Advertisement

ಕೃಷ್ಣಾಷ್ಟಮಿ: ಮಕ್ಕಳ ಚಿಕಿತ್ಸೆಗೆ ವೇಷ ಹಾಕಲಿರುವ ರವಿ ಕಟಪಾಡಿ

07:00 AM Sep 12, 2017 | Team Udayavani |

ಉಡುಪಿ: ಕಳೆದ 3 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿವಿಧ ವೇಷ ಧರಿಸಿ, ಬಡ ಮಕ್ಕಳಿಗೆ ನೆರವಾಗುತ್ತಿರುವ ರವಿ ಕಟಪಾಡಿ ಅವರು ಬಳಗದೊಂದಿಗೆ ಸೇರಿ ಈ ಬಾರಿಯೂ 4 ಮಕ್ಕಳ ಚಿಕಿತ್ಸೆಗೆ ನೆರವಾಗುವ ಮಹಾದಾಸೆ ಹೊಂದಿದ್ದಾರೆ. 

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಕೆ. ಅವರು ರವಿ ಮತ್ತು ಫ್ರೆಂಡ್ಸ್‌ ಕಟಪಾಡಿ ಬಳಗವು ಅನಾರೋಗ್ಯದಿಂದ ಬಳಲುತ್ತಿರುವ 4 ಬಡ ಮಕ್ಕಳ ಕುಟುಂಬಕ್ಕೆ ಆರ್ಥಿಕ ಸಹಾಯ ಹಸ್ತ ನೀಡುವ ಉದ್ದೇಶದಿಂದ ಸೆ. 13, 14ರಂದು ಕ್ರಾಂಪಸ್‌ ವೇಷ ತೊಟ್ಟು ಹಣ ಸಂಗ್ರಹಿಸಲು ಮುಂದಾಗಿದೆ. ಸೆ.13, ಬೆಳಗ್ಗೆ 7 ಗಂಟೆಗೆ ಗ್ರಾಂಪಸ್‌ ವೇಷದೊಂದಿಗೆ ಕಟಪಾಡಿಯಿಂದ ಹೊರಡಲಿದ್ದೇವೆ. 

ಕಟಪಾಡಿ, ಮಲ್ಪೆ, ಪಡುಕೆರೆ, ಉದ್ಯಾವರ, ಉಡುಪಿ, ನಿಟ್ಟೂರು, ರಾಜಾಂಗಣದಲ್ಲಿ ಪ್ರದರ್ಶನ ನೀಡಿ, ಸಂಗ್ರಹವಾಗುವ ಹಣವನ್ನು ಮಕ್ಕಳಿಗೆ ನೀಡಲಿದ್ದೇವೆ ಎಂದರು.

ಮೂಡುಬಿದಿರೆಯ ದರೆಗುಡ್ಡೆ – ಪಣಪಿಲ ಪುನಿಕೆಬೆಟ್ಟುವಿನ ಒಂದೂವರೆ ವರ್ಷದ ಲಾವಣ್ಯ, ಶಿವಮೊಗ್ಗದ ಶಾಹೀನಾ ಅವರ ಪುತ್ರಿ ಮೆಹಕ್‌ ಜಿ, ಉಡುಪಿ ದೆಂದೂರುಕಟ್ಟೆಯ ಸುನೀತಾ ಪ್ರಕಾಶ್‌ ಅವರ ಒಂದುವರೆ ತಿಂಗಳಿನ ಮಗು ಹಾಗೂ ಬನ್ನಂಜೆಯ ಎಳೆಯ ಮಗುವಿಗೆ ಆರ್ಥಿಕ ಸಹಾಯ ಹಸ್ತ ನೀಡಲಿದ್ದಾರೆ.

ಈ ವೇಷಕ್ಕಾಗಿ ನನ್ನ 75ಕ್ಕೂ ಅಧಿಕ ಸ್ನೇಹಿತರು ದುಡಿಯುತ್ತಿದ್ದು, ಸಂಗ್ರಹವಾದ ಹಣವನ್ನು ಸಮನಾಗಿ ಹಂಚಿ ನಾಲ್ವರು ಮಕ್ಕಳ ಚಿಕಿತ್ಸೆಗೆ ನೀಡಲಿದ್ದೇವೆ. ಸೆ. 19ರ ಸಂಜೆ 4 ಗಂಟೆಗೆ ಕಟಪಾಡಿ ವಿಜಯ ಬ್ಯಾಂಕಿನ ಬಳಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಶ್ರೀಪಾದರು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹಾಗೂ ಎಸ್ಪಿ ಡಾ| ಸಂಜೀವ್‌ ಎಂ. ಪಾಟೀಲ್‌ ಭಾಗವಹಿಸಲಿದ್ದಾರೆ ಎಂದರು.

Advertisement

ನೀವು ನೆರವು ನೀಡಬಹುದು ಆರೋಗ್ಯ ಸಮಸ್ಯೆಯಿಂದ ಬಳಲು ತ್ತಿರುವ ಮಕ್ಕಳ ಚಿಕಿತ್ಸೆ ವೆಚ್ಚಕ್ಕಾಗಿ ವೇಷ ಹಾಕುವ ರವಿ ಕೆ. ಅವರ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸುವ ದಾನಿಗಳು ಪಾಂಗಾಳ ವಿಜಯ ಬ್ಯಾಂಕಿನ ಎಸ್‌ಬಿ ಖಾತೆ: 117206331000013 (ಐಎಫ್‌ಎಸ್‌ಸಿ ಕೋಡ್‌: VIGB 0001172) ಗೆ ಜಮಾ ಮಾಡಬಹುದು. 
ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ದಯಾನಂದ, ಸುಧೀಶ್‌, ಚರಣ್‌ರಾಜ್‌, ಅರುಣ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next