ನಂದಕಿಶೋರ್ ನಿರ್ದೇಶನದ, ಯಸ್ ಮಂಜು ನಾಯಕನಾಗಿ ಅಭಿನಯಿಸುರುವ “ರಾಣ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. “ಗುಜ್ಜಲ್ ಟಾಕೀಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರಾಣ’ ಚಿತ್ರಕ್ಕೆ ಗುಜ್ಜಲ್ ಪುರುಷೋ ತ್ತಮ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
“ರಾಣಾ’ ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಶ್ರೇಯಸ್, “ಈ ಹಿಂದಿನ ನನ್ನ ಎರಡು ಸಿನಿಮಾಗಳಿಗಿಂತ ವಿಭಿನ್ನ ಪಾತ್ರ “ರಾಣ’ ಸಿನಿಮಾದಲ್ಲಿದೆ. ಯಾವುದಕ್ಕೂ ಹೆದರದ, ತುಂಬ ಅಗ್ರೆಸಿವ್ ಆಗಿರುವಂಥ ಹುಡುಗನ ಕ್ಯಾರೆಕ್ಟರ್ ಈ ಸಿನಿಮಾದಲ್ಲಿದೆ. ತುಂಬ ಒಳ್ಳೆಯ ಸಬ್ಜೆಕ್ಟ್ ತ್ತು ಕಂಟೆಂಟ್ ಇರುವುದರಿಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ ಎಂಬ ಭರವಸೆಯಿದೆ. ಸಿನಿಮಾದಲ್ಲಿ ಆ್ಯಕ್ಷನ್‌ಗೆ ತುಂಬ ಮಹತ್ವವಿದೆ. ಆ್ಯಕ್ಷನ್ ಸೀನ್ಸ್‌ಗಾಗಿ ತುಂಬ ಹೋಂವರ್ಕ್ ಮಾಡಿಕೊಳ್ಳುತ್ತಿದ್ದೇನೆ. ಒಂದು ಸಿನಿಮಾದಲ್ಲಿ ಇರಬೇಕಾದ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ’ ಎಂದರು.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ನಂದಕಿಶೋರ್, ” ಸಿನಿಮಾದ ಟೈಟಲ್ಲೇ ಹೇಳುವಂತೆ ಇದೊಂದು ಮಾಸ್ ಕಂಟೆಂಟ್ ಇರುವಂಥ ಆ್ಯಕ್ಷನ್ ಸಿನಿಮಾ. ಸಾಮಾನ್ಯ ಹುಡುಗನೊಬ್ಬ ತನ್ನ ಗುಣ, ಸ್ವಭಾವದಿಂದ ಏನೇನು ಮಾಡಬಲ್ಲ, ಏನಾಗಬಲ್ಲ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಶ್ರೇಯಸ್‌ಗೆ ತಕ್ಕಂಥ ಕಥೆ ಈ ಸಿನಿಮಾದಲ್ಲಿದೆ. ಉಳಿದಂತೆ ಲವ್, ಸೆಂಟಿ ಮೆಂಟ್, ಎಮೋಶನ್ಸ್, ಕಾಮಿಡಿ ಹೀಗೆ ಎಲ್ಲ ಥರದ ಎಲಿಮೆಂಟ್ಸ್ “ರಾಣ’ದಲ್ಲಿದೆ’ ಎಂದರು.
ಇನ್ನು ಚಿತ್ರೀಕರಣದ ಬಗ್ಗೆ ಮಾತನಾಡಿದ ನಂದಕಿಶೋರ್, “ಇದೇ ಜುಲೈ ಮಧ್ಯ ಭಾಗದಿಂದ “ರಾಣ’ ಶೂಟಿಂಗ್ ಶುರುವಾಗಲಿದೆ. ಮೊದಲು ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿ, ಆನಂತರ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ಶೂಟಿಂಗ್ ನಡೆಸುವ ಪ್ಲಾನ್ ಹಾಕಿಕೊಂಡಿದ್ದೇವೆ. ಇಡೀ ಸಿನಿಮಾವನ್ನ 40-45 ದಿನದ ಶೂಟಿಂಗ್ ಮಾಡಿ ಮುಗಿಸ ಬೇಕೆಂದು ಕೊಂಡಿದ್ದೇವೆ. ಆದಷ್ಟು ಹೊಸ ಕಲಾವಿದರಿಗೆ ಸಿನಿಮಾದಲ್ಲಿ ಹೆಚ್ಚಿನ ಅವಕಾಶ ಕೊಡುತ್ತಿದ್ದೇವೆ. 100 ದಿನದಲ್ಲಿ ಸಿನಿಮಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಸ್ ಮುಗಿಸಿ ಫಸ್ಟ್‌ಕಾಪಿ ಹೊರಗೆ ತರಬೇಕೆಂಬ ಯೋಚನೆ ಇದೆ’ ಎಂದು ಮಾಹಿತಿ ನೀಡಿದರು.
ಇನ್ನು “ರಾಣ’ ಚಿತ್ರದಲ್ಲಿ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ, ರಜನಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ದೇಹದಾಡ್ಯ ಪಟು ರಾಘವೇಂದ್ರ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಈ ಮೂವರು ಕಲಾವಿದರು “ರಾಣ’ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ವಿಭಿನ್ನ ಸಿನಿಮಾವಾಗಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್, ಕೆ. ಮಂಜು ಚಿತ್ರದ ಬಗ್ಗೆ ಮಾತನಾಡಿದರು.