ಮೃತ ವಿದ್ಯಾರ್ಥಿಯನ್ನು ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಕಲಿಯುತ್ತಿರುವ ಶ್ರೇಯಸ್ ರೆಡ್ಡಿ ಬೆನಿಗರ್ ಎಂದು ಹೇಳಲಾಗಿದೆ.
Advertisement
ಘಟನೆ ಬಗ್ಗೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ದುಃಖ ವ್ಯಕ್ತಪಡಿಸಿದ್ದು ಬೇನಿಗರ್ ಅವರ ಸಾವಿನ ರಹಸ್ಯವನ್ನು ಭೇದಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದೆ.
ಈ ವಾರದ ಆರಂಭದಲ್ಲಿ, ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಭಾನುವಾರದಿಂದ ನೀಲ್ ನಾಪತ್ತೆಯಾಗಿದ್ದರು ಇದಾದ ಗಂಟೆಗಳ ನಂತರ, ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ನೀಲ್ ಶವ ಪತ್ತೆಯಾಗಿತ್ತು.
Related Articles
Advertisement
ಮೂರನೇ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಈ ವರ್ಷದ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ (ಯುಐಯುಸಿ) ಹೊರಗೆ ಶವವಾಗಿ ಪತ್ತೆಯಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Champai Soren: ಇಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪೈ ಸೋರೆನ್ ಪ್ರಮಾಣ ವಚನ