Advertisement

ಶ್ರೀಯೋಗಾನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

02:11 PM May 20, 2019 | Team Udayavani |

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಯೋಗಾ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು.

Advertisement

ಶ್ರೀ ಯೋಗಾನಾರಸಿಂಹಸ್ವಾಮಿ ಮೂಲ ವಿಗ್ರಹಕ್ಕೆ ಹಾಲು, ಜೇನುತುಪ್ಪದ ಅಭಿಷೇಕದ ನಂತರ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿ ಸಲಾಗಿತ್ತು. ವಿವಿಧ ಹೂವುಗಳಿಂದ ಅಲಂಕರಿಸಿದ್ದ ಶ್ರೀದೇವಿ, ಭೂ ದೇವಿಯರೊಂದಿಗೆ ವಿರಾಜ ಮಾನನಾಗಿದ್ದ ಶ್ರೀ ಯೋಗಾನರಸಿಂಹಸ್ವಾಮಿ ಉತ್ಸವಮೂರ್ತಿಯನ್ನು ಸ್ಥಳೀಯ ವೇದ ಬ್ರಹ್ಮಶ್ರೀ ನಾರಾಯಣ ಶಾಸ್ತ್ರಿ, ನಂಜುಂಡ ಭಟ್, ಹಿರಿಯಣ್ಣರವರ ನೇತೃತ್ವದಲ್ಲಿ ವಿಪ್ರ ಬಾಂಧವರು ವೇದ, ಅರುಣ, ವಿಷ್ಣು ಮತ್ತು ಲಕ್ಷ್ಮಿ ಸಹಸ್ರನಾಮದೊಂದಿಗೆ ಪ್ರಾಕಾರದಲ್ಲಿರುವ ಶ್ರೀ ರಾಮಾನುಜಾಚಾರ್ಯ, ಶ್ರೀ ಸುದರ್ಶನ, ಶ್ರೀ ಆಂಜನೇಯಸ್ವಾಮಿ ಮುಂತಾದ ಮಂಟಪಗಳಲ್ಲಿ ಭಕ್ತರಿಂದ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಬ್ರಹ್ಮ ರಥೋತ್ಸವಕ್ಕೆ ತಶೀಲ್ದಾರ್‌ ಎಂ.ವಿ. ರೂಪಾ ಚಾಲನೆ ನೀಡಿದರು. ರಥೋತ್ಸವದಲ್ಲಿ ನೆರೆದಿದ್ದ ಸಾವಿರರು ಭಕ್ತರು ಗೋವಿಂದ ನಾಮ ಸ್ಮರಣೆಯೊಂದಿಗೆ ಉಘೇ..ಉಘೇ ಎನ್ನುತ್ತಾ ರಥವನ್ನು ಭಕ್ತಿ ಭಾವ ದೊಂದಿಗೆ ಎಳೆದು ಪುನೀತರಾದರು. ರಥೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಪಟ್ಟಣದ ಒಕ್ಕಲಿಗರ ಕಲ್ಯಾಣಮಂಟಪದಲ್ಲಿ ಭಕ್ತಾದಿಗಳಿಗೆ ವಿಪ್ರ ಬಾಂಧವರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಪ್ರತಿಭಾ ಪುರಸ್ಕಾರ: ವಿವಿಧ ರೀತಿಯ ಸಮಾಜ ಸೇವೆಯಿಂದ ಗುರುತಿಸಿಕೊಂಡಿರುವ ಸ್ಥಳೀಯ ವಿಪ್ರ ಸೇವಾ ಸಮಿತಿಯಿಂದ ಈ ವರ್ಷವೂ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಶಿಕ್ಷಕ ನಂದನ್‌ ಅವರ ಪುತ್ರ ಗೌತಮ್‌ ಎಸ್‌ಎಸ್‌ಎಲ್ಸಿಯಲ್ಲಿ ಶೇ.92 ಮತ್ತು ಚಂದ್ರು ಪುತ್ರಿ ಐಶ್ವರ್ಯ ಶೇ.62ರಷ್ಟು ಅಂಕಗಳನ್ನು ಪಡೆದಿದ್ದು ಇವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next