ಡೊಂಬಿವಲಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುವರ್ಯರ 167ನೇ ಜಯಂತ್ಯುತ್ಸವವು ಆ. 23ರಂದು ಸ್ಥಳೀಯ ಕಚೇರಿಯ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.ಬಿಲ್ಲವರ
ಪುರೋಹಿತ ಐತಪ್ಪ ಸುವರ್ಣ, ಸಿ. ಕೆ. ಪೂಜಾರಿ ಮತ್ತು ಧರ್ಮರಾಜ್ ಪೂಜಾರಿಯವರು ಗುರು ಮಂಟಪದ ಅಲಂಕಾರಗೈದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಗುರು ಭಕ್ತರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಭಜನೆ, ಭಕ್ತಿಗೀತೆಗಳ ಗಾಯನ, ಕುಣಿತ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಗುರುಗಳಿಗೆ ಕರ್ಪೂರಾರತಿ, ವಿಶೇಷ ಗುರೂಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ಜರಗಿತು.
ಹಿರಿಯರಾದ ಬಿ. ವೈ. ಸುವರ್ಣ ಅವರು ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಧನೆಗಳನ್ನು ವಿವರಿಸಿ ಗುರುವಂದನೆ ಸಲ್ಲಿಸಿ ಪ್ರಾರ್ಥನೆ ಗೈದರು. ಈ ಸಂದರ್ಭ ಅನ್ನದಾನ ನೀಡಿ ಸಹಕರಿಸಿದ ಲಕ್ಷ್ಮಣ್ ಪೂಜಾರಿ ಹಾಗೂ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಡೊಂಬಿವಲಿ ಶಾಖೆಯ ಮ್ಯಾನೇಜರ್ ರಮೇಶ್ ಸುವರ್ಣ ಅವರನ್ನು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ ಅವರು ಶಾಲು ಹೊದೆಸಿ ಸಮ್ಮಾನಿಸಿದರು. ಭಾರತ್ ಬ್ಯಾಂಕ್‌ನ ಅಧಿಕಾರಿಗಳು, ಪತ್ರಕರ್ತ ರವಿ ಅಂಚನ್, ವಸಂತ್ ಸುವರ್ಣ, ಡೊಂಬಿವಲಿ ಪರಿಸರದ ತುಳು, ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಬಾಂಧವರು, ಹಿತೈಷಿಗಳು ಹಾಗೂ ಗುರುಭಕ್ತರು ಪ್ರಸಾದ ಸ್ವೀಕರಿಸಿದರು. ಮಾಜಿ ಕಾರ್ಯಾಧ್ಯಕ್ಷ ರವಿ ಎಸ್. ಸನಿಲ್ ಸ್ವಾಗತಿಸಿ, ವಂದಿಸಿದರು.
ಇದನ್ನೂ ಓದಿ:ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ: ಬಿಎಸ್‌ವೈ
ಅನ್ನದಾನ ಸೇವಾಕರ್ತರಾಗಿ ಉದ್ಯಮಿ ಲಕ್ಷ್ಮಣ್ ಪೂಜಾರಿ, ಹೂವಿನ ಸೇವಾಕರ್ತ ರಾಗಿ ಕುಶಾ ರವಿ ಸನಿಲ್, ಹಣ್ಣುಹಂಪಲಿನ ಸೇವಾಕರ್ತರಾಗಿ ಗಿರಿಜಾ ಸಂಜೀವ ಪಾಲನ್, ಪ್ರಸಾದದ ಸೇವಾಕರ್ತರಾಗಿ ಟಿ. ಕೆ. ಕೋಟ್ಯಾನ್ ದಂಪತಿಗಳು, ಬೆಳಗ್ಗೆ ಉಪಹಾರದ ಸೇವಾಕರ್ತರಾಗಿ ನಿತ್ಯಾನಂದ್ ಜತ್ತನ್, ತೆಂಗಿನಕಾಯಿಯ ಸೇವಾಕರ್ತರಾಗಿ ಮಂಜಪ್ಪ ಪೂಜಾರಿ ದಂಪತಿ ಹಾಗೂ ರಾಜೇಶ್ ಬಂಗೇರ, ಸಚಿನ್ ಜಿ. ಪೂಜಾರಿ, ರಾಮಚಂದ್ರ ಬಂಗೇರ, ರಾಜು ಜಿ. ಪೂಜಾರಿ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೇಣಿಗೆ, ಹೂವು, ಹಣ್ಣು, ದೀಪದ ಎಣ್ಣೆ ಇತ್ಯಾದಿ ನೀಡಿ ಸಹಕರಿಸಿದರು.
ಸಮಿತಿಯ ಗೌರವ ಕಾರ್ಯಾಧ್ಯಕ್ಷ ಸಿ. ಎನ್. ಕರ್ಕೇರ, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಸ್. ಪಾಲನ್, ಶ್ರೀಧರ ಬಿ. ಆಮೀನ್, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಜತೆ ಕಾರ್ಯದರ್ಶಿ ವಿಟuಲ್ ಪಿ. ಅಮೀನ್, ಸಹಾಯಕ ಕೋಶಾಧಿಕಾರಿ ರಾಜೇಶ್ ಕೋಟ್ಯಾನ್, ಮಂಜಪ್ಪ ಪೂಜಾರಿ, ಜಗನ್ನಾಥ್ ಸನಿಲ್, ಶಿವಾನಂದ್ ಪೂಜಾರಿ, ಈಶ್ವರ ಕೋಟ್ಯಾನ್, ಸಚಿನ್ ಜಿ. ಪೂಜಾರಿ, ಮೋಹನ್ ಜಿ. ಸಾಲ್ಯಾನ್, ಪುರುಷೋತ್ತಮ್ ಪೂಜಾರಿ, ಸಮಿತಿ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.