Advertisement

ಸಮಯಪ್ರಜ್ಞೆ ಮೆರೆದ ದೇವೇಂದ್ರಪ್ಪಗೆ ಸನ್ಮಾನ

04:41 PM Mar 01, 2021 | Team Udayavani |

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಎಸ್‌.ಚಂದ್ರೇಗೌಡ ರವರ  ಮನೆದರೋಡೆ ಪ್ರಕರಣ ಸಂಬಂಧ ಸಮಯಪ್ರಜ್ಞೆ ಮೆರೆದ ಅಗ್ನಿಶಾಮಕ ವಾಹನ ಚಾಲಕ ಎಚ್‌.ಕೆ.ದೇವೇಂದ್ರಪ್ಪ ಅವರ ಕಾರ್ಯವನ್ನು ಶ್ಲಾಘಿಸಿ ಎಸ್‌ಪಿ ಎಂ.ಎಚ್‌.ಅಕ್ಷಯ್‌ ಎಸ್‌ಪಿ ಎಂ.ಎಚ್‌.ಅಕ್ಷಯ್‌ ಸನ್ಮಾನಿಸಿ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು.

Advertisement

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎಚ್‌.ಅಕ್ಷಯ್‌, ದರೋಡೆ ನಡೆಸಿ ಬೈಕ್‌ನಲ್ಲಿ ತಪ್ಪಿಸಿಕೊಂಡು ಹೋಗಲು ಮುಂದಾಗುತ್ತಿದ್ದ ಆರೋಪಿಗಳ ಬೈಕ್‌ಗೆ ಅಗ್ನಿಶಾಮಕ ದಳದ ವಾಹನ ಚಾಲಕ ಎಚ್‌.ಕೆ.ದೇವೇಂದ್ರಪ್ಪ ಅವರು ಪರಿಸ್ಥಿತಿ ಅರಿತು ಸಮಯಪ್ರಜ್ಞೆಯಿಂದ ಬೈಕ್‌ಗೆ ಗುದ್ದಿದ್ದರಿಂದ ಆರೋಪಿಗಳ ಪತ್ತೆಗೆ ಅನುಕೂಲವಾಯಿತು ಎಂದರು.

ಸಾರ್ವಜನಿಕರ ಸಹಾಯ ಮತ್ತು ಪೊಲೀಸ್‌ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ನಡೆದು 2 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದ ಅವರು, ಸಾರ್ವಜನಿಕರ ಸಹಾಯ ಮತ್ತು ಪೊಲೀಸ್‌ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ಶ್ಲಾಘಿಸಿ ಇದೇ ಸಂದರ್ಭದಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಿದರು.

ನಗರದ ದಂಟರಮಕ್ಕಿ ಬಡಾವಣೆಯ ನಿವಾಸಿ ಮೋಹನ್‌ (28) ಹಾಗೂ ಕೆಂಪನಹಳ್ಳಿ ಚಂದ್ರಕಟ್ಟೆಯ ಸಚ್ಚಿನ್‌ ಎಂಬ ಇಬ್ಬರು ಆರೋಪಿಗಳನ್ನು ಬಂ ಧಿಸಿದ್ದು, ಬಂ ಧಿತರಿಂದ 75 ಗ್ರಾಂ. ಚಿನ್ನ 50 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿಗಳ ಪತ್ತೆಗೆ ವೃತ್ತ ನಿರೀಕ್ಷಕ ವಿನೋದ್‌ ಭಟ್‌, ನಗರ ವೃತ್ತ ನಿರೀಕ್ಷಕ ಗುರುಪ್ರಸಾದ್‌ ಒಳಗೊಂಡ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದು, ತಂಡದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್‌ ಸಿಬ್ಬಂದಿಗಳಾದ ಪಿಎಸ್‌ಐ ಮೌನೇಶ್‌, ಎಚ್‌.ಆರ್‌. ವಿನುತ್‌, ಧನಂಜಯ್‌, ಲೋಹಿತ್‌, ಶಶಿಧರ್‌, ಪ್ರವೀಣ, ನವೀನ್‌, ಗಿರೀಶ್‌, ಇಬ್ರಾಹಿಂ, ಪ್ರಸನ್ನ ಅವರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

Advertisement

ಹುಲಿ ಉಗುರು ಮಾರುತ್ತಿದ್ದ ಆರೋಪಿಗಳ ಬಂಧನ: ನಗರದ ರೈಲ್ವೆ ನಿಲ್ದಾಣ ಸಮೀಪದ ರಸ್ತೆಯಲ್ಲಿ ಹುಲಿ ಉಗುರು ಮತ್ತು ಹುಲಿ ಹಲ್ಲುಗಳನ್ನು ಮಾರಾಟಕ್ಕೆ ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬಂಧಿ ಸಿದ್ದಾರೆ ಎಂದು ಎಸ್‌ಪಿ ಎಂ.ಎಚ್‌.ಅಕ್ಷಯ್‌ ತಿಳಿಸಿದರು.

ಬಂಧಿ ತ ಲೋಕೇಶ ಹಾಗೂ ಸಾಗರ ಅವರಿಂದ 8ರಿಂದ 10ಲಕ್ಷ ರೂ. ಮೌಲ್ಯದ ಹುಲಿ ಎರಡು ಉಗುರು, ಹುಲಿ ಚರ್ಮದ ತುಣಕು, ಒಂದು ದೊಡ್ಡ ಕೋರೆ ಹಲ್ಲು, ನಾಲ್ಕು ಸಣ್ಣಹಲ್ಲು, ಹದಿನಾಲ್ಕು ಹಲ್ಲಿನ ಮೂಳೆಭಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಮನೆಗಳ್ಳತನ: ಮೂವರ ಬಂಧನ: ನಗರದಲ್ಲಿ ಮಗೆಗಳ್ಳತನ ನಡೆಸುತ್ತಿದ್ದ ಬೆಂಗಳೂರಿನ ಮೂವರ ತಂಡವನ್ನು ಬಂ ಧಿಸಲಾಗಿದೆ. ಕ್ರಿಮಿನಲ್‌ ಹಿನ್ನೆಲೆಯ ಇಮ್ರಾನ್‌, ಶಹನವಾಜ್‌, ಬಿಲಾಲ್‌ ಬಂ ಧಿತ ಆರೋಪಿಗಳಾಗಿದ್ದು, ಈ ಕಳ್ಳರ ಗುಂಪು ಬೆಂಗಳೂರಿನಲ್ಲಿ ಈಜಿಡ್ರೈವ್‌ ಕಂಪೆನಿಯಿಂದ ಕಾರೊಂದನ್ನು ಬಾಡಿಗೆ ಪಡೆದು ಇತ್ತೀಚೆಗೆ ಜಿಲ್ಲೆಗೆ ಬಂದು ಮಧ್ಯರಾತ್ರಿ ಕಳ್ಳತನಕ್ಕೆ ಸಂಚು ಮಾಡುತ್ತಿದ್ದರು. ಕಳ್ಳರ ತಂಡ ಕಾಳಿದಾಸ ನಗರದಲ್ಲಿ ಕಳ್ಳತನ ಮಾಡಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ಅಡ್ಡ ಹಾಕಿದರೂ ನಿಲ್ಲಿಸದೇ ಪರಾರಿಯಾಗಿದ್ದರು. ಕಾರಿನ ನಂಬರ್‌ ಆಧರಿಸಿ ತನಿಖೆಕೈಗೊಂಡಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಈ ಆರೋಪಿಗಳು ಜಿಲ್ಲೆಯಲ್ಲಿ ನಡೆದ ನಾಲ್ಕು ಕಳ್ಳತನ ಪ್ರಕರಣದ ಆರೋಪಿಗಳಾಗಿದ್ದು, ಅವರು ಕಡೂರು ಪಟ್ಟಣದಲ್ಲಿ ಕಳ್ಳತನಕ್ಕೆ ಸಂಚೊಂದನ್ನು ರೂಪಿಸಿದ್ದರು ಎಂದು ತಿಳಿಸಿದರು.

31 ಆರೋಪಿಗಳ ಬಂಧನ: ಶೃಂಗೇರಿ ತಾಲೂಕಿನ ಗೋಚುವಳ್ಳಿ ಕ್ರಷರ್‌ನಲ್ಲಿ ವಾಸವಿದ್ದ ಅಪ್ರಾಪ್ತ  ವಯಸ್ಸಿನ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಇದುವರೆಗೆ 31 ಆರೋಪಿಗಳನ್ನು ಬಂಧಿ ಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next