ತಲೆ ಕೆಟ್ಟರೆ ನಿನಗೆ ಗನ್‌ನಿಂದ ಶೂಟ್ ಮಾಡುತ್ತೇನೆ’ ಎಂದು ಆವಾಜ್ ಹಾಕಿದ್ದಾರೆ.
Advertisement
ಶನಿವಾರ ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಗೆ ಪಿಡಬ್ಲೂ Âಡಿ ಅಧಿಕಾರಿ ಬಸವನಗೌಡ ತಡವಾಗಿ ಬಂ ದರು. ಆಗ ಕಂಗಾಲಾದ ಶ್ರೀರಾಮುಲು, ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ವಾ? ನಾವೇನು ಕೆಲಸಕ್ಕೆ ಬಾರದವರು,ಹುಚ್ಚರಂತೆ ಕಾಣುತ್ತಿದ್ದೇವಾ? ಹೊರಗಡೆ ನಾಲ್ಕು ಜನರ ಹತ್ತಿರ ಬೈಯಿಸಿಕೊಂಡು, ಉಗುಳಿಸಿಕೊಂಡು ರಾಜಕಾರಣಿಗಳಾಗಿ ಇಂಥ ಸ್ಥಾನದಲ್ಲಿದ್ದೇವೆ. ಈಗ ನಿಮ್ಮಂಥವರ ಹತ್ತಿರ ಕೈ ಮುಗಿದು ನಿಲ್ಲಬೇಕಾ? ಇದೆಲ್ಲಾ ನಮ್ಮ ಕರ್ಮ, ನನಗೆ ತಲೆಕೆಟ್ಟರೆ ಗನ್‌ನಿಂದ ಶೂಟ್ ಮಾಡಿ ಬಿಡುತ್ತೇನೆ.ಯಾರಿಗೆ ಹೇಳ್ಕೊತೀರೋ ಹೇಳಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.