ಹಾಸನ: ಸಂಸದ ಪ್ರಜ್ವಲ್ ಪ್ರಕರಣದಲ್ಲಿ ಪೆನ್‌ಡ್ರೈವ್ ಹಂಚಿದ್ದಾರೆನ್ನಲಾದ ಆರೋಪಿಗಳಿಗೂ ನಮಗೂ ಸಂಬಂಧವಿಲ್ಲ, ಅವರ ಪರಿಚಯವೇ ಇಲ್ಲ ಎಂದು ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳುತ್ತಿದ್ದರು. ಆದರೆ ಈಗ ಆರೋಪಿಗಳ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆರೋಪಿಗಳಾದ ಕಾರ್ತಿಕ್, ಪುಟ್ಟರಾಜು ಅವರೊಂದಿಗೆ ಶ್ರೇಯಸ್ ಇರುವ ಫೋಟೋಗಳು ವೈರಲ್ ಆಗುತ್ತಿದ್ದು, ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋ ಪಕ್ಕೆ ಆ ಫೋಟೋಗಳು ಸಾಕ್ಷಿಯಾದಂತಿವೆ.
ಕಾರ್ತಿಕ್, ಪುಟ್ಟರಾಜು ಸಹಿತ ನಾಲ್ಕೈದು ಮಂದಿ ವಿರುದ್ಧ ಹಾಸನದ ಸಿಇಎನ್ ಕ್ರೈಂ ಬ್ರಾಂಚ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆರೋ ಪಿಗಳ ಜತೆ ಶ್ರೇಯಸ್ ಪಟೇಲ್ ಅವರಿರುವ ಫೋಟೋಗಳು ವೈರಲ್ ಆಗಿದ್ದು, ಅಶ್ಲೀಲ ಪೆನ್‌ಡ್ರೈವ್‌ಗಳ ಹಂಚಿಕೆಗೆ ಶ್ರೇಯಸ್ ಪಟೇಲ್ ಅವರೂ ಕುಮ್ಮಕ್ಕು ನೀಡಿ ದ್ದಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದರುವ ಶ್ರೇಯಸ್ ಪಟೇಲ್, ಪಿತೃಪಕ್ಷದ ಹಬ್ಬಕ್ಕೆ ಪುಟ್ಟರಾಜು ಮನೆಗೆ ಊಟಕ್ಕೆಂದು ಹೋಗಿದ್ದಾಗ ಕಾರ್ತಿಕ್ ಕೂಡ ಬಂದಿದ್ದ. ಆ ಸಂದರ್ಭದಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋಗಳನ್ನು ಈಗ ವೈರಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.