್‌ ಹಾಗೂ ಅನುಕೂಲ್‌ ರಾಯ್‌ ಸಂಘಟಿಸಿದ ಘಾತಕ ದಾಳಿಯ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಅಂಡರ್‌-19 ಏಕದಿನ ಸರಣಿಯ 3ನೇ ಮುಖಾಮುಖೀಯಲ್ಲಿ ಭಾರತದ ಕಿರಿಯರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಗಳಿಸಿದ್ದಾರೆ.

Advertisement

ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಶುಕ್ರವಾರದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49 ಓವರ್‌ಗಳಲ್ಲಿ 215 ರನ್ನಿಗೆ ಕುಸಿಯಿತು. ಭಾರತ 44.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 216 ರನ್‌ ಪೇರಿಸಿ ಗೆದ್ದು ಬಂದಿತು.

ಶುಭಂ ಆಕರ್ಷಕ ಶತಕ: ಪಂಜಾಬ್‌ನ 17ರ ಹರೆಯದ ಬಲಗೈ ಆರಂಭಕಾರ ಶುಭಂ ಗಿಲ್‌ ಅಜೇಯ 138 ರನ್‌ ಬಾರಿಸಿ ಭಾರತದ ಚೇಸಿಂಗ್‌ ಸವಾಲನ್ನು ಸುಲಭಗೊಳಿಸಿ ದರು. 157 ಎಸೆತಗಳನ್ನು ಎದುರಿಸಿ ನಿಂತ ಗಿಲ್‌ 17 ಬೌಂಡರಿ, 2 ಸಿಕ್ಸರ್‌ ನೆರವಿನಿಂದ ಈ ಸ್ಮರಣೀಯ ಇನ್ನಿಂಗ್ಸ್‌ ಕಟ್ಟಿದರು. ಭಾರತದ ಗೆಲುವಿನ ವೇಳೆ ಗಿಲ್‌ ಜತೆ ಕೀಪರ್‌ ಹಾರ್ವಿಕ್‌ ದೇಸಾಯಿ ಅಜೇಯ 37ರಲ್ಲಿದ್ದರು. ಗಿಲ್‌-ದೇಸಾಯಿ ಜತೆಯಾಟದಲ್ಲಿ ಮುರಿಯದ 4ನೇ ವಿಕೆಟಿಗೆ 115 ರನ್‌ ಹರಿದು ಬಂತು. 

ಗಿಲ್‌ ಹಾಗೂ ನಾಯಕ ರಾಣ ನಿರ್ಮಿಸಿದ ಉತ್ತಮ ಅಡಿಪಾಯ ಕೂಡ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಇವರಿ ಬ್ಬರು 7.5 ಓವರ್‌ಗಳಿಂದ 63 ರನ್‌ ಪೇರಿಸಿದರು. ಇದರಲ್ಲಿ ರಾಣ ಗಳಿಕೆ 19 ರನ್‌ ಮಾತ್ರ. ಆದರೆ ರಾಣ ನಿರ್ಗಮನದ ಬೆನ್ನಲ್ಲೇ ಪ್ರಿಯಂ ಗರ್ಗ್‌ (8) ಮತ್ತು ಸಲ್ಮಾನ್‌ ಖಾನ್‌ (11) ಅವರನ್ನು ಪೆವಿಲಿಯನ್ನಿಗೆ ಅಟ್ಟಿದ ಇಂಗ್ಲೆಂಡ್‌ ಮೇಲುಗೈ ಸಾಧಿಸಲು ಹವಣಿಸಿತು. ಇದಕ್ಕೆ ಗಿಲ್‌-ದೇಸಾಯಿ ಅಡ್ಡಗೋಡೆಯಾಗಿ ನಿಂತರು.

ಚಹರ್‌, ರಾಯ್‌ ಆಕ್ರಮಣ: ಬ್ಯಾಟಿಂಗ್‌ ಆಯ್ದು ಕೊಂಡ ಇಂಗ್ಲೆಂಡ್‌ ಉತ್ತಮ ಹಾಗೂ ಬಿರುಸಿನ ಆರಂಭ ಕಂಡು 
ಕೊಳ್ಳುವಲ್ಲಿ ವಿಫ‌ಲವಾಯಿತು.   3ನೇ ವಿಕೆಟಿಗೆ ಜತೆಗೂಡಿದ ಜಾರ್ಜ್‌ ಬಾಟ್ಲೆìಟ್‌ ಮತ್ತು ಡೆಲಾÅಯ್‌ ರಾಲಿನ್ಸ್‌ ಕ್ರೀಸ್‌ ಆಕ್ರಮಿಸಿಕೊಂಡು 84 ರನ್‌ ಪೇರಿಸಿದರು. ಬಾಟ್ಲೆìಟ್‌ 55 ರನ್‌ ಮಾಡಿದರೆ (67 ಎಸೆತ, 6 ಬೌಂಡರಿ, 1 ಸಿಕ್ಸರ್‌), ರಾಲಿನ್ಸ್‌ ನಾಲ್ಕೇ ರನ್ನಿನಿಂದ ಶತಕ ವಂಚಿತರಾದರು (106 ಎಸೆತ, 96 ರನ್‌, 11 ಬೌಂಡರಿ, 2 ಸಿಕ್ಸರ್‌). 

Advertisement

ಈ ಜೋಡಿಯನ್ನು ಬೇರ್ಪಡಿಸಿದ ಲೆಗ್‌ ಸ್ಪಿನ್ನರ್‌ ಚಹರ್‌ ಭಾರತಕ್ಕೆ ಮೇಲುಗೈ ಒದಗಿಸಿದರು. ಚಹರ್‌ ಸಾಧನೆ 33ಕ್ಕೆ 4. ಆಫ್ಸ್ಪಿನ್ನರ್‌ ರಾಯ್‌ ಕೂಡ ಘಾತಕವಾಗಿ ಪರಿಣಮಿಸಿದರು. ರಾಯ್‌ 39 ರನ್‌ ನೀಡಿ 3 ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಕಿರಿಯರು-49 ಓವರ್‌ಗಳಲ್ಲಿ 215 (ರಾಲಿನ್ಸ್‌ 96, ಬಾಟ್ಲೆìಟ್‌ 55, ಚಹರ್‌ 33ಕ್ಕೆ 4, ರಾಯ್‌ 39ಕ್ಕೆ 3). ಭಾರತ-44.1 ಓವರ್‌ಗಳಲ್ಲಿ 3 ವಿಕೆಟಿಗೆ 216 (ಗಿಲ್‌ ಔಟಾಗದೆ 138, ದೇಸಾಯಿ ಔಟಾಗದೆ 37, ರಾಲಿನ್ಸ್‌ 30ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next