Advertisement
ಶ್ರೀರಾಮ ಕೇವಲ ಪುರಾಣ ಪಾತ್ರಕ್ಕಷ್ಟೇ ಸೀಮಿತವಾಗಿರದೆ ಇಡೀ ಸಮಾಜಕ್ಕೆ ಓರ್ವ ಆದರ್ಶಪುರುಷನಾಗಿ ಬೆಳೆದು ನಿಂತಿದ್ದಾನೆ. ಈ ಭರತಖಂಡದಲ್ಲಿ, ವಿಶ್ವದ ಕೋಟ್ಯಂತರ ಭಕ್ತರ, ಅನುಯಾಯಿಗಳ ಪಾಲಿಗೆ ಆರಾಧ್ಯದೇವತೆಯಾಗಿ ತಲೆತಲಾಂತರಗಳಿಂದ ಜನ ಮಾನಸದಲ್ಲಿ ಅಚ್ಚಳಿಯದೆ ಶ್ರೀರಾಮ ಉಳಿದಿ ದ್ದಾನೆಂದರೆ ಆತ ಮಾನುಷಭಾ ವದಲ್ಲಿರುವ ದೈವತ್ವ ಎಂದರೆ ಅದು ಅತಿಶ ಯೋ ಕ್ತಿಯಲ್ಲ. ಇಂತಹ ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದಲ್ಲಿ ಆತನಿಗೊಂದು ಸದೃಢ ದೇವಾಲಯ ನಿರ್ಮಾಣವಾಗಬೇಕೆಂಬ ಶತಮಾನಗಳ ಹೋರಾಟದ ಫಲಶ್ರುತಿಯಾಗಿ ಸುಂದರ ಮಂದಿರ ತಲೆ ಎತ್ತಿ ನಿಂತಿದೆ. ಚರಿತ್ರೆಯ ಪ್ರಮಾದಗಳನ್ನು ಸರಿಪಡಿಸುವ ಕಾರ್ಯವಾಗಿದೆ. ಶ್ರೀರಾಮನ ಜೀವನಗಾಥೆಯನ್ನು ನಾವು ಸಂಪೂರ್ಣವಾಗಿ ಮನನ ಮಾಡಿಕೊಂಡದ್ದೇ ಆದಲ್ಲಿ ಶ್ರೀರಾಮನ ಪಾಲಿಗೆ ಇದು ಅಸಹಜವೇನಲ್ಲ. ಆತ ತನ್ನ ಜೀವನದುದ್ದಕ್ಕೂ ಸಾಕಷ್ಟು ಸಂಕಷ್ಟ, ಸಮಸ್ಯೆ, ಪರೀಕ್ಷೆ, ಸವಾಲುಗಳನ್ನು ಎದುರಿಸಿಕೊಂಡೇ ಬಂದವನು. ಅದೇ ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಕೂಡ ಶ್ರೀರಾಮನ ಶಕ್ತಿಯನ್ನು ಮತ್ತೂಮ್ಮೆ ಸಾಬೀತುಪಡಿಸಿದಂತಾಗಿದೆ. ತನ್ಮೂಲಕ ಶ್ರೀರಾಮನ ಮತ್ತೂಂದು ವನವಾಸವೂ ಅಂತ್ಯಗೊಂಡು, ಪುರುಷೋತ್ತಮನ ಪುನರಾಗಮನಕ್ಕೆ ಅಯೋಧ್ಯೆ ಮಾತ್ರವಲ್ಲ ಇಡೀ ವಿಶ್ವವೇ ಸಾಕ್ಷಿಯಾ ಗುತ್ತಲಿದೆ.
Advertisement
Shri Ram Mandir ಸೌಹಾರ್ದ,ರಾಷ್ಟ್ರೀಯತೆಯ ಪ್ರತೀಕ: ಭಕ್ತಸಾಗರದ ಕೊರಗು ನಿವಾರಣೆ
11:21 PM Jan 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.