Advertisement

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

12:37 PM Jan 09, 2020 | Naveen |

ಶೃಂಗೇರಿ: ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜ.10 ಮತ್ತು 11ರ ಂದು ಶೃಂಗೇರಿ ನಡೆಯುವ 16ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ. ಪಟ್ಟಣದ ವಿದ್ಯಾನಗರದ ಆದಿಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಶಾಮಿಯಾನ ಹಾಕಲಾಗುತ್ತಿದ್ದು, ಎಸ್‌.ವಿ.ಪರಮೇಶ್ವರ ಭಟ್ಟ ಮಹಾದ್ವಾರ ನಿರ್ಮಿಸಲಾಗುತ್ತಿದೆ. ಶ್ರೀ ಬಾಲಗಂಗಾಧರ ಸ್ವಾಮೀಜಿ ಮಹಾ ಮಂಟಪ ಸಿದ್ಧವಾಗುತ್ತಿದೆ.

Advertisement

ಜ.10 ಮತ್ತು 11ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆ ಭರದಿಂದ ಸಾಗಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಅಸಹಕಾರದ ನಡುವೆ ನಡೆಯುತ್ತಿದೆ. ಸಮ್ಮೇಳನದ ಬಗ್ಗೆ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಡಾ| ಶ್ರೀಮಂದಾರ, 13 ಉಪ ಸಮಿತಿಗಳ ಮೂಲಕ ಸಮ್ಮೇಳನದ ಯಶಸ್ಸಿಗೆ ಹಗಲಿರುಳು ಕನ್ನಡಾಭಿಮಾನಿಗಳು ಶ್ರಮಿಸುತ್ತಿದ್ದಾರೆ. ಸಮ್ಮೇಳನ ನಡೆಯುವ ಸ್ಥಳದಲ್ಲಿ ವಸ್ತು ಪ್ರದರ್ಶನ ಹಾಗೂ ಪುಸ್ತಕ ಮಳಿಗೆಯನ್ನು ಆಯೋಜಿಸಲಾಗಿದೆ.

ಅತಿಥಿಗಳು ಮತ್ತು ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಕನ್ನಡಾಭಿಮಾನಿಗಳಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. ಸರಕಾರದ ಆರ್ಥಿಕ ಅನುದಾನ ಸಕಾಲಕ್ಕೆ ದೊರಕದ ಹಿನ್ನೆಲೆಯಲ್ಲಿ ಕಸಾಪ ಮನವಿಗೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಂಕ್‌ ಖಾತೆಗೆ ನೇರವಾಗಿ ಕನ್ನಡಾಭಿಮಾನಿಗಳು 500 ರೂ. ನಿಂದ 25 ಸಾವಿರ ರೂ. ವರೆಗೂ ದೇಣಿಗೆ ಕಳುಹಿಸಿದ್ದಾರೆ. ಇದು ಕನ್ನಡದ ಮೇಲಿನ ಪ್ರೀತಿಯಾಗಿದ್ದು, ಸಹಕರಿಸಿದ ದಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಕಸಾಪ ಸಮ್ಮೇಳನ ಸಮಿತಿಯ ತ್ರಿಮೂರ್ತಿ ಮಾತನಾಡಿ, ಆಹ್ವಾನ ಪತ್ರಿಕೆಯನ್ನು ಕಸಾಪ ಅಜೀವ ಸದಸ್ಯರಿಗೆ ಹಾಗೂ ಸಾಹಿತ್ಯಭಿಮಾನಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದಿದ್ದರೂ ಎರಡು ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಕನ್ನಡ ಭವನವನ್ನು ಸಮ್ಮೇಳನಕ್ಕಾಗಿ ಅಲಂಕರಿಸಲಾಗಿದೆ ಎಂದರು.

ಕಸಾಪ ಸಮ್ಮೇಳನದ ಹಣಕಾಸು ಸಮಿತಿಯ ಕೆ.ಆರ್‌. ವೆಂಕಟೇಶ್‌ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಅನಗತ್ಯ ಖರ್ಚುಗಳಿಗೆ ಸ್ಥಗಿತಗೊಳಿಸಲಾಗಿದೆ. ಸಮ್ಮೇಳನದಲ್ಲಿ ಹಾರ, ತುರಾಯಿಗಳನ್ನು ಬಳಸಲಾಗುತ್ತಿಲ್ಲ. ಅತಿಥಿಗಳಿಗೆ ಕನ್ನಡದ ಪುಸ್ತಕಗಳನ್ನು ನೀಡಲಾಗುತ್ತದೆ. ಮಿತವ್ಯಯದಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಾಹಿತ್ಯಭಿಮಾನಿಗಳು ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಶಬರೀಶ್‌, ರಫೀಕ್‌ ಮತ್ತಿತ ರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next