ಶಿರಸಿ: ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಸಾರ್ವಜನಿಕವಾಗಿ ನಡೆಯದ ತಾಲೂಕಿನ ಸ್ವರ್ಣವಲ್ಲೀ ಶ್ರೀ ಲಕ್ಷ್ಮೀ ನರಸಿಂಹ ದೇವರ ಮಹಾರಥೋತ್ಸವ ಈ ಬಾರಿ ನಡೆಸಲು ತೀರ್ಮಾನಿಸಲಾಗಿದೆ.
ಪ್ಲವ ಸಂವತ್ಸರದ ಮಾಘ ಶುಕ್ಲ ಚತುರ್ದಶಿ ಫೆ. 15ರಂದು ನಡೆಯಲಿದ್ದು, ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಾನ್ನಿಧ್ಯ ನೀಡಲಿದ್ದಾರೆ.
ಫೆ.೧೪ರಂದು ರಥೋತ್ಸವದ ಪೂರ್ವಾಂಗ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 15ರಂದು ಬೆಳಿಗ್ಗೆ ಗಣಪತಿ ಪೂಜಾ, ಅಗ್ರೋದಕಾನಯನಮ್, ಪುಣ್ಯಾಹ, ಲಘ್ವಧಿವಾಸಾದಿ ಹೋಮ ಹವನಗಳು ಜರುಗಲಿವೆ. ವಿಶೇಷವಾಗಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳಿಂದ ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಕಲ್ಪೋಕ್ತ ಸಹಿತ ಪೂಜೆ ಪಂಚಾಮೃತಾಭಿಷೇಕ, ಮಹಾಪೂಜೆ , ಮಹಾಮಂಗಳಾರತಿ ನಡೆಯಲಿದೆ.
ರಾತ್ರಿ ಶ್ರೀ ಶ್ರೀಗಳವರ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಮಹಾರಥೋತ್ಸವ ನಡೆಯಲಿದೆ.
ಎಲ್ಲ ಶಿಷ್ಯ ಭಕ್ತ ಜನರು ಉತ್ಸವದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಪಾಲ್ಗೊಳ್ಳಲು ಶ್ರೀ ಮಠದ ಪ್ರಕಟನೆ ತಿಳಿಸಿದೆ