Advertisement

ಶ್ರೀನಿವಾಸ ಮಲ್ಯರ ಕೊಡುಗೆ ಸ್ಮರಣೀಯ : ವೇದವ್ಯಾಸ ಕಾಮತ್‌

08:10 AM Apr 26, 2018 | Karthik A |

ಮಂಗಳೂರು: ನವಮಂಗಳೂರಿನ ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯರ ಕೊಡುಗೆಗಳನ್ನು ಸ್ಮರಿಸಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರು, ಮಲ್ಯರ ಮನೆಗೆ ಭೇಟಿ ನೀಡಿ ಕದ್ರಿಯಲ್ಲಿರುವ ಮಲ್ಯ ಪ್ರತಿಮೆಗೆ ಮಾಲಾರ್ಪಣೆಗೈದರು.

Advertisement

ನವಮಂಗಳೂರು ಬಂದರು ಸ್ಥಾಪನೆ, ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣ, ಎನ್‌.ಐ.ಟಿ.ಕೆ. ಸ್ಥಾಪನೆ, ಮಂಗಳೂರಿನಲ್ಲಿ ಆಕಾಶವಾಣಿ, ರಾಷ್ಟ್ರೀಯ ಹೆದ್ದಾರಿ 17, ರೈಲು ಮಾರ್ಗಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲಿ ಮಲ್ಯರು ಮಹತ್ತರ ಪಾತ್ರ ವಹಿಸಿದ್ದರು. ಉಳ್ಳಾಲ ಮತ್ತು ಅದರಾಚೆಗಿನ ಪ್ರದೇಶಗಳು ಮಂಗಳೂರಿಗೆ ಸಂಪರ್ಕ ಸಾಧಿಸಲು ಅವರು ಕಾರಣರಾಗಿದ್ದರು. ಅವರ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ, ಅಂಥ ಮಹಾನ್‌ ನಾಯಕರನ್ನು ಪಕ್ಷ ಭೇದ ಮರೆತು ನಾವು ಗೌರವಿಸುತ್ತೇವೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.

ಮಲ್ಯರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೊಮ್ಮಗ ನರಹರಿ ಮಲ್ಯ ಹಾಗೂ ಪತ್ನಿ ಶುಭ ಹಾರೈಸಿದರಲ್ಲದೇ, ತಮ್ಮ ಅಜ್ಜ ಓದುತ್ತಿದ್ದ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ನೀಡಿ ಕೀರ್ತಿಯ ಶಿಖರಕ್ಕೇರಲಿ ಎಂದು ಹರಸಿದರು. ಪಂಡಿತ್‌ ನರಸಿಂಹ ಆಚಾರ್ಯ, ವಸಂತ ಜೆ. ಪೂಜಾರಿ, ರತ್ನಾಕರ ನಾಯ್ಕ, ರಿತೇಶ್‌ ದಾಸ್‌, ದಿನೇಶ್‌ ಬಂಗೇರ, ಸಂತೋಷ್‌, ಲೋಕೇಶ್‌, ಗಣೇಶ್‌, ಚೇತನ್‌, ಶ್ರೀನಾಥ್‌ ಮಾನೆ ಮೊದಲಾದವರು ಉಪಸ್ಥಿತರಿದ್ದರು.

ಮಲ್ಯರ ಕನಸಿನಂತೆ ಯೋಜನೆ
ಯು. ಶ್ರೀನಿವಾಸ ಮಲ್ಯರ ಕನಸಿನಂತೆ ಮಂಗಳೂರನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇವೆಲ್ಲಕ್ಕೂ ಜನರು ಅಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ನನ್ನದು.
– ವೇದವ್ಯಾಸ ಕಾಮತ್‌, ಬಿಜೆಪಿ ಅಭ್ಯರ್ಥಿ- ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next