ತೆಕ್ಕಟ್ಟೆ: ಪ್ರಪಂಚದಲ್ಲಿ ಭಾರತಕ್ಕೆ ಅತ್ಯಂತ ಪೂಜ್ಯವಾದ ಸ್ಥಾನಮಾನವಿದೆ. ಈ ನಿಟ್ಟಿನಲ್ಲಿ ಸನಾತನ ಸಂಸ್ಕೃತಿಯ ಉಳಿವಿಗಾಗಿ ಶ್ರದ್ಧಾ ಕೇಂದ್ರಗಳು ನಿರ್ಮಾಣವಾಗಿವೆ ಎಂದು ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ನುಡಿದರು.
ಅವರು ಶುಕ್ರವಾರದಂದು ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಥಮ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೀರ್ತಿಶೇಷ ಶ್ರೀಮತಿ ಗೌರಮ್ಮ ಮತ್ತು ಮಂಜುನಾಥ ಶೇರೆಗಾರ ವೇದಿಕೆ ಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚಿಸಿದರು. ಪಯ್ಯನ್ನೂರಿನ ಜ್ಯೋತಿಷಿ ಎ. ವಿ. ಮಾಧವನ್ ಪುದುವಾಳ್ ಮಾತನಾಡಿದರು.
ದೇಗುಲದ ಧರ್ಮದರ್ಶಿ ದೇವರಾಯ ಎಂ. ಶೇರೆಗಾರ್ ಹಾಗೂ ಅನಿತಾ ದಂಪತಿ, ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಪುರುಷೋತ್ತಮ್ ಭಟ್ ಮುಂಬಯಿ, ಶ್ರೀಧರ ಉಪಾಧ್ಯಾಯ, ಅನಂತ ಪುರಾಣಿಕ್, ಗಣ್ಯರಾದ ಪದ್ಮನಾಭ ಕೊರ್ನಾಯ, ವಿಶುಕುಮಾರ್ ಶೆಟ್ಟಿಬಾಲ್, ಶ್ರೀರಮಣ ಉಪಾಧ್ಯಾಯ, ನಾಗರಾಜ ಕಾಮಧೇನು, ಗೋಪಾಲಕೃಷ್ಣ ಶೆಟ್ಟಿ, ಬಿ.ವಿ.ಶೇರೆಗಾರ, ಬಿಜೂರು ರಾಮಕೃಷ್ಣ ಶೇರೆಗಾರ, ಪಿ.ಸುರೇಶ್ ಪೈ, ಕೊಳಲಗಿರಿ, ಮಧುಕರ ನಾಯ್ಕಮಿಥುನ್ ಡಿ. ಶೇರೆಗಾರ್ ಉಪಸ್ಥಿತರಿದ್ದರು. ದೇವರಾಯ ಎಂ.ಶೇರೆಗಾರ್ ಸ್ವಾಗತಿಸಿ, ರಾಜಶೇಖರ್ ಹೆಗ್ಡೆ ಹಾಗೂ ಶಿಕ್ಷಕಿ ಜಯಶೀಲ ಪೈ ಕುಂಭಾಸಿ ನಿರೂಪಿಸಿ,ವಂದಿಸಿದರು.
ಮಾತನಾಡುವ ತಾಯಿ ಜಗನ್ಮಾತೆ
ಜಗನ್ಮಾತೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರೀ ನಂಬಿ ಬಂದ ಭಕ್ತರ ಇಷ್ಟಾರ್ಥವನ್ನು ಸಿದ್ಧಿಸಿದ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಮಾತನಾಡುವ ಜಗನ್ಮಾತೆ ತಾಯಿಯ ಪ್ರೇರಣೆಯಿಂದ ದೇಗುಲಕ್ಕೆ ಅದೆಷ್ಟೋ ಭಕ್ತಸಮೂಹಗಳು ತಮ್ಮ ಅನಿಸಿಕೆ ಯನ್ನು ದಾಖಲೀಕರಿಸಿದ್ದಾರೆ.
– ದೇವರಾಯ ಎಂ. ಶೇರೆಗಾರ್,
ದೇಗುಲದ ಧರ್ಮದರ್ಶಿಗಳು