ಅಯೋಧ್ಯೆ: ಮರ್ಯಾದಾ ಪುರುಷೋತ್ತಮ ರಾಮನ ಮಂದಿರ ನಿರ್ಮಾಣಕ್ಕಾಗಿ ದೇಶವ್ಯಾಪಿ ಭಕ್ತರು ಭಾರಿ ಬೆಂಬಲವನ್ನು ಸೂಚಿಸಿದ್ದಾರೆ. ನಿರ್ಮಾಣ ಕಾರ್ಯಕ್ಕಾಗಿ ಇದುವರೆಗೆ ಭಕ್ತರಿಂದ ಸಂಗ್ರಹಿಸಿದ ಹಣ 1,511 ಕೋಟಿಗೆ ಮುಟ್ಟಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಜಿ ಸ್ವಾಮಿ ಗೋವಿಂದ ದೇವಗಿರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜನವರಿ 15 ರಿಂದ ದೇಶವ್ಯಾಪಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹವಾಗುತ್ತಿದೆ. ಫೆಬ್ರವರಿ 27ರ ತನಕ ರಾಮ ಭಕ್ತರಿಂದ ದೆಣಿಗೆ ಸಂಗ್ರಹಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದೇಣಿಗಾಗಿ ದೇಶದಾದ್ಯಂತ 4 ಲಕ್ಷ ಗ್ರಾಮಗಳು 11 ಕೋಟಿ ಕುಟುಂಬವನ್ನು ತಲುಪುವ ಗುರಿ ನಮ್ಮದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮನ ಮಂದಿರಕ್ಕೆ ದೇಣಿಗೆ ನೀಡಲು ಜನರು ಕಾತುರರಾಗಿದ್ದಾರೆ. ಜನರಿಗೆ ಇಂತಹದ್ದೊಂದು ಸತ್ಕಾರ್ಯ ಕಾರ್ಯ ಮಾಡುವುದಕ್ಕೆ 492 ವರ್ಷಗಳ ನಂತರ ಅವಕಾಶ ಒದಗಿ ಬಂದಿದೆ ಎಂದು ಅವರು ಸಂತೋಷ ವ್ಯಕ್ತ ಪಡಿಸಿದ್ದಾರೆ.