Advertisement

“ಭಾಗವತದ ಪಠನ, ಶ್ರವಣ, ಮನನದಿಂದ ಆತ್ಮನಿರ್ಭರತೆ ಸಾಧ್ಯ’

08:27 PM Sep 29, 2021 | Team Udayavani |

ಉಡುಪಿ: ಬದುಕಿನಲ್ಲಿ ಭಗವಂತನ ಪ್ರೀತಿಯನ್ನು ಹೇಗೆ ಸಂಪಾದಿಸಬೇಕು, ಹೇಗೆ ನಮ್ಮ ನಡೆತೆಯನ್ನು ತಿದ್ದಿಕೊಳ್ಳಬೇಕು ಎನ್ನುವ ಸಂದೇಶವನ್ನು ಭಾಗವತದಂತಹ ಕೃತಿಗಳು ಜನಸಾಮಾನ್ಯರಿಗೆ ಕಲಿಸಿಕೊಡುತ್ತವೆ. ತನ್ಮೂಲಕ ವೈಯಕ್ತಿಕ, ಸಾಮಾಜಿಕ ಸ್ಥಳಗಳಲ್ಲಿ ಆತ್ಮನಿರ್ಭರತೆ ಸಾಧ್ಯ ಎಂದು ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

Advertisement

ಉಡುಪಿ ಪುತ್ತೂರು ಸುಬ್ರಹ್ಮಣ್ಯನಗರದ ವಿದ್ಯಾದೇಗುಲದ ಜ್ಞಾನ ಮಂಟಪದಲ್ಲಿ ವಿ| ರಾಘವೇಂದ್ರ ಉಪಾಧ್ಯಾಯ ಅವರು ನಡೆಸಿಕೊಟ್ಟ ಶ್ರೀಮದ್ಭಾಗವತ ಸಪ್ತಾಹ ಪ್ರವಚನದ ಮಂಗಲೋತ್ಸವದಲ್ಲಿ ಅವರು ತಮ್ಮ ಪಟ್ಟದ ದೇವರ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಬಾಲ್ಯದಲ್ಲೇ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವ ವಿಧಾನವನ್ನು ಧ್ರುವ, ಪ್ರಹ್ಲಾದರ ಭಕ್ತಿ-ಸಾಧನೆಗಳು ಪರೋಕ್ಷವಾಗಿ ಭೋದಿಸುತ್ತವೆ. ವ್ಯಕ್ತಿ ಸಮಾಜದಲ್ಲಿ ಇದ್ದುಕೊಂಡೇ ಧರ್ಮಸಾಧನೆ ಹಾಗೂ ಆಧ್ಯಾತ್ಮಿಕ ಸಾಧನೆ ನಡೆಸುತ್ತಾ ತನ್ನ ವ್ಯವಹಾರಗಳನ್ನು ಪವಿತ್ರಗೊಳಿಸಬೇಕೆನ್ನುವ ಆರೋಗ್ಯಕರ ಸಂದೇಶ ಭಾಗವತದಲ್ಲಿದೆ. ಇದು ಆತ್ಮನಿರ್ಭರತೆಯ ಆವಶ್ಯಕತೆ ಬಗ್ಗೆ ಗಮನ ನೀಡಬೇಕಾದ ಕಾಲ ಎಂದು ನುಡಿದರು.

ರೋಗ ರುಜಿನಗಳನ್ನು ಗೆದ್ದು, ದೈಹಿಕ-ಮಾನಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳುವುದರೊಂದಿಗೆ ದೈವಶಕ್ತಿಯ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳಬೇಕಾದ ಕಾಲ ಇದಾಗಿದೆ. ಭಾಗವತದಂತಹ ಉತ್ಕೃಷ್ಟ ಧರ್ಮ ಗ್ರಂಥಗಳು ಆತ್ಮವಿಶ್ವಾಸವನ್ನು ಹೆೆಚ್ಚಿಸಿ ನಮ್ಮ ಅಭಿವೃದ್ಧಿಗೆ ಕಾರಣವಾಗಬಲ್ಲವು ಎಂದು ಶ್ರೀಪಾದರು ನುಡಿದರು.

ಕುಟುಂಬದ ಹಿರಿಯ ಬಂಧು ಮೃತರಾದ ಸಂದರ್ಭ ಈ ಶುಭಪ್ರದ ಕಾರ್ಯ ಕ್ರಮವನ್ನು ಆಯೋಜಿಸಿ ವಿದ್ವಾಂಸರ ಮೂಲಕ ನಡೆಸಿಕೊಟ್ಟ ವಿದ್ಯಾನಿಧಿ ಸಮಿತಿ ಸ್ಥಾಪಕಾಧ್ಯಕ್ಷ ಮಾಧವ ಉಪಾಧ್ಯಾಯ ಮತ್ತು ಅವರ ಬಂಧುಗಳನ್ನು ಅಭಿನಂದಿಸಿ ಆಶೀರ್ವದಿಸಿದರು.

Advertisement

ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next