Advertisement
ಮಾ. 10ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶ್ರೀ ಮೂಕಾಂಬಿಕಾ ಸಭಾ ಭವನ ಕಟ್ಟಡದ ಶಿಲಾನ್ಯಾಸ ಸಮಾರಂಭದ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತಾಯಿ ಮೂಕಾಂಬಿಕೆ ಮಡಿಲಲ್ಲಿ ನಿರ್ಮಾಣಗೊಳ್ಳಲಿರುವ ಸಾಂಸ್ಕೃತಿಕ ಭವನವು ತುಳು ನಾಡಿನ ಸಂಸ್ಕೃತಿಯನ್ನು ಪ್ರಚಾರಪಡಿಸುವ ಭವನವಾಗಿ ಕಂಗೊಳಿಸಲಿ. ಎಲ್ಲರಿಗೂ ತಮ್ಮ ತಮ್ಮ ಭಾಷೆ, ಸಂಸ್ಕಾರವನ್ನು ಉಳಿಸಿ-ಬೆಳೆಸುವಲ್ಲಿ ಇದರ ಸದುಪಯೋಗವಾಗಲಿ. ಮುಂಬಯಿಯಲ್ಲಿ ದಾನಿಗಳಿಗೆ ಕೊರತೆಯಿಲ್ಲ. ಎಲ್ಲ ದಾನಿಗಳು ಈ ಮಹತ್ಕಾರ್ಯದಲ್ಲಿ ಸಹಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಇವರು ಮಾತನಾಡಿ, ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದಗಳೊಂದಿಗೆ ಇಂದು ಶಿಲಾನ್ಯಾಸಗೊಂಡ ಈ ಭವನದ ಕಾರ್ಯವು ತಾಯಿಯ ಗರ್ಭದಿಂದ ಬರುವ ಮಗುವಿನಂತೆ ಒಂಭತ್ತು ತಿಂಗಳೊಳಗೆ ಉತ್ತಮ ಭವನವಾಗಿ ಹೊರಹೊಮ್ಮಲಿ. ದಾನಿಗಳು ಈ ಯೋಜನೆಗೆ ಒಗ್ಗಟ್ಟಿನಿಂದ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.
ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿಗಳಾಗಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಡಿ. ಶೆಟ್ಟಿ, ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ನೆರಲ್ ಶ್ರೀ ಗಣಪತಿ, ಅಯ್ಯಪ್ಪ, ದುರ್ಗಾದೇವಿ ಮಂದಿರದ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಪನ್ವೇಲ್ ನಗರ ಸೇವಕ ಸಂತೋಷ್ ಜಿ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಜೆಕಾರು ಇದರ ಮೊಕ್ತೇಸರ ಶಿವರಾಮ್ ಜಿ. ಶೆಟ್ಟಿ, ಪೆಸ್ಟ್ ಮೋರ್ಟಮ್ ಪ್ರೈವೇಟ್ ಲಿಮಿಟೆಡ್ ಮಾಲಕರಾದ ಜಿ. ಪಿ. ಶೆಟ್ಟಿ, ಹಿರಿಯ ಹೊಟೇಲ್ ಉದ್ಯಮಿ ಅಪ್ಪಣ್ಣ ಶೆಟ್ಟಿ, ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಎಂ. ಬಿ. ಕುಕ್ಯಾನ್, ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಇದರ ಮಾಲಕ ಕೆ. ಎಂ. ಶೆಟ್ಟಿ, ಮುಡಾರು ಹೆನ್ನೊಟ್ಟುಗುತ್ತು ಕರಿಯಣ್ಣ ಶೆಟ್ಟಿ, ಮಹಾರಾಷ್ಟ್ರ ಹೊಟೇಲ್ ಫೆಡರೇಷನ್ ಅಧ್ಯಕ್ಷ ಜಗನ್ನಾಥ್ ಕೆ. ಶೆಟ್ಟಿ, ಉದ್ಯಮಿ ಶೇಖರ್ ಶೆಟ್ಟಿ ಪೊಯ್ಯೊಲೋಡಿ, ಶ್ರೀ ಮೂಕಾಂಬಿಕಾ ಮಂದಿರ ಶಾಹಡ್‌ನ ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ, ಬಂಟರ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ಸಮನ್ವಯಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಆನಂದ ಆರ್ಟ್ಸ್ನ ಶೇಖರ್ ಶೆಟ್ಟಿ ಮಾಳ, ರವಿರಾಜ್ ಮಾತನಾಡಿ ಶುಭ ಹಾರೈಸಿದರು.
ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್ ಎನ್. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಜತೆ ಕೋಶಾಧಿಕಾರಿಯಾಗಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ ವಂದಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಭೂಮಿ ಬಿ. ಸಿ. ರೋಡ್ ಇದರ ಪ್ರಬುದ್ಧ ಕಲಾವಿದರಿಂದ ರಂಗಕಲಾವಿದ, ಚಿತ್ರನಟ ಸುಂದರ್ ರೈ ಮಂದಾರ ಇವರ ಸಾರಥ್ಯದಲ್ಲಿ ಸೇಲೆ ಸುಂದರೆ ತುಳುಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ಭಕ್ತಾಭಿ ಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಶ್ರೀ ಮೂಕಾಂಬಿಕಾ ಕ್ಷೇತ್ರದ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಶಂಕರ್ ಜಿ. ಮೊಲಿ, ಸುಧಾಕರ ಸಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಹರೀಶ್ ಶೆಟ್ಟಿ ಕುರ್ಕಾಲ್, ಹರೀಶ್ ಶೆಟ್ಟಿ ಪಡುಬಿದ್ರೆ, ಹರೀಶ್ ಶೆಟ್ಟಿ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ, ಸತೀಶ್ ಪೂಜಾರಿ, ಪ್ರಭಾಕರ ಆಳ್ವ, ಪದ್ಮನಾಭ ಶೆಟ್ಟಿ, ಸಂತೋಷ್ ಆರ್. ಶೆಟ್ಟಿ ಉಪಸ್ಥಿತರಿದ್ದರು. ದೇವಾಲಯದ ಸಹ ಸಂಸ್ಥೆಗಳಾದ ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು ಸಹಕರಿಸಿದರು.
ಈ ಸಾಂಸ್ಕೃತಿಕ ಭವನವು ಆದಷ್ಟು ಬೇಗನೆ ನಿರ್ಮಾಣಗೊಂಡು ಇಲ್ಲಿ ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಪ್ರಚುರಪಡಿಸಬೇಕು ಮತ್ತು ಸಾಮಾನ್ಯ ಜನತೆಗೆ ಇದರ ಸದುಪಯೋಗ ದೊರೆಯುವಂತಾಗಬೇಕು ಎಂಬುದು ನಮ್ಮ ಉದ್ಧೇಶವಾಗಿದೆ. ನಮ್ಮ ಈ ಯೋಜನೆಗೆ ಎಲ್ಲರೂ ಕೈಜೋಡಿಸಬೇಕು. ತುಳು-ಕನ್ನಡಿಗರು, ದಾನಿಗಳು, ಧಾರ್ಮಿಕ ಚಿಂತಕರು ಒಮ್ಮತ ಮತ್ತು ಒಗ್ಗಟ್ಟಿನಿಂದ ಈ ಯೋಜನೆಯ ಯಶಸ್ಸಿಗೆ ಸಂಪೂರ್ಣ ಬೆಂಬಲ ನೀಡಬೇಕು– ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷರು, ಘನ್ಸೋಲಿ ಶ್ರೀಮೂಕಾಂಬಿಕಾ ಮಂದಿರ ಚಿತ್ರ-ವರದಿ : ಸುಭಾಷ್ ಶಿರಿಯಾ