ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸನ್ಯಾಸದೀಕ್ಷೆ ಸ್ವೀಕರಿಸಲು ಆಗಮಿಸುತ್ತಿರುವ ಯಲ್ಲಾಪುರ ತಾಲೂಕಿನ ಈರಾಪುರ ಗಂಗೇಮನೆಯ ಶ್ರೀ ನಾಗರಾಜ್ ಭಟ್ಟ ಅವರನ್ನು ಶ್ರೀಮಠಕ್ಕೆ ಬರ ಮಾಡಿಕೊಳ್ಳುವ ಕಾರ್ಯಕ್ರಮ ಮಂಗಳವಾರ ನಡೆಯಲಿದೆ.
ಮಾ.18 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಮಾರಂಭ ನಡೆಯಲಿದ್ದು, 22 ಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮ, ಧರ್ಮಸಭೆ ನಡೆಯಲಿದೆ.
ಸ್ವರ್ಣವಲ್ಲೀ ಮಠದ ರಥಬೀದಿಯಲ್ಲಿ ಪೂರ್ಣಕುಂಭ ಸ್ವಾಗತ, ಡೊಳ್ಳು ಕುಣಿತ, ಪಂಚ ವಾದ್ಯಗಳ ಮೂಲಕ ಸಂಜೆ ೪:೩೦ಕ್ಕೆ ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಗುತ್ತಿದೆ. ಬಳಿಕ ಮಠದ ಎಲ್ಲ ದೇವರಿಗೆ ಫಲ ಸಮರ್ಪಿಸಿ ನಿಯೋಜಿತ ಶಿಷ್ಯರಾದ ನಾಗರಾಜ ಭಟ್ಟ ಅವರು ಪ್ರಾರ್ಥಿಸಲಿದ್ದಾರೆ.
ಯಲ್ಲಾಪುರದಿಂದ 150 ಕ್ಕೂ ಅಧಿಕ ಕಾರು ಪರವಾನಗಿ ಪಡೆದಿದ್ದು, ಶೋಭಾಯತ್ರೆಯ ಮಾದರಿಯಲ್ಲಿ ಸ್ವರ್ಣವಲ್ಲೀಯ ತನಕ ಮೆರವಣಿಗೆ ನಡೆಯಲಿದೆ. ನಡು ನಡುವೆ ಶಿಷ್ಯ ಭಕ್ತರು ತಳಿರು ತೋರಣಗಳಿಂದ ಸಿಂಗರಸಿ ಬರಮಾಡಿಕೊಳ್ಳಲಿದ್ದಾರೆ.