Advertisement
ಹುಬ್ಬಳ್ಳಿಯ ತಿರುಮಲಕೊಪ್ಪ ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರಶಿವನ ಪಂಚ ಮುಖಗಳಿಂದ ಅವತರಿಸಿದವರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಜಾತಿ, ಮತ, ಪಂಥಗಳ ಸಂಕೋಲೆ ಮೀರಿ ಶಿವಾದ್ವೈತ ಸಿದ್ಧಾಂತವನ್ನು ಭೋಧಿಸಿ ಸಕಲರನ್ನು ಉದ್ಧರಿಸಿದರು. ಸತ್ಯ ಧರ್ಮ ಸಂಸ್ಕೃತಿ ಪರಂಪರೆ ಆದರ್ಶ ಮೌಲ್ಯಗಳ ಪುನರುತ್ಥಾನಕ್ಕಾಗಿ ಶ್ರಮಿಸಿದ್ದನ್ನು ಮರೆಯಲಾಗದು ಎಂದರು. 5 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಶಿಲಾಮೂರ್ತಿಯ ಸಂಪೂರ್ಣ ಸೇವೆಯನ್ನು ಹುಬ್ಬಳ್ಳಿ ನಗರದ ಶಿವಮೂರ್ತಯ್ಯ ಚಿಕ್ಕಮಠ ಒಪ್ಪಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
Related Articles
Advertisement
ಸಮಿತಿಯ ಮುಖ್ಯಸ್ಥರಾದ ಶ್ರೀಕಂಠಗೌಡ ಹಿರೇಗೌಡರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಹುಬ್ಬಳ್ಳಿಯ ವಿಶ್ವನಾಥ ಹಿರೇಗೌಡ್ರ ಮತ್ತು ಅಗಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಆಶೀರ್ವಾದ ಪಡೆದರು. ಶಾಂತನಗೌಡ ಹನುಮಂತಗೌಡ್ರ ಮತ್ತು ಪಿ.ಎಸ್. ಹಿರೇಮಠ ಶಿಕ್ಷಕರು ನಿರೂಪಿಸಿದರು. ಹಿರೇಬೂದಿಹಾಳದ ಪ್ರಕಾಶ ಶಾಸ್ತ್ರಿಗಳ ವೈದಿಕತ್ವದಲ್ಲಿ ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು 65 ಜಂಗಮ ವಟುಗಳಿಗೆ ಶಿವದೀಕ್ಷೆ ಅಯ್ನಾಚಾರ ನೆರವೇರಿಸಿ ಶುಭ ಹಾರೈಸಿದರು. ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ಜರುಗಿತು. ಹಲವರು ಭಜನಾ ಸಂಘ, ಸುರಶೆಟ್ಟಿಕೊಪ್ಪದ ಜಗ್ಗಲಿ ಮೇಳದವರು ಪಾಲ್ಗೊಂಡಿದ್ದರು.