Advertisement

ಶ್ರೀ ವೆಂಕಟರಮಣ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ,ಪೂಜೆ 

01:53 PM Jul 29, 2018 | Team Udayavani |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನ ಮಂಡಳಿಯವರಿಂದ ಆಷಾಢ ಏಕಾದಶಿ ಪ್ರಯುಕ್ತ ಭಜನ ಕಾರ್ಯಕ್ರಮ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿವಿಧೆಡೆಗಳಲ್ಲಿ ಜರಗಿತು.

Advertisement

ಪೂರ್ವಾಹ್ನ 10 ರಿಂದ ಸಮಿತಿಯ ವಸಾಯಿರೋಡ್‌ ಬಾಲಾಜಿ ಮಂದಿರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವೇದಮೂರ್ತಿ ಗಿರಿಧರ ಭಟ್‌ ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಡೆಸಿ ಶ್ರೀ ವೆಂಕರಮಣ, ವಿಠೊಭಾ ರಖುಮಾಯಿ ಮತ್ತು ಇತರ ಪರಿವಾರ ದೇವರಿಗೆ ಆರತಿ ನಡೆಯಿತು. ಪ್ರಸಾದ ರೂಪದಲ್ಲಿ ಸಮಿತಿಯ ಸಂಚಾಲಕ ದೇವೇಂದ್ರ ಭಕ್ತ ಇವರಿಂದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಪರಾಹ್ನ 12 ರಿಂದ ವಸಾಯಿರೋಡ್‌ ಜಿಎಸ್‌ಬಿ ಶಾಂತಿಧಾಮ ಸೇವಾ ಸಮಿತಿಯವರಿಂದ ಪ್ರಸಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ 4.30 ರಿಂದ ದಹಿಸರ್‌ ಶ್ರೀ ಕಾಶೀ ಮಠ ವಿಠuಲ ರಖುಮಾಯಿ ಮಂದಿರದಲ್ಲಿ ಭಜನ ಕಾರ್ಯಕ್ರಮ ನಡೆಯಿತು.

ರಾತ್ರಿ 8 ರಿಂದ 10 ರವರೆಗೆ ವಡಾಲ ಶ್ರೀ ರಾಮಮಂದಿರದಲ್ಲಿ ಭಜನ ಕಾರ್ಯಕ್ರಮ ನೆರವೇರಿತು. ಮಂಡಳಿಯವರು ಕನ್ನಡ, ಕೊಂಕಣಿ, ಮರಾಠಿ, ಹಿಂದಿ ಭಜನೆಗಳನ್ನು ಮುಖ್ಯವಾಗಿ ವಿಠuಲನ ಭಜನೆಗಳನ್ನು ಹಾಡಿ ನೆರೆದ ಭಕ್ತಾಭಿಮಾನಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ನಿಡ್ಡೋಡಿ ಪ್ರಸಾದ್‌ ಪ್ರಭು, ಪ್ರಕಾಶ್‌ ಪ್ರಭು, ಮಾಧವ ಕಾಮತ್‌, ತಬಲಾದಲ್ಲಿ ಅಮೇಯ ಪೈ, ಸತೀಶ್‌ ಕಾಮತ್‌, ಅವನೀಕಾಂತ್‌ ಬೋರ್ಕರ್‌, ಪಖ್ವಾಜ್‌ನಲ್ಲಿ ಗಣೇಶ್‌ ಪೈ, ಅಶೋಕ್‌ ಶಿಂಧೆ, ಸ್ವಪ್ನಿàಲ್‌ ಚವಾಣ್‌ ಮೊದಲಾದವರು ಸಹಕರಿಸಿದರು.

ವೇದಮೂರ್ತಿ ಅನಂತ ಸುಧಾಮ ಭಟ್‌ ಅವರ ಹಸ್ತದಿಂದ ವಿಠೊಬಾ ರಖುಮಾಯಿ ವಿಗ್ರಹಕ್ಕೆ ಮಹಾಮಂಗಳಾರತಿ ನಡೆಯಿತು. ಬಾಲಾಜಿ ಸೇವಾ ಸಮಿತಿಯವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು. ದಹಿಸರ್‌ ಮತ್ತು ವಡಾಲದಲ್ಲಿ ಸಮಿತಿಯವರಿಂದ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಸಾಯಿರೋಡ್‌ ಶಾಂತಿಧಾಮ ಸೇವಾ ಸಮಿತಿಯವರಿಂದ ಮತ್ತು ದಹಿಸರ್‌ ಶ್ರೀ ಕಾಶೀ ಮಠದ ಸಮಿತಿಯವರಿಂದ ಬಾಳಾ ಸೇವಾ ಸಮಿತಿಯ ಭಜನಾ ಮಂಡಳಿಯವರನ್ನು ಗೌರವಿಸಲಾಯಿತು.

ಶಾಂತಿಧಾಮ ಸೇವಾ ಸಮಿತಿಯ ವಿಶ್ವಸ್ತ ರಾದ ಲಕ್ಷ್ಮೀ ನರಸಿಂಹ ಪ್ರಭು, ನರಸಿಂಹ ಅನಂತ ಪ್ರಭು, ಅಭಿಜಿತ್‌ ನರಸಿಂಹ ಪ್ರಭು, ದಹಿಸರ್‌ ಕಾಶಿ ಮಠದ ಅಧ್ಯಕ್ಷ ಮೋಹನ್‌ದಾಸ್‌ ಮಲ್ಯ, ಕಾರ್ಯದರ್ಶಿ ಮಧುಸೂದನ್‌ ಪೈ, ವಡಾಲ ಶ್ರೀ ರಾಮಮಂದಿರದ ಕಮಲಾಕ್ಷ ಸರಾಫ್‌, ವಿಜಯ ನಾಯಕ್‌, ಮಧುಕರ ಪೈ, ಇತರ ಸದಸ್ಯರು ಸಹಕರಿಸಿದರು. ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷ ತಾರನಾಥ ಪೈ, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಇತರ ಪದಾಧಿಕಾರಿಗಳು, ಸದಸ್ಯರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next