Advertisement

28ರಿಂದ ಶೃಂಗೇರಿಯಲ್ಲಿ ಶರನ್ನವರಾತ್ರಿ ಮಹೋತ್ಸವ

05:47 PM Sep 21, 2019 | Naveen |

ಶೃಂಗೇರಿ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಸೆ.28ರಿಂದ ಅಕ್ಟೋಬರ್‌ 9ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

Advertisement

ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಪ್ರತಿದಿನ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ದಸರಾ
ದರ್ಬಾರ್‌ ನಡೆಯಲಿದೆ.

ಸೆ. 28ರಂದು ಶ್ರೀ ಶಾರದಾಂಬಾ ಮಹಾಭಿಷೇಕ ಜರುಗಲಿದ್ದು, ಅಂದು ಶಾರದಾಮಾತೆಗೆ ಜಗತ್ಪ್ರಸೂತಿಕ ಅಲಂಕಾರ ಮಾಡಲಾಗುತ್ತದೆ. ಸೆ. 29ರಂದು ಶ್ರೀ ಶಾರದಾ ಪ್ರತಿಷ್ಠೆ ಹಾಗೂ ಬ್ರಾಹ್ಮೀ ಅಲಂಕಾರ, ಸೆ.30 ಹಂಸವಾಹನಾಲಂಕಾರ, ಅ.1ರಂದು ವೃಷಭ ವಾಹನಾಲಂಕಾರ, ಅ. 2 ಮಯೂರವಾಹನಾಲಂಕಾರ, ಅ.3ರಂದು ಗರುಡವಾಹನಾಲಂಕಾರ, ಶತಚಂಡಿಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ ನಡೆಯಲಿದೆ.

ಅ. 4ರಂದು ಮೋಹಿನಿ ಅಲಂಕಾರ, ಅ. 5ರಂದು ಸರಸ್ವತ್ಯಾವಾಹನೆ ಮತ್ತು ವೀಣಾ
ಶಾರದಾಲಂಕಾರ, ಅ.6 ರಾಜರಾಜೇಶ್ವರಿ ಅಲಂಕಾರ, ಅ.7ರಂದು ಮಹಾನವಮಿ,
ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವ ಪೂಜೆ, ಶಾರದೆಗೆ ಚಾಮುಂಡಿ ಅಲಂಕಾರ, ಅ.8 ಗಜಲಕ್ಷ್ಮೀ ಅಲಂಕಾರ ಮಾಡಲಾಗುತ್ತದೆ. ವಿಜಯದಶಮಿ ದಿನ ಶ್ರೀ ಶಾರದೆಯ ಸನ್ನಿ ಧಿಯಲ್ಲಿ ಲಕ್ಷ್ಮೀ ಹೃದಯ ಹೋಮ, ರಾಮ ಪಟ್ಟಾಭೀಷೇಕ ಸರ್ಗ ಪಾರಾಯಣ, ಸಂಜೆ ವಿಜಯೋತ್ಸವ, ಶಮೀ ಪೂಜೆ ನಡೆಯಲಿದೆ. ಅ.9ರಂದು ಶ್ರೀ ಶಾರದಾಂಬಾ ರಥೋತ್ಸವ, ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಆ ದಿನ ಶಾರದಾಂಬೆಗೆ
ಗಜಲಕ್ಷ್ಮೀ ಅಲಂಕಾರ ಮಾಡಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ: ನವರಾತ್ರಿ ಉತ್ಸವದ ಅಂಗವಾಗಿ ಸೆ. 29ರಿಂದ ಅಕ್ಟೋಬರ್‌ 7ರ ವರೆಗೆ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.29ರಂದು ಬೆಂಗಳೂರಿನ ವಿದ್ವಾನ್‌ ಟಿ.ಆರ್‌.ಶ್ರೀನಾಥ್‌ ಮತ್ತು ಸಂಗಡಿಗರಿಂದ ಕೊಳಲು, ವೀಣೆ ಹಾಗೂ ವಾಯೊಲಿನ್‌ ವಾದನ, ಸೆ.30 ವಿದ್ವಾನ್‌
ಕೆ.ವಿ.ಕೃಷ್ಣಪ್ರಸಾದ್‌ ಹಾಗೂ ತಂಡದಿಂದ ಶಾಸ್ತ್ರೀಯ ಸಂಗೀತ, ಅ.1ರಂದು ಕೊಯಮತ್ತೂರಿನ ಅಪರ್ಣಾ ಮತ್ತು ವೃಂದದ ಹಾಡುಗಾರಿಕೆ, ಅ.2 ಚೆನ್ನೈ ಅಶ್ವಿ‌ನಿ ಹಾಗೂ ಸಂಗಡಿಗರಿಂದ ಹಾಡುಗಾರಿಕೆ, ಅ.3ರಂದು ಚೆನ್ನೈ ಆರ್ಚನಾ ಮತ್ತು ಆರತಿ ಅವರಿಂದ ಶಾಸ್ತ್ರೀಯ ಸಂಗೀತ, ಅ.4ರಂದು ಹೈದರಾಬಾದ್‌ ಶಾರದಾಕುಪ್ಪ ಮತ್ತು ಸಂಗಡಿಗರಿಂದ ಹಾಡುಗಾರಿಕೆ, ಅ.5 ಹೈದರಾಬಾದ್‌ನ ವಿದುಷಿ ಪದ್ಮಾವತಿ ಹಾಗೂ ವೃಂದದವರ ವೀಣಾವಾದನ, ಅ.6 ಬೆಂಗಳೂರಿನ ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ, ಅ.7ರಂದು ಮೈಸೂರು ನಾಗರಾಜ್‌ ಹಾಗೂ ಡಾ| ಮಂಜುನಾಥ್‌ ಮತ್ತು ಸಂಗಡಿಗರ ವಾಯೋಲಿನ್‌ ಸೋಲೋ ಕಾರ್ಯಕ್ರಮ ನಡೆಯಲಿದೆ.

Advertisement

ಧಾರ್ಮಿಕ ಕಾರ್ಯಕ್ರಮ: ಪಾಡ್ಯದಿಂದ ನವಮಿ ವರೆಗೆ ಪ್ರತಿನಿತ್ಯ ವೇದಪುರಾಣೇತಿ ಹಾಸಭಾಷ್ಯ ಪಾರಾಯಣಗಳು, ಉಭಯ ಶ್ರೀಗಳವರಿಂದ ಶ್ರೀ ಶಾರದೆಗೆ ವಿಶೇಷ ಪೂಜೆ, ಬೀದಿ ಉತ್ಸವ, ರಾತ್ರಿ ಜಗದ್ಗುರುಗಳ ಸಿಂಹಾಸನಾರೋಹಣ, ಶ್ರೀ ಶಾರದಾಂಬೆಯ ದಿಂಡೀ ಉತ್ಸವ,
ಮಹಾಮಂಗಳಾರತಿ, ಅಷ್ಟಾವಧಾನಸೇವೆ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next