ಕುಷ್ಟಗಿ: ಶ್ರೀ ಅನ್ನದಾನೇಶ್ವರ ಮಠದ ಮೂಲಕ ಕುಷ್ಟಗಿ ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಕ್ರಾಂತಿ ಮಾಡುವ ಸಂದರ್ಭಗಳು ಬರಲಿವೆ ಎಂದು ಹಾಲಕೇರಿ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
12 ನೇ ಶತಮಾನದಲ್ಲಿ ಚನ್ನಬಸವಣ್ಣವರು ಕಲ್ಯಾಣ ಪರ್ವಕ್ಕಾಗಿ ಉಳಿವಿ ಕ್ಷೇತ್ರಕ್ಕೆ ಹೋಗುವ ಮಾರ್ಗದಲ್ಲಿ ಈ ಕ್ಷೇತ್ರದಲ್ಲಿ ಬುತ್ತಿ ಬಿಚ್ಚಿ ಪ್ರಸಾದ ಸ್ವೀಕರಿಸಿದರು ಎನ್ನುವ ಐತಿಹ್ಯದ ಹಿನ್ನೆಲೆಯಲ್ಲಿ ಬುತ್ತಿಬಸವೇಶ್ವರ ದೇವಸ್ಥಾನ ಸ್ಥಾಪಿಸಲಾಗಿದೆ. ಷಟಸ್ಥಲ ಚಕ್ರವರ್ತಿ ಎನಿಸಿದ ಜ್ಞಾನನಿಧಿ ಚನ್ನಬಸವಣ್ಣನವರ ಷಟಸ್ಥಲ ಜ್ಞಾನ ತಿಳಿಯಲಿ ಉದ್ದೇಶದ ಹಿನ್ನೆಲೆಯಲ್ಲಿ ಬೆತ್ತದ ಅಜ್ಜ ಅವರು, ಅನ್ನದಾಸೋಹದ ಬೋರ್ಡಿಂಗ್ ಆರಂಭಿಸಿದ್ದರು. ಕಾರಣಾಂತರಗಳಿಂದ ನಿಂತು ಹೋಗಿತ್ತು. ನಂತರದ ವರ್ಷದಲ್ಲಿ ಲಿಂಗೈಕ್ಯ ಅಭಿನವ ಅನ್ನದಾನ ಶಿವಯೋಗಿಗಳು ಪಿ.ಯು. ಕಾಲೇಜ್ ಅರಂಭಿಸಿದ್ದನ್ನು ಸ್ಮರಿಸಿದರು. ಮುಂಬರುವ ದಿನಗಳಲ್ಲಿ ಕುಷ್ಟಗಿ ನಗರದಲ್ಲಿ ಶೈಕ್ಷಣಿಕ ವಿಶೇಷ ಕ್ರಾಂತಿ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಇದೇ ವೇಳೆ ದೊಡ್ಡಬಸನಗೌಡ ಬಯ್ಯಾಪೂರ, ಮಹಾಂತಯ್ಯ ಹಿರೇಮಠ, ಅಂದಪ್ಪ ಹೊಟ್ಟಿ, ಶರಣಪ್ಪ ಕುಡತಿನಿ, ಗೋಪರಪ್ಪ ಕುಡತಿನಿ,ಹಿರಿಯ ವಕೀಲರಾದ ನಾಗಪ್ಪ ಸೂಡಿ, ಭೀಮನಗೌಡ ಪಾಟೀಲ, ವೀರೇಶ ಬಂಗಾರಶೆಟ್ಟರ್, ಮಹಾಂತಯ್ಯ ಅರಳಲಿಮಠ, ಪ್ರಾಚಾರ್ಯ ಶ್ರೀಕಾಂತ್ ಗೌಡ ಪಾಟೀಲ,ಎಂ.ಎಂ.ಮಹಾಲಿಂಗಪುರ , ಕೆ.ಬಿ. ಸ್ಥಾವರಮಠ ಮತ್ತೀತರಿದ್ದರು.