Advertisement

BJP ಸೋಲಿಸಲು ಹೊಸ ರಂಗಕ್ಕೆ ಶ್ರೀಕಾರ: ಖರ್ಗೆ ನಿವಾಸದಲ್ಲಿ ನಿತೀಶ್‌, ತೇಜಸ್ವಿ ಭೇಟಿ

11:43 PM Apr 12, 2023 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳೆಲ್ಲ ಒಟ್ಟಾಗಿ ಸೆಣಸುವ ನಿಟ್ಟಿನಲ್ಲಿ ಹೊಸ ರಾಜಕೀಯ ರಂಗ ರಚನೆ ಮಾಡುವ ಹೊಸ ಪ್ರಯತ್ನ ಶುರುವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಆರ್‌ಜೆಡಿ ನಾಯಕ ಮತ್ತು ಡಿಸಿಎಂ ತೇಜಸ್ವಿ ಯಾದವ್‌ ಅವರು ಬುಧವಾರ ಹೊಸದಿಲ್ಲಿ­ಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ವಿಪಕ್ಷಗಳನ್ನು ಒಂದೇ ವೇದಿಕೆಯ ವ್ಯಾಪ್ತಿಯಲ್ಲಿ ತರುವ ಬಗ್ಗೆ ಮಾತು ಕತೆಗಳನ್ನು ನಡೆಸಲಾಗಿದೆ. ಇದೇ ಮೊದಲ ಬಾರಿಗೆ ವಿಪಕ್ಷಗಳೆಲ್ಲವೂ ಒಟ್ಟಾಗುವ ಬಗ್ಗೆ ಮಾತುಕತೆಗಳು ನಡೆದಿವೆ.

Advertisement

ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಮಲ್ಲಿಕಾರ್ಜುನ ಖರ್ಗೆ “ದೇಶದಲ್ಲಿ ಸಂವಿಧಾನ ಮತ್ತು ಪ್ರಜಾ­ಪ್ರಭು ತ್ವದ ರಕ್ಷಣೆಗಾಗಿ ಎಲ್ಲ ವಿಪಕ್ಷಗಳೂ ಒಗ್ಗೂಡಲಿವೆ. ಮಾತ್ರವಲ್ಲದೆ, ದೇಶಕ್ಕೆ ಒಂದು ಹೊಸ ದಾರಿಯನ್ನು ತೋರಿಸಲಿವೆ” ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾ­ಡಿದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, “ವಿಪಕ್ಷಗಳೆಲ್ಲವೂ ಒಂದೇ ವೇದಿಕೆಯಡಿ ಬರಲಿದ್ದು, ಅಲ್ಲಿ ದೇಶಕ್ಕಾಗಿ ಒಂದು ದಿಕ್ಸೂಚಿ ಚಿಂತನೆಯ ಬಗ್ಗೆ ಚರ್ಚೆ ಮಾಡಿ ಅಂತಿಮಗೊಳಿಸಲಿವೆ. ಬಳಿಕ ಅದನ್ನು ದೇಶದ ಜನರ ಮುಂದೆ ಇರಿಸಲಿವೆ” ಎಂದರು. ಇದೊಂದು ಐತಿಹಾಸಿಕ ಹೆಜ್ಜೆ ಎಂದು ರಾಹುಲ್‌ ಗಾಂಧಿ ಹೇಳಿಕೊಂಡರು.

ಐಕ್ಯಮತದಲ್ಲಿ ಕೆಲಸಕ್ಕೆ ಸಿದ್ಧ: ಬಿಹಾರ ಸಿಎಂ ನಿತೀಶ್‌ ಮಾತನಾಡಿ “ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮುಂದುವರಿಯ­ಲಿದೆ. ಮುಂದಿನ ಹಂತದಲ್ಲಿ ಎಲ್ಲರೂ ಕುಳಿತು ಮಾತಾಡಲಿದ್ದೇವೆ. ಬುಧವಾರದ ಸಭೆ ಎಲ್ಲದಕ್ಕೂ ಶ್ರೀಕಾರವಾಗಲಿದೆ” ಎಂದು ಹೇಳಿದ್ದಾರೆ.

ಖರ್ಗೆ ನಿವಾಸದಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌, ಡಿಸಿಎಂ ತೇಜಸ್ವಿ ಯಾದವ್‌, ರಾಹುಲ್‌ ಗಾಂಧಿ ಮತ್ತು ಇತರ ಪ್ರಮುಖರು ಮಧ್ಯಾಹ್ನದ ಭೋಜ ನವನ್ನೂ ಸವಿದಿದ್ದಾರೆ. ಡಿಎಂಕೆ ಹಾಗೂ ಇತರ ಪಕ್ಷಗಳ ಜತೆ ಮಾತನಾಡುವ ಹೊಣೆ ಖರ್ಗೆ ಅವರಿಗೆ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next