Advertisement
“ರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ವಾದ ರವಿವಾರ ಉತ್ತರಾಖಂಡ ಸರಕಾರ ಇಂಥದ್ದೊಂದು ವಿನೂತನ ಹೆಜ್ಜೆ ಇಟ್ಟಿದೆ. ಹರಿದ್ವಾರದಲ್ಲಿ ಮೂರನೇ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯಾಗಿರುವ ಸೃಷ್ಟಿ ಗೋಸ್ವಾಮಿಯನ್ನು “ಒಂದು ದಿನದ ಮುಖ್ಯಮಂತ್ರಿ’ಯಾಗಿ ನೇಮಿಸಿತ್ತು ಉತ್ತರಾಖಂಡ ಸರಕಾರ. ಅಧಿಕಾರ ಸ್ವೀಕರಿಸಿದ ಸೃಷ್ಟಿ, ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ, ಹೋಂಸ್ಟೇ ಯೋಜನೆ, ಮಕ್ಕಳು ಮತ್ತು ಮಹಿಳಾ ರಕ್ಷಣೆ ಯೋಜನೆಗಳನ್ನು ಪರಿಶೀಲಿಸಿದ್ದಾಳೆ!
Related Articles
Advertisement
ಹೆಣ್ಣುಮಕ್ಕಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಅವರ ಶಿಕ್ಷಣ, ಆರೋಗ್ಯ, ಹೆಣ್ಣು-ಗಂಡು ಮಕ್ಕಳ ನಡುವೆ ಗೌರವ ಭಾವ ಹೆಚ್ಚಿಸುವುದಕ್ಕೆ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಹೆಣ್ಣುಮಗುವಿನ ದಿನದ ಹಿನ್ನೆಲೆ ಮೋದಿ ಈ ಮಾತುಗಳನ್ನಾಡಿದ್ದಾರೆ. ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗಾಗಿ ಯಾರ್ಯಾರು ದುಡಿಯುತ್ತಿದ್ದಾರೋ ಅವರೆಲ್ಲರನ್ನೂ ಅಭಿನಂದಿಸುವುದಕ್ಕೆ ಈ ದಿನ ಸದಾವಕಾಶ. ಈ ದಿನ ಭಾರತದ ಹೆಣ್ಣುಮಕ್ಕಳನ್ನು ಗೌರವಿಸಬೇಕು, ಅವರ ಸಾಧನೆಯನ್ನು ಗುರುತಿಸಬೇಕು ಎಂದು ಮೋದಿ ಹೇಳಿದ್ದಾರೆ.
ಸೆಲ್ಫಿ ಪ್ರಕಟಿಸಿದ ಗಣ್ಯರು :
ಪ್ರತೀ ವರ್ಷ ಜ.24ನ್ನು ಕೇಂದ್ರ ಸಚಿವರು, ಚಿತ್ರನಟರು, ಕ್ರೀಡಾಪಟುಗಳು; ಹೆಣ್ಣುಮಕ್ಕಳ ಗೌರವ ಹೆಚ್ಚಿಸುವುದಕ್ಕೆ ಒಂದು ಸದಾವಕಾಶವನ್ನಾಗಿ ಬಳಸಿಕೊಳ್ಳುತ್ತಾರೆ. ಜನಸಾಮಾನ್ಯರಲ್ಲಿ ಹೆಣ್ಣುಮಗುವಿನ ಬಗ್ಗೆ ಇರುವ ತಿರಸ್ಕಾರ ಹೋಗಬೇಕು ಎನ್ನುವುದು ಇದರ ಉದ್ದೇಶ. ಈ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕರು ತಮ್ಮ ಹೆಣ್ಣುಮಕ್ಕಳ ಜತೆಗಿನ ಸೆಲ್ಫಿಯನ್ನು ಟ್ವೀಟ್ ಮಾಡಿದ್ದಾರೆ.