Advertisement

Shriram; ದೆಹಲಿಯಿಂದ ಅಯೋಧ್ಯೆಗೆ 635 ಕಿ.ಮೀ. ಶ್ರೀರಾಮ ಪಾದಯಾತ್ರೆಗೆ ಚಾಲನೆ

05:19 PM Dec 10, 2023 | Vishnudas Patil |

ಹೊಸದಿಲ್ಲಿ: ದೆಹಲಿಯಿಂದ ಅಯೋಧ್ಯೆಗೆ ಶ್ರೀರಾಮ ಪಾದಯಾತ್ರೆಗೆ ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಅಶ್ವಿನಿ ಚೌಬೆ ಅವರು ಭಾನುವಾರ ಚಾಲನೆ ನೀಡಿದರು.

Advertisement

635 ಕಿಲೋಮೀಟರ್ ದೂರವನ್ನು 41 ದಿನಗಳಲ್ಲಿ ಕ್ರಮಿಸಲಾಗುತ್ತಿದೆ. ಭಕ್ತಿ ಮತ್ತು ಸೇವೆಯ ಸಂದೇಶವನ್ನು ಹರಡಲು ಇಸ್ಕಾನ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. 2024 ಜನವರಿ 22, ರಂದು ಅಯೋಧ್ಯೆಯಲ್ಲಿ ದೇವಾಲಯವನ್ನು ತೆರೆಯುವ ಮೊದಲು, ಇಸ್ಕಾನ್ ಅಯೋಧ್ಯೆ ಮತ್ತು ದೇಶದ ಇತರ ಭಾಗಗಳಲ್ಲಿ ಭಗವಾನ್ ಶ್ರೀರಾಮನ ಬೋಧನೆಗಳನ್ನು ಪ್ರತಿ ಮನೆಗೆ ಕೊಂಡೊಯ್ಯಲು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಾತನಾಡಿ, ದೆಹಲಿಯಿಂದ ಅಯೋಧ್ಯೆಗೆ ಶ್ರೀರಾಮ ಪಾದಯಾತ್ರೆಯು ನನ್ನ ಕ್ಷೇತ್ರದಿಂದ ಪ್ರಾರಂಭವಾಗುತ್ತಿರುವುದು ನನಗೆ ತುಂಬಾ ವಿಶೇಷವಾಗಿದೆ.ಈ ಪಾದಯಾತ್ರೆಯು ಭಗವಾನ್ ರಾಮನ ಹೆಸರಿನಲ್ಲಿ ನಡೆಯುವುದು ಬಹಳ ವಿಶೇಷವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next