Advertisement

ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ: ಶ್ರೀರಾಮುಲು

12:40 PM Jan 16, 2021 | Team Udayavani |

ಚಿತ್ರದುರ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಶನಿವಾರ ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ ಅಸ್ತಿತ್ವ ಮತ್ತು ಪುಕ್ಕಟ್ಟೆ ಪ್ರಚಾರಕ್ಕಾಗಿ ಮಾತನಾಡುತ್ತಿದ್ದರು ಎಂದು ಸಿದ್ದು ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನೈತಿಕ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹೇಳುವ ಮೂಲಕ ಮೇಷ್ಟ್ರಾಗಲು ಹೊರಟಿದ್ದಾರೆ. ಆದರೆ, ನಮ್ಮನ್ನು ಟೀಕಿಸಲು ಅವರಿಗೆ ನೈತಿಕತೆ ಇರಬೇಕು ಎಂದರು.

ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿ ದೇವೇಗೌಡರನ್ನು ಸೋಲಿಸಿದ ಮನುಷ್ಯ ಸಿದ್ದರಾಮಯ್ಯ. ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದವರು ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಹುಬ್ಬಳ್ಳಿ: ಕೋವೀಶೀಲ್ಡ್ ಲಸಿಕೆ ಪಡೆದ ಕಿಮ್ಸ್ ವೈದ್ಯ ಡಾ. ನಾರಾಯಣ ಹೆಬಸೂರು

Advertisement

ಸಿಡಿ ವಿಚಾರ ಹಾಗೂ ಯತ್ನಾಳ್ ಹೇಳಿಕೆಗಳ‌ ಬಗ್ಗೆ ವರಿಷ್ಟರು ಗಮನಹರಿಸುತ್ತಾರೆ. ಆಧಾರ ರಹಿತ ಆರೋಪಗಳಿಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಹಿಟ್ ಅಂಡ್ ರನ್ ಹೇಳಿಕೆಗಳು.

ಇಂದು ಪಕ್ಷದ ಮುಖ್ಯಸ್ಥರು, ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ಎಲ್ಲವನ್ನೂ ಚರ್ಚಿಸಲಿದ್ದು, ಸ್ಪಷ್ಟತೆ ಸಿಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next