Advertisement
ದೇಶದ ಕೇವಲ ಐದು ಗ್ರಾ.ಪಂ ಅಧ್ಯಕ್ಷರ (ಸರಪಂಚ್) ಜತೆ ಪ್ರಧಾನಿ ನಡೆಸಿದ ಸಂವಾದದಲ್ಲಿ ಕರ್ನಾಟಕದಿಂದ ಧೂಪತಮಹಾಗಾಂವ್ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಒಬ್ಬರಾಗಿ ಭಾಗವಹಿಸಿದ್ದು ವಿಶೇಷ. ನೀರಿನ ಸಂರಕ್ಷಣೆಗಾಗಿ ತಮ್ಮ ಗ್ರಾ.ಪಂಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ ಅವರು, ಬರುವ ದಿನಗಳಲ್ಲಿ ಅಂತರ್ಜಲ ವೃದ್ಧಿಸಲು ಅಗತ್ಯ ಸಲಹೆಗಳನ್ನು ಆಲಿಸಿದರು.
Related Articles
Advertisement
ಈ ವೇಳೆ ಮಾತನಾಡಿದ ಪ್ರಧಾನಿ ಮೊದಿ, ನೀರು ಪ್ರಕೃತಿ ನಮಗಾಗಿ ನೀಡಿರುವ ಅಮೂಲ್ಯ ಸಂಪತ್ತು. ನೀರನ್ನು ಉಳಿಸಿ ಸಂರಕ್ಷಿಸುವ ಕೆಲಸ ಸರ್ಕಾರವೇ ಮಾಡಬೇಕು ಎಂಬ ಭಾವನೆ ಹೋಗಬೇಕು. ಜನರ ಸಹಭಾಗಿತ್ವದಲ್ಲಿ ಅಗುವ ಪ್ರತಿ ಕಾರ್ಯ ಮಹತ್ವ ಪಡೆದುಕೊಳ್ಳುತ್ತವೆ. ಹಾಗಾಗಿ ಗ್ರಾಮದ ಜನರನ್ನು ವಿಶ್ವಾಸಕ್ಕೆ ಪಡೆದು ನೀರಿನ ಸಂರಕ್ಷಣೆ ಕೆಲಸ ಆಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಅಂತರ್ಜಲ ವೃದ್ಧಿಗೆ ದೀಕ್ಷೆ ತೊಟ್ಟ ಭಗೀರಥ
ಭಾರತದ ಅಭಿವೃದ್ಧಿ ಜಲ ಸೂತ್ರಗಳ ಮೇಲೆ ನಿಂತಿದೆ. ಹಾಗಾಗಿ ಮಳೆಗಾಲ ಆರಂಭ ಆಗುವ ಮೊದಲು ದೇಶದ ಪ್ರತಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆಗಳನ್ನು ನಡೆಸಿ, ಮಳೆ ನೀರನ್ನು ಹಿಡಿದಿಟ್ಟುಕೊಂಡು ಸಂರಕ್ಷಿಸಿ ಕೊಳ್ಳಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದ ಸುತ್ತೋಲೆಗಳಿಗಾಗಿ ಕಾಯಬಾರದು. ಎಲ್ಲರೂ ಗಂಭೀರತೆ ಅರಿತು ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಸಂವಾದದಲ್ಲಿ ಕೇಂದ್ರ ಜಲ ಶಕ್ತಿ ಮಂತ್ರಾಲಯದ ಸಚಿವರು, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.