Advertisement

ಕೋಮು ಭಾವನೆ ಕೆರಳಿಸಿ ಮತ ಗಿಟ್ಟಿಸುವ ಹುನ್ನಾರ: ಶ್ರೀಧರನ್‌

11:08 PM Oct 10, 2019 | sudhir |

ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಎಡಬಲ ಉಭಯ ರಂಗಗಳು ಕೋಮು ಭಾವನೆಯನ್ನು ಕೆರಳಿಸಿ ಮತ ಗಿಟ್ಟಿಸುವ ಹುನ್ನಾರ ಹೂಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನ್ಯಾಯವಾದಿ ಪಿ.ಎಸ್‌. ಶ್ರೀಧರನ್‌ ಪಿಳ್ಳೆಯವರು ಆರೋಪಿಸಿದರು.

Advertisement

ಎನ್‌ಡಿಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಚುನಾವಣ ಪ್ರಚಾರ ಸಭೆ ಯನ್ನು ಕುಂಬಳೆ ಬಳಿಯ ನಾಯ್ಕಪಿನಲ್ಲಿ ಉದ್ಘಾಟಿಸಿ ಮಾತನಾಡಿದ ಪಿಳ್ಳೆಯವರು ವಿಪಕ್ಷಗಳ ಭಾರೀ ಅಪಪಪ್ರಚಾರದ ವಿರುದ್ಧ ಮತದಾರರು ಬಿಜೆಪಿಗೆ ಮತ ನೀಡಿ ನರೇಂದ್ರ ಮೋದಿಯವರನ್ನು ದ್ವಿತೀಯ ಬಾರಿಗೆ ಅಧಿಕಾರಕ್ಕೇರಿಸಿರುವರು.ಇದ ರಂತೆ ಕೇರಳದ ಉಪ ಚುನಾವಣೆಯಲ್ಲಿ ಉಭಯ ರಂಗಗಳನ್ನು ಸೋಲಿಸಿ ಎನ್‌ಡಿಎ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಲಿರು ವರೆಂದರು. ಕಾಂಗ್ರೆಸ್‌ ಪಕ್ಷವಿಂದು ಮುಳು ಗುವ ದೋಣಿಯಾಗಿದ್ದರೂ ಆ ಪಕ್ಷಕ್ಕಿನ್ನೂ ಬುದ್ಧಿ ಬಂದಿಲ್ಲ. ಕೇವಲ ಕೇಂದ್ರ ಸರಕಾರ ಮತ್ತು ಬಿಜೆಪಿಯನ್ನು ಆರೋಪಿಸುವುದೇ ಆ ಪಕ್ಷದ ಪ್ರಧಾನ ಅಜೆಂಡ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next