ಚೆನ್ನೈ: ಬಹುಭಾಷಾ ನಟಿ ಶ್ರುತಿ ಹಾಸನ್ ಅವರು ಪ್ರಿಯಕರನ ವಿಚಾರದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ಈ ಬಾರಿ ಅವರು ತನ್ನ ಪ್ರಿಯಕರನ ಬಗ್ಗೆ ಮಾತನಾಡಿರುವ ಮಾತೊಂದು ವೈರಲ್ ಆಗುವುದರ ಜೊತೆಗೆ ಅವರ ಅಭಿಮಾನಿಗಳನ್ನು ಅಸಹ್ಯವಾಗಿಸಿದೆ.
‘ಸಲಾರ್ʼ ಬೆಡಗಿ ಶ್ರುತಿ ಹಾಸನ್ ಶಾಂತನು ಹಜಾರಿಕಾ ಅವರೊಂದಿಗೆ ಕಳೆದ ಕೆಲ ಸಮಯದಿಂದ ಪ್ರೀತಿಯಲ್ಲಿರುವುದು ಗೊತ್ತೇ ಇದೆ. ಇಬ್ಬರು ಆತ್ಮೀಯವಾಗಿದ್ದಾರೆ. ಎಲ್ಲಿಯವರೆಗೆ ಅಂದರೆ ತಮ್ಮ ಫೋಟೋ, ಇಷ್ಟ, ಕಷ್ಟ ಎಲ್ಲವನ್ನು ಮುಕ್ತವಾಗಿ ಅವರಿಬ್ಬರು ಜೊತೆಯಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಇದೇ ವಿಚಾರವಾಗಿ ಶ್ರುತಿ – ಶಾಂತನು ಚರ್ಚೆಯಲ್ಲಿರುತ್ತಾರೆ. ಕೆಲವೊಂದು ಸಲ ಶ್ರುತಿ – ಶಾಂತನು ಕೆಲ ಖಾಸಗಿ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ. ಶ್ರುತಿ ಅವರಿಗೆ ತನ್ನ ಪ್ರಿಯಕರನ ವ್ಯಕ್ತಿತ್ವದ ಬಗ್ಗೆ ಎಲ್ಲವೂ ಗೊತ್ತಿದೆ. ಅವರ ಬೇಕು – ಬೇಡಗಳ ಬಗ್ಗೆಯೂ ಗೊತ್ತಿದೆ.
ಇತ್ತೀಚೆಗೆ ಶ್ರುತಿ ಹಾಸನ್ ಇನ್ಸ್ಟಾಗ್ರಾಮ್ ನಲ್ಲಿ ಕಪಲ್ಸ್ ಕ್ವಿಜ್ ಆಡಿದ್ದಾರೆ. ತನ್ನ ಪ್ರಿಯಕರನೊಂದಿಗೆ ಈ ಗೇಮ್ ಆಡುತ್ತಾ ಶ್ರುತಿ ಹಾಸನ್ ಶಾಂತನು ಅವರ ಕಾಳಜಿ, ಪ್ರೀತಿ, ಹಾಸ್ಯಪ್ರಜ್ಞೆ, ಪ್ರತಿಭೆಯನ್ನು ಹೊಗಳಿದ್ದಾರೆ. ಇದನ್ನು ಹೇಳುತ್ತಾ ಶಾಂತನು ಅವರ ಹೂಸು ಹಾಗೂ ಅವರ ಕಣ್ಣು ನನಗಿಷ್ಟವೆಂದು ಹೇಳಿ ಶ್ರುತಿ ನಕ್ಕಿದ್ದಾರೆ.
ಯಾರು ಅಡುಗೆ ಮಾಡುತ್ತಾರೆ, ಹೆಚ್ಚು ಯಾರು ತಿನ್ನುತ್ತಾರೆ, ಮೊದಲು ಕ್ಷಮೆ ಯಾರು ಕೇಳುತ್ತಾರೆ ಮುಂತಾದ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದಾರೆ.
ಆದರೆ ಶ್ರುತಿ ಅವರು ಪ್ರಿಯಕರನ ಬಗ್ಗೆ ಹೂಸಿನ ವಿಚಾರವನ್ನು ಹೇಳಿದ್ದು ಕೆಲ ಅಭಿಮಾನಿಗಳಿಗೆ ಅಸಹ್ಯವಾಗಿಸಿದೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿರುವ ತಮಗೆ ಇಂಥ ಮಾತುಗಳು ಶೋಭೆ ತರಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
2018 ರಲ್ಲಿ ಶಾಂತನು – ಶ್ರುತಿ ಲವ್ ಸ್ಟೋರಿ ಶುರುವಾಗಿತ್ತು. ಮೊದಲು ಭೇಟಿ ಬಳಿಕ ಶ್ರುತಿ ಅವರೇ ಶಾಂತನು ಅವರಿಗೆ ಪ್ರಪೋಸ್ ಮಾಡಿದ್ದರು.