Advertisement

ಅರಣ್ಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ

05:00 PM Jun 06, 2019 | Team Udayavani |

ಶೃಂಗೇರಿ: ಪಟ್ಟಣ ಹಾಗೂ ನಗರ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಅರಣ್ಯ ನಾಶವಾಗುವುದು ಸಹಜವಾದರೂ, ಅದು ಮಿತಿ ಮೀರಿದ್ದರ ಪರಿಣಾಮ ಕಳೆದ ವರ್ಷ ಕೊಡಗಿನ ದುರಂತವೇ ಸಾಕ್ಷಿಯಾಗಿದೆ ಎಂದು ಸಿವಿಲ್ ಜಡ್ಜ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್‌. ಸೂರ್ಯನಾರಾಯಣ ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಅರಣ್ಯ ಇಲಾಖೆ, ಎನ್ನೆಸ್ಸೆಸ್‌, ಅರಣ್ಯ ಇಲಾಖೆ ಆಶ್ರಯದಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಣ್ಯೀಕರಣ ಕೇವಲ ಕಡತದಲ್ಲಿ ಮಾಡಿದರೆ ಸಾಕಾಗದು. ಅದನ್ನು ವಸ್ತುಶಃ ಕಾರ್ಯರೂಪಕ್ಕೆ ತರಬೇಕು. ಸರಕಾರ ಮಾತ್ರ ಅರಣ್ಯ ಉಳಿಸಲು, ಬೆಳೆಸಲು ಪ್ರಯತ್ನಿಸದರೆ ಅದು ಸಾಧ್ಯವಾಗದು. ನಾವು ನಮ್ಮ ಕೈಲಾದ ಹೋರಾಟವನ್ನು ಪರಿಸರ ಉಳಿವಿಗಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೈಕೋರ್ಟ್‌ ನಿರ್ದೇಶನದಂತೆ ತಾಲೂಕಿನಲ್ಲಿ 15 ಸಾವಿರ ಗಿಡ ನೆಡುವ ಯೋಜನೆ ಹೊಂದಲಾಗಿದೆ ಎಂದರು.

ವೃತ್ತ ನಿರೀಕ್ಷಕ ಆರ್‌.ವಿ. ಗಂಗಾಧರಪ್ಪ ಮಾತನಾಡಿ, ಗಿಡ ನೆಡುವುದೇ ಪರಿಸರ ದಿನಾಚರಣೆಯಾಗದೇ, ಸ್ವಚ್ಚ ಗಾಳಿ, ನೀರು ಇರುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಮನುಷ್ಯರ ದುರಾಸೆಯ ಫಲ ಕಾಡು ಕಡಿಮೆಯಾಗಿದ್ದು, ಕಾಡಿನ ಪ್ರಾಣಿಗಳು ಆಹಾರ ಅರಸಿ ನಗರದತ್ತ ಮುಖ ಮಾಡಿದೆ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಪರಿಸರ ಉಳಿಯುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌. ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ವಲಯಾರಣ್ಯಾಧಿಕಾರಿ ಸಂಪತ್‌ ಕುಮಾರ್‌ ಪಟೇಲ್, ಬಿಇಒ ದಯಾವತಿ, ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಸ್ವಾಮಿ, ಎನ್ನೆಸ್ಸೆಸ್‌ ಸಂಯೋಜಕ ಎ.ಜಿ. ಪ್ರಶಾಂತ್‌, ಬಿ.ಡಿ. ಸಂತೋಷ್‌, ಅಶ್ವಥ್‌ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಜೆಸಿಬಿಎಂ ಕಾಲೇಜು ಎದುರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡವನ್ನು ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next