Advertisement
ಅರ್ಜುನ ಪ್ರಶಸ್ತಿಗೆ ಮಿಡ್‌ಫಿಲ್ಡರ್ ಚಿಂಗ್ಲೆನ್ಸಾನ ಸಿಂಗ್, ಫಾರ್ವರ್ಡ್ ಆಟಗಾರ ಅಕ್ಷದೀಪ್ ಸಿಂಗ್ ಹಾಗೂ ಮಹಿಳಾ ವಿಭಾಗ ದಿಂದ ದೀಪಿಕಾ ಹೆಸರನ್ನು ಶಿಫಾರಸು ಮಾಡಲಾಗಿದೆ. ಧ್ಯಾನ್‌ಚಂದ್ ಜೀವಮಾನ ಶ್ರೇಷ್ಠ ಪ್ರಶಸ್ತಿಗೆ ಆರ್.ಪಿ. ಸಿಂಗ್ ಹೆಸರು ಮತ್ತು ಸಂದೀಪ್ ಕೌರ್ ಹೆಸರನ್ನು ಶಿಫಾರಸು ಮಾಡಲಾಗಿದೆ. ದ್ರೋಣಾ ಚಾರ್ಯಕ್ಕೆ ಬಲ್ಜಿತ್ ಸಿಂಗ್, ಬಿಎಸ್. ಚೌವಾಣ್, ರೊಮೇಶ್ ಪಿ. ಹೆಸರು ಕೂಡ ಶಿಫಾರಸುಗೊಂಡಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಕೇರಳ ಮೂಲದ ಗೋಲ್‌ಕೀಪರ್ ಶ್ರೀಜೇಶ್ ಭಾರತ ಹಾಕಿಯ ಗೋಡೆ. ಪ್ರಬಲ ಪೈಪೋಟಿಯ ನಡುವೆಯೂ 2006ರಿಂದ ಭಾರತ ತಂಡದ ಅವಿಭಾಜ್ಯ ಅಂಗವೇ ಆಗಿ ದ್ದಾರೆ. ವಿಶ್ವಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರೆಂಬುದು ಶ್ರೀಜೇಶ್ ಹಿರಿಮೆ. 30 ವರ್ಷದ ಶ್ರೀಜೇಶ್ ಭಾರತವನ್ನು 200 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ. 2014, 2018 ವಿಶ್ವಕಪ್ ಕೂಟ ಹಾಗೂ 2012, 2016 ಒಲಿಂಪಿಕ್ಸ್ ಕೂಟಗಳಲ್ಲಿ ಭಾರ ತವನ್ನು ಪ್ರತಿನಿಧಿಸಿದ್ದು ಅವಿಸ್ಮರಣೀಯ. 2014ರ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ, 2018 ಏಶ್ಯನ್ ಗೇಮ್ಸ್‌ನಲ್ಲಿ ಕಂಚು, 2016, 2018 ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದಾರೆ. ಭಾರತ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2015ರಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆ ಶ್ರೀಜೇಶ್ ಅವರದು.