Advertisement
ಮೊದಲ ದಿನವಾದ ಬುಧವಾರ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಭೀಮೇಶ್ವರ ಜೋಶಿ ಅವರನ್ನು ಗೌರವಿಸಲಾಯಿತು. ಮಂದಿರದ ದರ್ಶನ ಪಾತ್ರಿ ವೇ| ಮೂ| ಜಿ. ಚಂದ್ರಕಾಂತ ಭಟ್ ಗೌರವಿಸಿದರು.
ಬೆಳಗ್ಗೆ 8ಕ್ಕೆ ಶ್ರೀ ಸತ್ಯದೇವತಾ ಮಂದಿರದಲ್ಲಿ ನಿರ್ಮಾಲ್ಯ ವಿಸರ್ಜನೆ, 9.30ಕ್ಕೆ ಪ್ರಸನ್ನತಾ ಪೂಜೆ, 8.30ಕ್ಕೆ ಶ್ರೀ ಗುರು ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ, ಗಣಪತಿ ಪೂಜನೆ, ಪುಣ್ಯಾಹ ವಾಚನೆ, ಆವಾಹಿತ ದೇವತಾ ಪೂಜನೆ, ಹವನ ಆರಂಭ, 9.30ಕ್ಕೆ ಶ್ರೀ ಸತ್ಯದೇವತಾ ಮಂದಿರದಲ್ಲಿ ಶತಕಲಶಾಭಿಷೇಕ ಜರಗಲಿದೆ. 10ರಿಂದ ಭಜನ ಸಂಕೀರ್ತನೆ, 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಬ್ರಾಹ್ಮಣ ಪೂಜೆ, ದಂಪತಿ ಪೂಜೆ, 1ಕ್ಕೆ ಸಮಾರಾಧನೆ, ಸಂಜೆ 5.30ಕ್ಕೆ ಪುಷ್ಪ ಉಯ್ನಾಲೆ ಸೇವೆ, 5ರಿಂದ ಭಜನಾ ಸಂಕೀರ್ತನೆ, ರಾತ್ರಿ 8ಕ್ಕೆ ರಾತ್ರಿ ಪೂಜೆ, 8.30ಕ್ಕೆ ಸಮಾರಾಧನೆ ನಡೆಯಲಿದೆ. ಸತ್ಯಶ್ರೀ ವೇದಿಕೆಯಲ್ಲಿ ಬೆಳಗ್ಗೆ 9.30ರಂದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಆಶೀರ್ವಚನ, ಗಣ್ಯರಿಗೆ ಸಮ್ಮಾನ ನಡೆಯಲಿದೆ. 11ರಿಂದ 1.30ರವರೆಗೆ ಭಜನ ಸಂಕೀರ್ತನೆ, ಸಂಜೆ 5ಕ್ಕೆ ಸಭಾ ಕಾರ್ಯಕ್ರಮ, ಆಶೀರ್ವಚನ, ಗಣ್ಯರಿಗೆ ಸಮ್ಮಾನ ಜರಗಲಿದೆ. 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಗಾಯಕ ಅಜಯ್ ವಾರಿಯರ್ ತಂಡದಿಂದ ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆ, ದೇವದಾಸ ಕಾಪಿಕಾಡ್ ತಂಡದಿಂದ “ಪನಿಯರೆ ಆವಂದಿನ’ ಹಾಸ್ಯ ನಾಟಕ ನಡೆಯಲಿದೆ.