Advertisement

ಕ್ಷಮೆ ಯಾಚಿಸಿದ ಬಳಿಕ ಖೇಲ್‌ರತ್ನಕ್ಕೆ ಶ್ರೀಕಾಂತ್‌ ಹೆಸರು

10:21 PM Jun 19, 2020 | Sriram |

ಹೊಸದಿಲ್ಲಿ: ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಿದ ಬಳಿಕ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರ ಕೆ. ಶ್ರೀಕಾಂತ್‌ ಹೆಸರನ್ನು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಶುಕ್ರವಾರ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ (ಬಿಎಐ) ಇದನ್ನು ಪ್ರಕಟಿಸಿತು.

Advertisement

ಕಳೆದ ಫೆಬ್ರವರಿಯಲ್ಲಿ ಮನಿಲಾದಲ್ಲಿ ನಡೆದ ಏಶ್ಯನ್‌ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ನಲ್ಲಿ ಆಡದ ಕೆ. ಶ್ರೀಕಾಂತ್‌ ಬಾರ್ಸಿಲೋನಾದಲ್ಲಿ ಮತ್ತೂಂದು ಕೂಟವನ್ನಾಡಲು ತೆರಳಿದ್ದರು. ಇವರೊಂದಿಗೆ ಎಚ್‌.ಎಸ್‌. ಪ್ರಣಯ್‌ ಕೂಡ ಇದ್ದರು. ಇದಕ್ಕಾಗಿ ಬಿಎಐ ಇಬ್ಬರಿಗೂ ನೊಟೀಸ್‌ ಜಾರಿ ಮಾಡಿತ್ತು.

ಅನಂತರ ತನ್ನನ್ನು ಬಿಎಐ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡದ ಕಾರಣ ಎಚ್‌.ಎಸ್‌. ಪ್ರಣಯ್‌ ಅಸಮಾಧಾನ ವ್ಯಕ್ತಪಡಿಸಿದದ್ದರು. ಆಗ ಪ್ರಣಯ್‌ ಅವರನ್ನು ಬೆಂಬಲಿಸಿ ಶ್ರೀಕಾಂತ್‌ ಹೇಳಿಕೆ ನೀಡಿದ್ದರು. ಅಶಿಸ್ತಿನ ಕಾರಣ ಇವರಿಬ್ಬರನ್ನೂ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸು ಮಾಡಿರಲಿಲ್ಲ.

ಪ್ರಣಯ್‌ ಹೆಸರು ಕಡೆಗಣನೆ
ಈಗ ಶ್ರೀಕಾಂತ್‌ ಹೆಸರನ್ನು ಖೇಲ್‌ರತ್ನಕ್ಕೆ ಪರಿಗಣಿಸಲಾಗಿದೆ. ಆದರೆ ಪ್ರಣಯ್‌ ಅವರನ್ನು ಕಡೆಗಣಿಸಲಾಗಿದೆ. ಬಿಎಐ ವಿರುದ್ಧ ಆಕ್ರೋಶದ ಹೇಳಿಕೆ ನೀಡಿದ್ದಕ್ಕೆ 15 ದಿನಗಳಲ್ಲಿ ಉತ್ತರಿಸಬೇಕೆಂದು ಅವರಿಗೆ ಸೂಚಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next