Advertisement

ಫೆ.25ಕ್ಕೆ ಶ್ರೀನಿ-ಅದಿತಿ ಜೋಡಿಯ ‘ಓಲ್ಡ್‌ ಮಾಂಕ್‌’ ರಿಲೀಸ್‌

02:00 PM Feb 01, 2022 | Team Udayavani |

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಶ್ರೀನಿ ಮತ್ತು ಅದಿತಿ ಪ್ರಭುದೇವ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್‌ ಕಾಮಿಡಿ ಚಿತ್ರ “ಓಲ್ಡ್‌ ಮಾಂಕ್‌’ ಫೆ.11ಕ್ಕೆ ತೆರೆಕಾಣಬೇಕಿತ್ತು. ಆದ್ರೆ ಓಮಿಕ್ರಾನ್‌ ಆತಂಕ, ಥಿಯೇಟರ್‌ ಗಳಲ್ಲಿ 50%ರಷ್ಟು ಪ್ರವೇಶಾತಿ, ನೈಟ್‌ ಕರ್ಫ್ಯೂ, ವೀಕೆಂಡ್‌ ಲಾಕ್‌ಡೌನ್‌ ಅಡೆತಡೆಯಿಂದಾಗಿ ತನ್ನ ಬಿಡುಗಡೆಯನ್ನು ಮುಂದೂಡುತ್ತ ಬಂದಿದ್ದ ಚಿತ್ರತಂಡ, ಇದೀಗ ತನ್ನ ಬಿಡುಗಡೆಯ ಹೊಸ ಡೇಟ್‌ ಅನೌನ್ಸ್‌ ಮಾಡಿದೆ.

Advertisement

ಅಂದಹಾಗೆ, ಇದೇ ಫೆ. 25ಕ್ಕೆ “ಓಲ್ಡ್‌ ಮಾಂಕ್‌’ ಬಿಡುಗಡೆಯಾಗಲಿದ್ದು, ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ:‘ಬಾಗ್ಲು ತೆಗಿ ಮೇರಿ ಜಾನ್‌…’: ತೋತಾಪುರಿ ಕಲರ್‌ಫುಲ್‌ ಸಾಂಗ್‌

ಒಂದೆರಡು ವಾರದಲ್ಲಿ ಥಿಯೇಟರ್‌ಗಳಲ್ಲೂ ಫ‌ೂರ್ಣಪ್ರಮಾಣದ ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಫೆ. 25ಕ್ಕೆ ಥಿಯೇಟರ್‌ಗಳಲ್ಲಿ “ಓಲ್ಡ್‌ ಮಾಂಕ್‌’ ದರ್ಶನ ಮಾಡಿಸುವ ಯೋಚನೆಯಲ್ಲಿದೆ ಚಿತ್ರತಂಡ.

ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡುವ “ಓಲ್ಡ್‌ ಮಾಂಕ್‌’ ನಾಯಕ ಕಂ ನಿರ್ದೇಶಕ ಶ್ರೀನಿ, “ನಮ್ಮ ಪ್ಲಾನ್‌ ಪ್ರಕಾರ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್‌ ಆಗಿರಬೇಕಿತ್ತು. ಆದ್ರೆ ಕೋವಿಡ್‌ ಭಯದಿಂದ ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳೇ ತಮ್ಮ ರಿಲೀಸ್‌ ಮುಂದೂಡಿದವು. ಹೀಗಾಗಿ, ನಾವು ಕೂಡ ನಾಲ್ಕು ತಾತ್ಕಾಲಿಕ ರಿಲೀಸ್‌ ಡೇಟ್‌ ಫಿಕ್ಸ್‌ ಮಾಡಿಕೊಂಡು ಸಿನಿಮಾ ರಿಲೀಸ್‌ ಮುಂದೂಡಿದ್ದೆವು. ಈಗ ಎಲ್ಲವೂ ಮತ್ತೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ, ಫೆ. 25ಕ್ಕೆ “ಓಲ್ಡ್‌ ಮಾಂಕ್‌’ ರಿಲೀಸ್‌ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next