Advertisement

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

01:24 AM Jun 16, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಸಕ್ತ ಸಾಲಿನ ಯುವ ಪುರಸ್ಕಾರಕ್ಕೆ ಕವಯಿತ್ರಿ ಶ್ರುತಿ ಬಿ.ಆರ್‌. ಹಾಗೂ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕೃಷ್ಣಮೂರ್ತಿ ಬಿಳಿಗೆರೆ ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 23 ಮಂದಿಗೆ ಯುವ ಪುರಸ್ಕಾರ ಮತ್ತು 24 ಮಂದಿಗೆ ಬಾಲ ಸಾಹಿತ್ಯ ಪುರಸ್ಕಾರ ಘೋಷಿಸಲಾಗಿದೆ.

Advertisement

ಬಿ.ಆರ್‌.ಶ್ರುತಿ ಅವರ “ಜೀರೋ ಬ್ಯಾಲೆನ್ಸ್‌’ ಕವನ ಸಂಕಲನಕ್ಕೆ ಪುರಸ್ಕಾರ ಲಭಿಸಿದೆ.ಚಿಕ್ಕಮಗಳೂರು ಜಿಲ್ಲೆಯವರರಾದ ಶ್ರುತಿ ಕೆಎಎಸ್‌ ಅಧಿಕಾರಿಯಾಗಿದ್ದು, ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದಾರೆ. ಕೃಷ್ಣಮೂರ್ತಿ ಬಿಳಿಗೆರೆ ಅವರ “ಛೂಮಂತ್ರಯ್ಯನ ಕತೆಗಳು’ ಪ್ರಶಸ್ತಿಗೆ ಆಯ್ಕೆಯಾಗಿದೆ. ಸರಕಾರಿ ಕಾಲೇಜಿನಲ್ಲಿ ಪ್ರಾಚಾರ್ಯ ರಾಗಿರುವ ಕೃಷ್ಣಮೂರ್ತಿ ಮಕ್ಕಳಿಗಾಗಿ ಕತೆ, ಕವನಗಳನ್ನು ರಚಿಸಿದ್ದಾರೆ. ಅವರ ಹಲವು ಕೃತಿಗಳು ಪ್ರಕಟಿತವಾಗಿವೆ.

10 ಕವನ ಸಂಕಲನಗಳು, 7 ಸಣ್ಣ ಕತೆಗಳು, ಎರಡು ಲೇಖನ ಸಂಗ್ರಹ, ಪ್ರಬಂಧ, ಕಾದಂಬರಿ, ಗಜಲ್‌ ತಲಾ ಒಂದೊಂದು ಕೃತಿಗೆ ಯುವ ಪುರಸ್ಕಾರ ನೀಡಲಾಗಿದೆ. ಪುರಸ್ಕೃತರಿಗೆ ಪ್ರಶಸ್ತಿ ರೂಪದಲ್ಲಿ 50 ಸಾವಿರ ರೂ. ದೊರೆಯಲಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next