Advertisement
ಶರನ್ನವರಾತ್ರಿ ಉತ್ಸವದಲ್ಲಿ ತಾಯಿ ಶಾರದೆಗೆ ಪ್ರತಿದಿನ ಬೇರೆ ಬೇರೆ ಅಲಂಕಾರ ಮಾಡಿ ಪೂಜಿಸುವುದು ಇಲ್ಲಿನ ಸಂಪ್ರದಾಯ. ಅ.9ರಂದು ಜಗತ್ಪ್ರಸೂತಿಕ ಅಲಂಕಾರ, ಅ.10-11ರಂದು ಬ್ರಾಹ್ಮೀ ಹಂಸವಾಹಿನಿ, ಅ.12ರಂದು ವೃಷಭಾರೂಢ ಮಾಹೇಶ್ವರಿ, ಅ.13ರಂದು ಮಯೂರ ವಾಹನದಲ್ಲಿ ಕೌಮಾರಿಯಾಗಿ ಶಾರದಾಂಬೆ ಕಂಗೊಳಿಸಲಿ ದ್ದಾಳೆ. ಅ.14ರಂದು ಗರೂಢಾ ರೂಢ ವೈಷ್ಣವಿ, ಅ.15ರಂದು ಸರಸ್ವತಿ ಆವಾಹನೆಯಾಗಿ ವೀಣಾಶಾರದೆ, ಅ.16ರಂದು ರಾಜ ರಾಜೇಶ್ವರಿ, ಅ.17ರಂದು ಮೋಹಿನಿ, ಅ.18 ರಂದು ಸಿಂಹವಾಹಿನಿ ಚಾಮುಂಡಿ, ಅ.19-20 ರಂದು ವಿಜಯೋತ್ಸವದ ಅಂಗವಾಗಿ ಗಜಲಕ್ಷ್ಮಿ ಅಲಂಕಾರ ಮಾಡಿ ಪೂಜಿಸಲಾಗುವುದು.
ನವರಾತ್ರಿಯಲ್ಲಿ ಪ್ರತಿ ದಿನವೂ ಮಠದಲ್ಲಿ ವೇದ, ಪುರಾಣ, ಇತಿಹಾಸ ಭಾಷ್ಯ ಪಾರಾಯಣ, ಉಭಯ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನಡೆಯಲಿದೆ. ಪ್ರತಿದಿನ ಶ್ರೀಗಳ ದಸರಾ ದರ್ಬಾರ್, ಮಹಾಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆಗಳು ನಡೆಯಲಿವೆ.