Advertisement

ಹನುಮಗಿರಿ: ಶ್ರೀ ಕೋದಂಡರಾಮನಿಗೆ ನವಕಾಭಿಷೇಕ

11:19 PM Apr 14, 2019 | Sriram |

ಈಶ್ವರಮಂಗಲ: ಹನುಮಗಿರಿ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತಿದ್ದು, ಶನಿವಾರ ರಾತ್ರಿ ರಾಮನವಮಿ ಪ್ರಯುಕ್ತ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕೋದಂಡರಾಮ ದೇವರಿಗೆ ಅರಿಸಿನ, ಕುಂಕುಮ, ಸಕ್ಕರೆ, ಶ್ರೀಗಂಧ, ರಕ್ತಚಂದನ, ಹಾಲು, ಸಿಯಾಳ, ಸಿಂಧೂರ, ಪುಷ್ಪಾಭಿಷೇಕ ನಡೆಯಿತು.

Advertisement

ಅನಂತರ ಚೆಂಡೆ, ವಾದ್ಯ ಮೆರವಣಿಗೆ ಮೂಲಕ ಪಂಚಮುಖೀ ಆಂಜನೇಯ ಸ್ವಾಮಿಯ ಶ್ರೀ ಕೋದಂಡರಾಮ ದೇವರ ಭೇಟಿ ನಡೆಯಿತು. ಪಂಚಮುಖೀ ಆಂಜನೇಯ ಮತ್ತು ಕೋದಂಡರಾಮ ಕ್ಷೇತ್ರದಲ್ಲಿ ರಂಗಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ, ಧರ್ಮದರ್ಶಿ ಗಳಾದ ಶಿವರಾಮ ಪಿ., ಶಿವರಾಮ ಶರ್ಮ, ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ತಹಶೀಲ್ದಾರ ಡಾ| ಪ್ರದೀಪ ಕುಮಾರ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಭಕ್ತರು ಉಪಸ್ಥಿತರಿದ್ದರು.

ರವಿವಾರ ಬೆಳಗ್ಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಸಾಂಪ್ರದಾಯಿಕ ಭಜನ ಸ್ಪರ್ಧೆ ಶ್ರೀ ಕೋದಂಡರಾಮ ಹಾಗೂ ಶ್ರೀ ಪಂಚಮುಖೀ ಆಂಜನೇಯ ಸನ್ನಿಧಿಯಲ್ಲಿ ಏಕಕಾಲದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮುಂದುವರಿಯಿತು.

ಇಂದು ಭಜನ ಸ್ಪರ್ಧೆ
ಬೆಳಗ್ಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಾಂಪ್ರದಾಯಿಕ ಭಜನ ಸ್ಪರ್ಧೆ ಶ್ರೀ ಕೋದಂಡರಾಮ ಹಾಗೂ ಶ್ರೀ ಪಂಚಮುಖೀ ಆಂಜನೇಯ ಸನ್ನಿಧಿಯಲ್ಲಿ ಏಕಕಾಲದಲ್ಲಿ ಅಪರಾಹ್ನ 2 ಗಂಟೆಯಿಂದ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next