Advertisement

ಗೋ ಜಾಗೃತಿಗೆ ಮುನ್ನುಡಿ ಬರೆದಿದ್ದು ಶ್ರೀಮಠ

05:38 PM Mar 12, 2022 | Kavyashree |

ಹೊಸನಗರ: ವಿಶಿಷ್ಟ ಕಾರ್ಯಕ್ರಮದ ಮೂಲಕ ಗೋಜಾಗೃತಿಗೆ ಮುನ್ನುಡಿ ಬರೆದಿದ್ದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠ. ಇದೀಗ ವಿಶ್ವದ ಎಲ್ಲೆಡೆ ಗೋ ಮಂತ್ರ ಮೊಳಗುತ್ತಿದೆ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.

Advertisement

ಶ್ರೀಮಠದ ಗೋವರ್ಧನ ಗಿರಿಧಾರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 11 ದೇಶಗಳ ಜನರನ್ನು ಒಳಗೊಂಡಂತೆ ನಡೆದ ವಿಶ್ವ ಗೋಸಮ್ಮೇಳನ, ಒಂದೂವರೆ ಕೋಟಿ ಹಸ್ತಾಕ್ಷರಹೊಂದಿದ ವಿಶ್ವ ಮಂಡಲ ಗೋ ಗ್ರಾಮಯಾತ್ರೆ, ರತ್ನಾಕ್ಷರ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಶ್ರೀಮಠ ಸಾಕ್ಷಿಯಾಗಿದೆ.

ನಂತರ ಗೋಜಾಗೃತಿ ಕಾಡ್ಗಿಚ್ಚಿನಂತೆ ವಿಶ್ವದೆಲ್ಲಡೆ ಪಸರಿಸಿ ಎಲ್ಲೆಲ್ಲೋ ಗೋಸಂರಕ್ಷಣಾ ಮಂತ್ರ ಮೊಳಗುತ್ತಿದೆ. ಹೊಸ ಕಲ್ಪನೆಯೊಂದಿಗೆ ಗೋಸ್ವರ್ಗ ಚಾಲನೆಗೆ ತರಲಾಗಿದೆ. ಇದೀಗ ಗೋಸ್ವರ್ಗ ಮಾಡಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ ಎಂದರು.

ಕೃಷ್ಣರ್ಪಾಣಮ್‌ ವಿಶೇಷತೆ: ಶ್ರೀಮಠದಲ್ಲಿ ಗೋವರ್ಧನ ಗಿರಿದಾರಿ ದೇಗುಲ ನಿರ್ಮಾಣ ಮಾಡಿ ಕೃಷ್ಣನಿಗೆ ಅರ್ಪಿಸಿದ ದಿನವನ್ನು ವಿಶೇಷವಾಗಿ ಕೃಷ್ಣಾರ್ಪಣಮ್‌ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಹೊಸನಗರದ ಹಸುರಿನ ಪರಿಸರಕ್ಕೆ ಕಳಶಪ್ರಾಯವಾಗಿ ದೇಗುಲ ರೂಪುಗೊಳ್ಳುತ್ತಿದೆ. ರಾಜ್ಯ, ದೇಶ ಮಾತ್ರವಲ್ಲದೆ ವಿಶ್ವದ ಮೂಲೆ- ಮೂಲೆಯಿಂದ ಗೋ ಭಕ್ತರು ಇಲ್ಲಿಗೆ ಬರಬೇಕು ಎಂದರು.

ಇನ್ನು ಮೂಲ ಮಠ ಹೊಸನಗರದಲ್ಲಿದ್ದು ಶ್ರೀ ರಾಮಸತ್ರಾ, ವಿಶ್ವ ಗೋ ಸಮ್ಮೇಳನ ಸೇರಿದಂತೆ ಯಶಸ್ವಿ ಕಾರ್ಯಕ್ರಮ ಸಂಘಟಿಸಿದ ನಂತರ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿಲ್ಲಎಂಬ ಕೊರಗು ಇಲ್ಲಿದೆ. ಆದರೆ ಕಾರ್ಯಕ್ರಮಗಳು ಕಡಿಮೆಯಾಗಿರಬಹುದು ಆದರೆ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರ ದೇಗುಲ ಮತ್ತು ವಿಶಿಷ್ಠ ವಿನ್ಯಾಸದಲ್ಲಿ ನಿರ್ಮಾಣಗೊಳ್ಳಲಿರುವ ಗೋಲೋಕ ಈ ಭಾಗವನ್ನು ಪ್ರವಾಸಿ ತಾಣವಾಗಿ ರೂಪಿಸಲಿದೆ. ಅಲ್ಲದೆ ಉತ್ತಮ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮೂಲಮಠದಲ್ಲಿ ಸಂಘಟಿಸುವ ಚಿಂತನೆ ಇದೆ ಎಂದರು.

Advertisement

ಯೋಗಿ ಆದಿತ್ಯನಾಥ ಪಿಎಂಗೆ ಅರ್ಹ ವ್ಯಕ್ತಿ: ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಸಿಎಂ ಯೋಗಿ ಆದಿತ್ಯನಾಥ್‌ ಮುಂದೊಂದು ದಿನ ಈ ದೇಶವನ್ನು ಆಳುತ್ತಾರೆ. ನೂರಕ್ಕೆ ನೂರು ಸಿಎಂ ಆಗುವುದು ಖಚಿತ ಎಂದರು. ಅವರಲ್ಲಿ ಭವ್ಯ ಭಾರತವನ್ನು ಕಟ್ಟುವ ಕಾಳಜಿಯೂ ಇದೆ. ಶಕ್ತಿಯೂ ಇದೆ. ಅವರ ಆಡಳಿತ ಪಕ್ಷಾತೀತವಾಗಿ ಮೆಚ್ಚುಗೆ ಗಳಿಸಿದೆ. ಉತ್ತರ ಪ್ರದೇಶದ ಗತಿಯೇ ಬದಲಾಗಿದೆ. ಝಾನ್ಸಿ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಬಂದೂಕು ಹಿಡಿದು ಸಾಗುವ ಜನರ ಸಾಲು ಕಂಡು ಬರುತ್ತಿತ್ತು. ಆದರೆ ಯೋಗಿ ಆದಿತ್ಯನಾಥ ರಾಜ್ಯದ ಚಿತ್ರಣವನ್ನೇ ಬದಲಿಸಿದ್ದಾರೆ. ಅವರು ಸನ್ಯಾಸಿ- ಸಂತ ಸಮುದಾಯಕ್ಕೆ ಭೂಷಣ ಎಂದು ಹೊಗಳಿದರು.

ರಾಜಕೀಯ ನನ್ನ ಕ್ಷೇತ್ರವಲ್ಲ: ಯೋಗಿ ಆದಿತ್ಯನಾಥರ ಯಶಸ್ಸು ನಿಮ್ಮನ್ನು ರಾಜಕೀಯಕ್ಕೆ ಸೆಳೆಯುತ್ತದಾ ಎಂಬ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ರಾಘವೇಶ್ವರ ಸ್ವಾಮೀಜಿ, ಖಂಡಿತಾ ಇಲ್ಲ. ನಮ್ಮ ಗುರು ಪರಂಪರೆ, ಸಂಪ್ರದಾಯ ಮತ್ತು ನಿತ್ಯ ಪೂಜೆಯ ಕಾಯಕಗಳು ಬಹಳಷ್ಟಿದೆ. ಅದರಲ್ಲೂ ನಮ್ಮ ದಾರಿಯೇ ಬೇರೆ ಇದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next