Advertisement

ಪುನಃಪ್ರತಿಷ್ಠಾ ರಜತಮಹೋತ್ಸವ: ಧಾರ್ಮಿಕ ಕಾರ್ಯಕ್ರಮ

09:30 PM Apr 27, 2019 | Sriram |

ಮಹಾನಗರ: ಗುರುಪುರದ ಶ್ರೀಸತ್ಯ ದೇವತಾ ಧರ್ಮ ದೇವತಾ ಮಹೋತ್ಸವ ಸಮಿತಿಯಿಂದ ಜರಗುತ್ತಿರುವ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿ ರದ ಪುನಃ ಪ್ರತಿಷ್ಠಾ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಎ. 27ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Advertisement

ಬೆಳಗ್ಗೆ 8ರಿಂದ ಶ್ರೀ ಸತ್ಯ ದೇವತಾ ಮಂದಿರದಲ್ಲಿ ನಿರ್ಮಾಲ್ಯ ವಿಸರ್ಜನೆ, ಪ್ರಸ ನ್ನತಾ ಪೂಜೆ ಜರಗಿತು. ಬೆಳಗ್ಗೆ 9.30ರಿಂದ ಶ್ರೀ ಗುರು ಸ್ವಾಮಿ ನಾರಾಯಣ ದೇವ ಸ್ಥಾನದಲ್ಲಿ ಪ್ರಾರ್ಥನೆ, ಗಣಪತಿ ಪೂಜನೆ, ಪುಣ್ಯಾಹ ವಾಚನೆ, ಆವಾಹಿತ ದೇವತಾ ಪೂಜನೆ, ಹವನ ನಡೆಯಿತು.

ಬೆಳಗ್ಗೆ 9.30ರಿಂದ ಶ್ರೀ ಸತ್ಯ ದೇವತಾ ಮಂದಿರದಲ್ಲಿ ಶತಕಲಾಭಿಷೇಕ, ಭಜನ ಸಂಕೀರ್ತನೆ ನಡೆಯಿತು. 12ಕ್ಕೆ ಪೂರ್ಣಾ ಹುತಿ, ಮಹಾಪೂಜೆ, ಬ್ರಾಹ್ಮಣ ಪೂಜೆ, ದಂಪತಿ ಪೂಜೆ ನೆರೆವೇರಿ 1 ಗಂಟೆಗೆ ಸಮಾ ರಾಧನೆ ನೆರವೇರಿತು. ಸಂಜೆ 5.30ಕ್ಕೆ ಪುಷ್ಪ ಉಯ್ನಾಲೆ ಸೇವೆ ನಡೆಯಿತು. 5ರಿಂದ 7ರ ವರೆಗೆ ಭಜನ ಸಂಕೀರ್ತನೆ ನಡೆದು ರಾತ್ರಿ 8 ಗಂಟೆಗೆ ರಾತ್ರಿ ಪೂಜೆ ಹಾಗೂ ಸಮಾರಾಧನೆ ಜರಗಿತು.

ಜಿ. ಜನಾರ್ದನ ಕೃಷ್ಣಭಟ್‌ ಮಂಟಪದ ಸತ್ಯಶ್ರೀ ವೇದಿಕೆಯಲ್ಲಿ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಇಂದಿನ ಕಾರ್ಯಕ್ರಮ
ಎ. 28ರಂದು ಬೆಳಗ್ಗೆ 4.30ಕ್ಕೆ ಪುಣ್ಯಾಹ ಗಣಪತಿಯಾಗ, ಬೆಳಗ್ಗೆ 5ರಿಂದ 5.25: ಶ್ರೀ ನಾಗದೇವರ ಹಾಗೂ ಬ್ರಹ್ಮ ರಕ್ತೇಶ್ವರೀ, ನಂದಿಗೋಣ ಹಾಗೂ ಕ್ಷೇತ್ರಪಾಲ ದೇವರ ಪ್ರತಿಷ್ಠೆ, ತಂಬಿಲ, ಬ್ರಹ್ಮಕಲಶಾಭಿಷೇಕ, ನಾಗದರ್ಶನ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ದೈವಸ್ಥಾನದಲ್ಲಿ ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕಾ³ಲ ಬಲಿ, ಅದಿವಾಸ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next