ಬೆಂಗಳೂರು: ದೇಶಾದ್ಯಂತ ಮೀ ಟೂ ಆರೋಪಗಳ ಸರಣಿ ಮುಂದುವರಿದಿದ್ದು ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಆರೋಪ ಮಾಡಿದ್ದಾರೆ.
ಖಾಸಗಿ ಮ್ಯಾಗಜೀನ್‌ವೊಂದಕ್ಕೆ ಹೇಳಿಕೆ ನೀಡಿರುವ ಶ್ರುತಿ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳ ನನಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.
ರಿಹರ್ಸಲ್ ವೇಳೆ ನನ್ನನ್ನು ತಬ್ಬಿಕೊಂಡಿದ್ದರು. ಪದೇ ಪದೇ ನನ್ನನ್ನು ಊಟಕ್ಕೆ ಕರೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
Related Articles
ನನ್ನನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದರು. ಆ ಬಳಿಕ ನಾನು ನೇರವಾಗಿ ನಿರ್ದೇಶಕರ ಬಳಿಗೆ ತೆರಳಿದೆ. ನಂತರ ಎಂದೂ ರಿಹರ್ಸಲ್‌ಗೆ ಬರಲಿಲ್ಲ. ನೇರವಾಗಿ ಶೂಟಿಂಗ್‌ಗೆ ತೆರಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ವಿಸ್ಮಯ ಚಿತ್ರ ಅರ್ಜುನ್ ಸರ್ಜಾ ಅಭಿನಯಿಸಿದ್ದ 150 ನೇ ಚಿತ್ರವಾಗಿತ್ತು.